ರಷ್ಯಾಗೆ ಭರ್ಜರಿ ಲಾಭ, ಇರಾನ್ ಯುದ್ಧ ವಿಚಾರದಲ್ಲಿ ಹೊಸ ಚರ್ಚೆ ಶುರು | Donald Trump
ಅಮೆರಿಕ ಕೊಡುತ್ತಿರುವ ಒಂದೊಂದು ಏಟಿಗೂ ಇರಾನ್ ನಲುಗಿ ಹೋಗುತ್ತಿದ್ದು, ಇಸ್ರೇಲ್ ಕೂಡ ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಾ ಇರಾನ್ ಸೋಲು ಒಪ್ಪಿಕೊಳ್ಳುವಂತೆ ಆತಂಕ ಮೂಡಿಸುತ್ತಿದೆ. ಹೀಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ದಾಳಿ ನಡೆಸುತ್ತಿರುವ ಹಿನ್ನೆಲೆ ಮಧ್ಯಪ್ರಾಚ್ಯ ಪರಿಸ್ಥಿತಿ ಕೂಡ ಅತ್ಯಂತ ಸೂಕ್ಷ್ಮ ಹಂತಕ್ಕೆ ತಲುಪಿಬಿಟ್ಟಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಲು ಏನಾದರೂ ಒಂದು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೂಡ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ರಷ್ಯಾಗೆ ಭರ್ಜರಿ ಲಾಭ ಆಗುತ್ತಿದೆ ಅಂತಾ ಇರಾನ್ ಯುದ್ಧ ವಿಚಾರದಲ್ಲಿ ಹೊಸ ಚರ್ಚೆ ಶುರುವಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಸೃಷ್ಟಿ ಆಗಿದ್ದು, ಇರಾನ್ ವಿರುದ್ಧ ಯುದ್ಧ ಶುರುವಾದ ನಂತರ ಭಾರಿ ದೊಡ್ಡ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿದೆ. ಹೀಗಿದ್ದಾಗ ಅಮೆರಿಕ ನಾಯಕರು ಈಗ ಹೊಸ ತಂತ್ರ ಪ್ರಯೋಗ ಮಾಡಿದ್ದು, ರಷ್ಯಾ ಮೂಲಕ ತೈಲ ಖರೀದಿಗೆ ಇದ್ದ ಅಡೆತಡೆ ತೆಗೆದಿದ್ದಾರೆ. ಆ ಮೂಲಕ ಖುದ್ದು ಅಮೆರಿಕದ ಅಧಿಕಾರಿಗಳು ರಷ್ಯಾ ಮೂಲಕ ತೈಲ ಖರೀದಿ ಮಾಡಲು ಹೇಳುತ್ತಾ ಇದ್ದಾರೆ. ಅಮೆರಿಕದ ಮಿತ್ರ ದೇಶಗಳ ಮೇಲೆ ರಷ್ಯಾ ತೈಲ ಖರೀದಿಗೆ ನಿರ್ಬಂಧ ಹೇರಲಾಗಿತ್ತು, ಹೀಗೆ ಉಕ್ರೇನ್ ಯುದ್ಧದ ಕಾರಣ ನೀಡಿ ರಷ್ಯಾ ವಿರುದ್ಧ ಟ್ರಂಪ್ ಅವರ ಆಡಳಿತ ದೊಡ್ಡ ಅಸ್ತ್ರ ಪ್ರಯೋಗ ಮಾಡಿತ್ತು.

ಉಕ್ರೇನ್ ವಿರುದ್ಧ ಯುದ್ಧಕ್ಕೆ ನೆರವು?
ಆದರೆ ಈಗ ಇರಾನ್ ನಾಶ ಮಾಡಲು ರಷ್ಯಾ ತೈಲಕ್ಕೆ ಒಪ್ಪಿಗೆ ನೀಡಲಾಗಿದೆ, ಇದರಿಂದಾಗಿಯೇ ರಷ್ಯಾಗೆ ಈ ಯುದ್ಧದಿಂದ ಲಾಭ ಆಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಆ ಮೂಲಕ ಪರೋಕ್ಷ ಮತ್ತೊಂದು ತಿಕ್ಕಾಟ ಶುರುವಾಗಿ ಉಕ್ರೇನ್ ವಿರುದ್ಧದ ತಿಕ್ಕಾಟಕ್ಕೆ ಬೆಂಕಿ ಹೊತ್ತಿಸಲಾಗುತ್ತಿದೆ ಎನ್ನುವ ಆರೋಪ ಮಾಡಲಾಗುತ್ತಿದೆ. ನೋಡ ನೋಡುತ್ತಲೇ ರಷ್ಯಾ ತನ್ನ ಬತ್ತಳಿಕೆಗೆ ಹೊಸ ಹೊಸ ಅಸ್ತ್ರಗಳ ಸೇರ್ಪಡೆ ಮಾಡಲು ಸಾಧ್ಯವಾಗಲಿದ್ದು, ಒಂದು ಯುದ್ಧವನ್ನ ತಪ್ಪಿಸಿ ಮತ್ತೊಂದು ಯುದ್ಧಕ್ಕೆ ಬೆಂಬಲ ನೀಡ್ತಾ ಅಮೆರಿಕ? ಎಂಬ ಅನುಮಾನ ಮೂಡಿದೆ.












Click it and Unblock the Notifications