Shivrajkumar: 'ಪೆದ್ದಿ' ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣನ ದರ್ಬಾರ್: 'ಗೌರನಾಯ್ಡು' ಪಾತ್ರದ ಖಡಕ್ ಲುಕ್‌ ರಿವೀಲ್‌

ಟಾಲಿವುಡ್‌ ನಟ ರಾಮ್ ಚರಣ್ ನಟನೆಯ ಬಿಗ್ ಬಜೆಟ್ ಸಿನಿಮಾ 'ಪೆದ್ದಿ' ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಅಧಿಕೃತವಾಗಿ ಆರಂಭಿಸಿದೆ. ಪ್ರಚಾರದ ಮೊದಲ ಭಾಗವಾಗಿ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಇದರ ಅಂಗವಾಗಿ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕನ್ನಡದ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಅವರ ಪಾತ್ರದ ಪೋಸ್ಟರ್ ಹಾಗೂ ವಿಶೇಷ ವಿಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕುಸ್ತಿ ಅಖಾಡದಲ್ಲಿ ಹ್ಯಾಟ್ರಿಕ್ ಹೀರೋ

ಚಿತ್ರದಲ್ಲಿ ಶಿವಣ್ಣ ಅವರು 'ಗೌರನಾಯ್ಡು' ಎಂಬ ಅತ್ಯಂತ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಿರುವ ವಿಶೇಷ ಗ್ಲಿಂಪ್ಸ್ ವಿಡಿಯೋದಲ್ಲಿ ಶಿವಣ್ಣ ಅವರು ಕುಸ್ತಿ ಅಖಾಡದಲ್ಲಿ ಇತರ ಕುಸ್ತಿಪಟುಗಳಿಗೆ ತರಬೇತಿ ನೀಡುವ ಹಾಗೂ ಮೇಲ್ವಿಚಾರಣೆ ಮಾಡುವ ಇನ್‌ಸ್ಟ್ರಕ್ಟರ್ (ಗುರು) ಪಾತ್ರದಲ್ಲಿ ಅತ್ಯಂತ ತೇಜಸ್ಸು ಮತ್ತು ಗಾಂಭೀರ್ಯದಿಂದ ಕಾಣಿಸಿಕೊಂಡಿದ್ದಾರೆ.

Shivrajkumar

ಮತ್ತೊಂದೆಡೆ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಶಿವಣ್ಣ ಅವರು ಮರದ ಕುರ್ಚಿಯೊಂದರ ಮೇಲೆ ಕುಳಿತಿದ್ದು, ತಿಳಿ ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದಾರೆ. ಕೈಬೆರಳುಗಳಲ್ಲಿ ಸಾಲು ಸಾಲು ಉಂಗುರಗಳು ಹಾಗೂ ದಪ್ಪನೆಯ ಮೀಸೆಯೊಂದಿಗೆ, ತಮ್ಮ ಗುಂಪಿಗೆ ಮುಖ್ಯಸ್ಥನಾಗಿ ಇಡೀ ಅಖಾಡವನ್ನು ನಿಯಂತ್ರಿಸುವ ಖಡಕ್ ಲುಕ್‌ನಲ್ಲಿ ಕಣ್ಮನ ಸೆಳೆದಿದ್ದಾರೆ. ಜೊತೆಗೆ ಚಿತ್ರೀಕರಣದ ಸೆಟ್‌ನಲ್ಲಿ ರಾಮ್ ಚರಣ್ ಹಾಗೂ ಚಿತ್ರತಂಡ ಶಿವಣ್ಣ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

Chaithra Achar: ನಟಿ ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್: ಖಾಕಿ ಧರಿಸಿದ ಕಾಮುಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು
Chaithra Achar: ನಟಿ ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್: ಖಾಕಿ ಧರಿಸಿದ ಕಾಮುಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು

ವೆಂಕಟ ಸತೀಶ್ ಕಿಲ್ಲಾರು ಅವರು 'ವೃದ್ಧಿ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳು ಪ್ರಸ್ತುತಪಡಿಸುತ್ತಿವೆ. ಚಿತ್ರದ ದೃಶ್ಯ ವೈಭವವನ್ನು ಅದ್ದೂರಿಯಾಗಿ ಮೂಡಿಸಲಾಗುತ್ತಿದ್ದು, ಇಡೀ ಭಾರತೀಯ ಚಿತ್ರರಂಗವೇ ಎದುರುನೋಡುತ್ತಿರುವ 'ಪೆದ್ದಿ' ಚಿತ್ರದ ಥಿಯೇಟ್ರಿಕಲ್ ಟ್ರೈಲರ್ ಅನ್ನು ಮೇ 18ರಂದು ಮುಂಬೈನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ದಿನಾಂಕ ನಿಗದಿಪಡಿಸಿದೆ.

ಸಿನಿಮಾ ರಿಲೀಸ್‌ ಯಾವಾಗ?

ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನವಿದ್ದು, ಆರ್.ರತ್ನವೇಲು ಅವರ ಛಾಯಾಗ್ರಹಣವಿದೆ. ಅವಿನಾಶ್ ಅವರ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ನವೀನ್ ನೂಲಿ ಈಗಾಗಲೇ ಚಿತ್ರದ ಎಡಿಟಿಂಗ್ ಕಾರ್ಯವನ್ನು ಮುಗಿಸಿದ್ದು, ಫೈನಲ್ ಕಟ್ ಲಾಕ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿದ್ದರೆ, ಶಿವರಾಜ್‌ಕುಮಾರ್ ಜೊತೆಗೆ ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬರುವ ಜೂನ್ 4ರಂದು 'ಪೆದ್ದಿ' ಸಿನಿಮಾ ಪ್ರಪಂಚದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಜೂನ್ 3ರಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+