ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year End Special: 2022ರಲ್ಲಿ ಕೊರೊನಾವೈರಸ್ ಕಲಿಸಿದ ಆರೋಗ್ಯದ ಪಾಠಗಳಿವು

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಭಾರತವಷ್ಟೇ ಅಲ್ಲದೇ ಇಡೀ ಜಗತ್ತಿನ ಜನರಿಗೆ ಆರೋಗ್ಯದ ಪಾಠಗಳನ್ನು ಕಲಿಸಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಸ್ವಚ್ಛತೆ ಮತ್ತು ಶುಭ್ರತೆಯ ಮೂಲಕ ಜನರು ಈಗ ಆರೋಗ್ಯವೇ ಭಾಗ್ಯ ಎನ್ನುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಅನೇಕರು ಕೊರೊನಾವೈರಸ್ ಸೋಂಕಿನಿಂದ ರೋಗಗಳಿಗೆ ಬಲಿಯಾಗಿದ್ದಾರೆ. ಕೋವಿಡ್-19 ನಾವು ಯೋಚಿಸುವ ವೈಖರಿ, ಬದುಕುವ ಪರಿ ಮತ್ತು ಆದ್ಯತೆಯ ವಿಷಯಗಳನ್ನೇ ಬದಲಾಯಿಸಿದೆ. ಕಾಲಾನಂತರದಲ್ಲಿ, ಜನರು ಜೀವನದ ಅರ್ಥವನ್ನು ಚೆನ್ನಾಗಿ ಕಲಿತಿದ್ದಾರೆ. ಕರೊನಾವೈರಸ್ ಹೇಗೆ ಬದುಕಬೇಕು ಎಂಬ ಜನರ ಗ್ರಹಿಕೆಯನ್ನೇ ಬದಲಾಯಿಸಿದೆ. ನಾವು ಜೀವನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದೇವೆ, ಅದು ಯಾವುದೇ ಸಮಯದಲ್ಲಿ ಕೊನೆಗೊಳ್ಳಬಹುದು ಎಂದು ತಿಳಿದಿದ್ದೇವೆ.

ಜೀವನ ಮುಖ್ಯ, ಕೆಲಸ ಮುಖ್ಯ ಎಂದು ಸಾಗುತ್ತಿದ್ದ ಜನರಿಗೆ ಕೆಲಸ ಹಾಗೂ ಜೀವನದ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳುವ ಪಾಠವನ್ನೇ ಕೊರೊನಾವೈರಸ್ ಕಲಿಸಿದೆ. ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಮುಖ ಮಾಡಲು ಜನರು ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಂಡರು?, ಹೊಸ ಬದಲಾವಣೆಗಳಿಗೆ ಹೇಗೆ ಒಗ್ಗಿಕೊಂಡರು? ಆರೋಗ್ಯದ ಬಗ್ಗೆ ಯಾವ ರೀತಿ ಜಾಗೃತಿ ವಹಿಸಿದರು? ಎಂಬುದರ ಜೊತೆಗೆ ಕೊರೊನಾವೈರಸ್ ಕಲಿಸಿ ಹೋಗಿರುವ ಪಾಠವನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ಕೈಗಳನ್ನು ಶುಭ್ರವಾಗಿ ತೊಳೆಯುವುದು

ಕೈಗಳನ್ನು ಶುಭ್ರವಾಗಿ ತೊಳೆಯುವುದು

ಎರಡು ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಕಡ್ಡಾಯ ಮುನ್ನೆಚ್ಚರಿಕೆಯಾಗಿ ಪ್ರಾರಂಭವಾದದ್ದು ನಮ್ಮ ಜೀವನದ ಭಾಗವಾಯಿತು. ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಮ್ಮೆ ತಿಳಿಯದೆಯೂ ಕೈತೊಳೆದುಕೊಳ್ಳಲು ಪ್ರಾರಂಭಿಸಿದ್ದೇವೆ, ಇದು ಉತ್ತಮ ಅಭ್ಯಾಸವಾಗಿದೆ. ವಿಶೇಷವಾಗಿ ನಾವು ಹೊರಗಿನಿಂದ ಹಿಂತಿರುಗಿದಾಗ, ನಾವು ಹೊತ್ತೊಯ್ಯಬಹುದಾದ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ಬಗ್ಗೆ ಜಾಗರೂಕರಾಗಿದ್ದೇವೆ. ಭಾರತದ ಬಹುತೇಕ ಭಾಗಗಳಲ್ಲಿ ನಮ್ಮ ಕೈಯಿಂದ ತಿನ್ನುವ ಸಂಸ್ಕೃತಿ ಇದೆ. ತಿನ್ನುವ ಮೊದಲು, ಸಾಬೂನಿನಿಂದ ಕೈಗಳನ್ನು ತೊಳೆಯುವುದು ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಡ್ಡಾಯವಾಗಿದೆ.

