Get Updates
Get notified of breaking news, exclusive insights, and must-see stories!

ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ

Robin Uthappa: ಅಂಡರ್ 19 ವಿಶ್ವಕಪ್‌ 2026 ಗೆಲುವಿನ ಸೂತ್ರದಾರ ಯುವ ಸ್ಟಾರ್ ಬ್ಯಾಟರ್ ವೈಭವರ್ ಸೂರ್ಯವಂಶಿ ಅವರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್‌ ಪರ ಕಣಕ್ಕಿಳಿಯಲಿದ್ದು, ಇದೀಗ ಅಭ್ಯಾಸದಲ್ಲಿ ಕಾರ್ಯನಿರತರಾಗಿದ್ದಾರೆ. ಈ ನಡುವೆಯೇ ಐಪಿಎಲ್ ಆರಂಭಕ್ಕೆ ಮುನ್ನ, ವೈಭವ್‌ಗೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇದು ಭಾರೀ ವೈರಲ್‌ ಆಗುತ್ತಿದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಉತ್ತಪ್ಪ ಅವರ ಪ್ರಕಾರ, ಈ ಬಾರಿ ಆಟಗಾರನಿಗೆ ಸವಾಲುಗಳು ಹೆಚ್ಚಾಗಲಿವೆ. "ಕಳೆದ 12 ತಿಂಗಳುಗಳ ಕಾಲ (ಒಂದು ವರ್ಷ) ವೈಭವ್ ಸೂರ್ಯವಂಶಿ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಪ್ರತಿಭಾವಂತರೇ, ಆದರೆ ಅವರ ಬ್ಯಾಟಿಂಗ್‌ನಲ್ಲಿ ಈಗಲೂ ಸ್ವಲ್ಪ ಮಟ್ಟಿಗೆ ಅದೃಷ್ಟ ಕೆಲಸ ಮಾಡುತ್ತಿದೆ," ಎಂದು ಕರ್ನಾಟಕದ ಕೊಡಗಿನ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

Robin Uthappa Issues Warning for Vaibhav Suryavanshi Ahead of IPL 2026 Know Complete details

'ಎದುರಾಳಿ ಬೌಲರ್‌ಗಳ ಕಣ್ಣು ವೈಭವ್ ಮೇಲೆ'

"ಕಳೆದ ಸೀಸನ್‌ನಲ್ಲಿ ವೈಭವ್ ಹೊಸಬರಾಗಿದ್ದರಿಂದ ಎದುರಾಳಿ ಬೌಲರ್‌ಗಳಿಗೆ ಅವರ ಬಲಹೀನತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಈ ಬಾರಿ ತಂಡಗಳು ವೈಭವ್ ಅವರ ಆಟವನ್ನು ವಿಶ್ಲೇಷಣೆ ಮಾಡಿದ್ದು, ಅವರನ್ನು ಕಟ್ಟಿಹಾಕಲು ಹೊಸ ತಂತ್ರಗಳನ್ನು ರೂಪಿಸುತ್ತಿವೆ. ವೈಭವ್‌ಗೆ ಕೇವಲ ಇನ್ನೊಂದು ಸೀಸನ್ ಅಷ್ಟೇ ಅಲ್ಲ, ಇದು ಅವರ ವೃತ್ತಿಜೀವನದ ದೃಷ್ಟಿಯಿಂದ ಒಂದು ಪ್ರಮುಖ ಕಲಿಕಾ ಹಂತವಾಗಲಿದೆ," ಎಂದು ಉತ್ತಪ್ಪ ಹೇಳಿದ್ದಾರೆ.

ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ

ಹೀಗೆ ವೈಭವ್ ಸೂರ್ಯವಂಶಿ ಈ ಬಾರಿ ರನ್ ಗಳಿಸುವುದು ಖಚಿತವಾದರೂ, ಕಳೆದ ಬಾರಿಯಂತೆ ಸುಲಭವಾಗಿ ರನ್ ಗಳಿಸಲು ಸಾಧ್ಯ ಆಗುವುದಿಲ್ಲ. ವಿರೋಧಿ ತಂಡಗಳ ಬೌಲಿಂಗ್ ದಾಳಿಯನ್ನು ಎದುರಿಸುವ ಮೂಲಕ ಅವರು ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ ನೀಡಿದ್ದಾರೆ.

ಅಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ

ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯಂತ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಕೇವಲ 13-14ನೇ ವಯಸ್ಸಿನಲ್ಲಿಯೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ.

ವೈಭವ್ ಅವರ ಆಟದ ವೈಶಿಷ್ಟ್ಯ ಅಂದ್ರೆ, ಎದುರಾಳಿ ಬೌಲರ್‌ಗಳ ಮೇಲೆ ಅವರು ಬೀರುವ ಒತ್ತಡ. ಅಂಡರ್-19 ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಬಾರಿಸಿದ ವೇಗದ ಶತಕವು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಚಿಕ್ಕ ವಯಸ್ಸಿನಲ್ಲೇ ತೋರುತ್ತಿರುವ ಪ್ರಬುದ್ಧತೆ, ದೀರ್ಘಕಾಲ ಬ್ಯಾಟಿಂಗ್ ಮಾಡುವ ತಾಳ್ಮೆ ಮತ್ತು ಕ್ರೀಸ್‌ನಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರುವ ಕಲೆ ಅವರನ್ನು ಭವಿಷ್ಯದ ಸೂಪರ್‌ ಸ್ಟಾರ್ ಎಂದು ಗುರುತಿಸುವಂತೆ ಮಾಡಿದೆ.

ಅಂಡರ್ 19 ವಿಶ್ವಕಪ್‌ 2026 ಹೀರೋ ವೈಭವ್

ಇತ್ತೀಚೆಗಷ್ಟೇ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್‌ 2026 ಫೈನಲ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ಅನ್ನು 100 ರನ್‌ಗಳ ಅಂತದಿಂದ ಸೋಲಿಸಿ ಚಾಂಪಿಯನ್‌ ಆಯಿತು. ಮೊದಲು ಬ್ಯಾಟ್‌ ಬೀಸಿದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 411 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಅತೀ ಹೆಚ್ಚು ರನ್‌ಗಳ ಪಾಲು ವೈಭವ್‌ನದ್ದೇ ಇದೆ. ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸ್‌ಗಳ ಸಹಿತ 175 ರನ್​ಗಳನ್ನು ಸಿಡಿಸಿ ಮಿಂಚಿದರು. ಇವರ ಈ ಬೃಹತ್ ಕೊಡುಗೆಯೇ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಆಗಿನಿಂದ ಅವರು ಇಡೀ ದೇಶದ ಗಮನ ಸೆಳೆದಿದ್ದು, ಇವರ ಸಾಧನೆಗೆ ಕ್ರಿಕೆಟ್‌ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬಂದಿದ್ದವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+