SIR: ನಿಮ್ಮ ವೋಟರ್ ಐಡಿ ಪರಿಷ್ಕರಣೆ ಹೇಗೆ, ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ ಇಲ್ಲಿದೆ ಪಿನ್ ಟು ಪಿನ್ ಮಾಹಿತಿ

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಎಸ್‌ಐಆರ್ ಪ್ರಕ್ರಿಯೆಯು ಬೆಂಗಳೂರು ನಗರ ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಜೂನ್ 30ರಿಂದ ಆರಂಭವಾಗಲಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹೇಗಿದೆ, ನಿಮ್ಮ ವೋಟರ್ ಐಡಿ ಚೆಕ್ ಮಾಡಿಕೊಳ್ಳುವುದು ಹೇಗೆ ಹಾಗೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ವಿವರಣೆ ದಿನಾಂಕ
ಅರ್ಹತಾ ದಿನಾಂಕ 1ನೇ ಅಕ್ಟೋಬರ್, 2026
ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ 30ನೇ ಜೂನ್, 2026 ರಿಂದ 29ನೇ ಜುಲೈ, 2026 ರವರೆಗೆ
ಕರಡು ಮತದಾರರ ಪಟ್ಟಿಯ ಪ್ರಕಟಣೆ 05ನೇ ಆಗಸ್ಟ್, 2026
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಅವಧಿ 05ನೇ ಆಗಸ್ಟ್, 2026 ರಿಂದ 04ನೇ ಸೆಪ್ಟೆಂಬರ್, 2026 ರವರೆಗೆ
ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ನೋಟಿಸ್‌ ನೀಡುವಿಕೆ ಹಾಗೂ ವಿಲೇವಾರಿ ಪ್ರಕ್ರಿಯೆ 05ನೇ ಆಗಸ್ಟ್, 2026 ರಿಂದ 03ನೇ ಅಕ್ಟೋಬರ್, 2026 ರವರೆಗೆ
ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ 07ನೇ ಅಕ್ಟೋಬರ್, 2026

ಬೂತ್ ಮಟ್ಟದ ಅಧಿಕಾರಿಗಳು (BLO) ಏನು ಮಾಡುತ್ತಾರೆ ?

1. 2026 ಜೂನ್ 16 ರವರೆಗೆ ಮತದಾರರ ಪಟ್ಟಿಯಲ್ಲಿ ಇರುವ ಎಲ್ಲಾ ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸುತ್ತಾರೆ.

2. 2026 ರ ಜೂನ್ 30 ರಿಂದ ಜುಲೈ 29 ರವರೆಗೆ ನಿಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ.

3. ಎನ್ಯೂಮರೇಷನ್ ಫಾರಂಗಳನ್ನು ದ್ವಿ ಪ್ರತಿಯಲ್ಲಿ ನಿಮಗೆ ಒದಗಿಸಿ, ಫಾರಂನ್ನು ಭರ್ತಿ ಮಾಡಲು ಸಹಾಯ ಮಾಡುತ್ತಾರೆ.

4. ನಿಮ್ಮಿಂದ ಭರ್ತಿ ಮಾಡಿದ ಫಾರಂಗಳನ್ನು ಸಂಗ್ರಹಿಸಿ, ಅದಕ್ಕೆ ಸ್ವೀಕೃತಿ ನೀಡುತ್ತಾರೆ.

SIR

ಮತದಾರರು ಏನು ಮಾಡಬೇಕು ?

1. ಬೂತ್ ಮಟ್ಟದ ಅಧಿಕಾರಿಯು ನೀಡುವ ಎರಡು ಫಾರಂಗಳನ್ನು ಭರ್ತಿ ಮಾಡಬೇಕು.

2. ಫಾರಂ ಮೇಲೆ ಇತ್ತೀಚಿನ ಕಲರ್‌ ಫೋಟೋ ಅಂಟಿಸಬೇಕು (ಇದು ಕಡ್ಡಾಯವಲ್ಲ).

3. ಫಾರಂ ಭರ್ತಿ ಮಾಡಲು ಅಥವಾ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲು ಅಗತ್ಯ ಸಹಾಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ.

4. ಭರ್ತಿ ಮಾಡಿದ ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿಗೆ ಹಿಂತಿರುಗಿಸಿ ಸ್ವೀಕೃತಿಯನ್ನು ಪಡೆಯಬೇಕು.

ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ ?

ಕರಡು ಮತದಾರರ ಪಟ್ಟಿಯು 2026ರ ಆಗಸ್ಟ್‌ 5ರಂದು ಪ್ರಕಟವಾಗಲಿದೆ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ನೋಡುವುದು ಹೇಗೆ

ಬೂತ್ ಮಟ್ಟದ ಅಧಿಕಾರಿಯ (BLO) ಹತ್ತಿರವಿರುವ ಮತದಾರರ ಪಟ್ಟಿಯಿಂದ.

ECINET ಮೊಬೈಲ್ ಅಪ್ಲಿಕೇಷನ್ ಮೂಲಕ.

voters.eci.gov.in ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯ ಮೂಲಕ.

CEO ಕರ್ನಾಟಕ ಮತ್ತು ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಯ ವೆಬ್‌ಸೈಟ್‌ಗಳ ಮುಖಾಂತರ.

ಯಾವ ಕೆಲಸಕ್ಕೆ ಯಾವ ಅರ್ಜಿ ಸಲ್ಲಿಸಬೇಕು?
ನಮೂನೆ ಉದ್ದೇಶ
ನಮೂನೆ 6 ಹೊಸ ಮತದಾರರ ನೋಂದಣಿ
ನಮೂನೆ 6A ಸಾಗರೋತ್ತರ ಮತದಾರರಾಗಿ ನೋಂದಾಯಿಸಲು
ನಮೂನೆ 7 ಹೆಸರು ತೆಗೆದುಹಾಕುವಿಕೆ
ನಮೂನೆ 8 ನಿವಾಸ ಸ್ಥಳ ಬದಲಾವಣೆ / ನಮೂದುಗಳ ತಿದ್ದುಪಡಿ / ಎಪಿಕ್ ಬದಲಾವಣೆ / ಪಿಡಬ್ಲ್ಯೂಡಿ ಗುರುತು ದಾಖಲಿಸುವುದು

ಗುರುತಿನ ದಾಖಲೆಗಳಿಗೆ ಯಾವ ದಾಖಲೆಗಳನ್ನು ನೀಡಬಹುದು?

1. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು.

2. ಕೇಂದ್ರ ಅಥವಾ ರಾಜ್ಯ ಸರ್ಕಾರ, ಪಿಎಸ್‌ಯುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಥವಾ ಪಿಂಚಣಿದಾರರ ಗುರುತಿನ ಚೀಟಿ/ಪಿಂಚಣಿ ಆದೇಶ.

3. 01-07-1987ಕ್ಕೂ ಮೊದಲು ಸರ್ಕಾರ, ಸ್ಥಳೀಯ ಸಂಸ್ಥೆ, ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಅಥವಾ ಪ್ರಮಾಣಪತ್ರ.

4. ಜನನ ಪ್ರಮಾಣಪತ್ರ.

5. ಪಾಸ್‌ಪೋರ್ಟ್.

6. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಪ್ರಮಾಣಪತ್ರ.

7. ಕಾಯಂ ನಿವಾಸಿ ಪ್ರಮಾಣಪತ್ರ (Domicile Certificate).

8. ಅರಣ್ಯ ಹಕ್ಕುಗಳ ಪ್ರಮಾಣಪತ್ರ.

9. ಒಬಿಸಿ, ಎಸ್‌ಸಿ, ಎಸ್‌ಟಿ ಅಥವಾ ಇತರೆ ಜಾತಿ ಪ್ರಮಾಣಪತ್ರ.

10. ರಾಷ್ಟ್ರೀಯ ನಾಗರಿಕರ ನೋಂದಣಿ (NRC) ದಾಖಲೆ (ಅನ್ವಯಿಸುವ ಪ್ರದೇಶಗಳಲ್ಲಿ ಮಾತ್ರ).

11. ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಕುಟುಂಬ ನೋಂದಣಿ (Family Register).
ಸರ್ಕಾರದಿಂದ ನೀಡಲಾದ ಭೂಮಿ ಅಥವಾ ಮನೆ ಹಂಚಿಕೆ ಪ್ರಮಾಣಪತ್ರ.

12. ಆಧಾರ್ ಕಾರ್ಡ್ (ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+