ಕಡ್ಡಾಯವಾಗಿ ಮಾಸ್ಕ್ ಧರಿಸುವುದು

ಕಡ್ಡಾಯವಾಗಿ ಮಾಸ್ಕ್ ಧರಿಸುವುದು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮಾಸ್ಕ್‌ಗಳು ಮೌಲ್ಯವನ್ನು ಸಾರಿ ಹೇಳಿದೆ. ಸಾಮಾನ್ಯವಾಗಿ ಮಾಸ್ಕ್‌ಗಳು ವೈರಸ್‌ಗಳಿಂದ ನಮ್ಮನ್ನು ರಕ್ಷಿಸುವುದಿಲ್ಲ, ಆದರೆ ಗಾಳಿಯಲ್ಲಿ ಮಾಲಿನ್ಯಕಾರಕಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಕ್ಟೋಬರ್‌ನಲ್ಲಿ ದೀಪಾವಳಿ ಮತ್ತು ಚಳಿಗಾಲವು ವಾತಾವರಣದಲ್ಲಿನ ಗಾಳಿ ಮಲೀನಗೊಳ್ಳುತ್ತದೆ. ದೆಹಲಿ NCR ಎದುರಿಸುತ್ತಿರುವ ಸಂಕಟ ಮತ್ತು ಮಾಲಿನ್ಯದ ದೃಷ್ಟಿಯಲ್ಲಿ ನಾವೆಲ್ಲರೂ ಪಾಠ ಕಲಿಸಿದ್ದು ಆಗಿದೆ. ಇದರ ಜೊತೆಗೆ ಕೋವಿಡ್ ಇದ್ದರೂ ಇಲ್ಲದಿದ್ದರೂ ದೈನಂದಿನ ಜೀವನಕ್ಕೆ ಮಾಸ್ಕ್‌ಗಳು ಕಡ್ಡಾಯವೆಂದು ಜನರು ಕಲಿತಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ವರ್ಕೌಟ್

ಆರೋಗ್ಯದ ದೃಷ್ಟಿಯಿಂದ ವರ್ಕೌಟ್

ನಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ ನಾವು ಯಾವುದೇ ವೈರಸ್ ಅಥವಾ ಯಾವುದೇ ರೋಗವನ್ನು ಎದುರಿಸಲು ಅಗತ್ಯವಿರುವ ಪ್ರತಿರಕ್ಷೆಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯು ನಾವು ಒಡ್ಡಿಕೊಳ್ಳುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ತಮ ಆಹಾರಕ್ರಮವನ್ನು ನಡೆಸುವುದು ಮುಖ್ಯವಾಗಿದೆ.

ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ ಮತ್ತು ತಂಬಾಕು ಸೇವನೆ ಮತ್ತು ಧೂಮಪಾನವು ಅತ್ಯಂತ ಹಾನಿಕಾರಕವಾಗಿದೆ. ಅವು ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹಾಳುಮಾಡುತ್ತವೆ. ಜನರ ಶ್ವಾಸಕೋಶದ ಅಸ್ವಸ್ಥತೆಗಳು, ಯಕೃತ್ತಿನ ಸಮಸ್ಯೆಗಳು ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಸಹ ಉಂಟು ಮಾಡುತ್ತದೆ. ಆರೋಗ್ಯಕರ ಮತ್ತು ಸುದೀರ್ಘ ಜೀವನವನ್ನು ನಡೆಸಲು, ನಾವು ಈ ಹಾನಿಕಾರಕ ಅಭ್ಯಾಸಗಳನ್ನು ಕಡಿಮೆ ಮಾಡಬೇಕು ಮತ್ತು ಅಂತಿಮವಾಗಿ ತ್ಯಜಿಸಬೇಕು.

English summary
Year-ender 2022: From washing hands regularly to learning to boosting the immunity of the body to combat diseases, here is a list of hygiene lessons that we learnt in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X