Viral Video: ಕೈ ಕೊಟ್ಟ ನಮ್ಮ ಮೆಟ್ರೋ, ಸಿಕ್ಕ ಸಿಕ್ಕ ಲಾರಿ ಹತ್ತಿ ಮನೆ ಸೇರಿದ ಬೆಂಗಳೂರಿಗರು
Viral Video: ಬೆಂಗಳೂರಿನ ನಮ್ಮ ಮೆಟ್ರೋದ ನೇರಳ ಮಾರ್ಗದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯು ಬೆಂಗಳೂರನ್ನು ವಿಶ್ವದಾದ್ಯಂತ ನಗೆಪಾಟಲಿಗೆ ಗುರಿಯಾಗಿದೆ. ಬೆಂಗಳೂರಿನ ನೇರಳ ಮಾರ್ಗದಲ್ಲಿ ಮಂಗಳವಾರ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲು ಉಂಟಾಗಿದ್ದ ತಾಂತ್ರಿಕ ಸಮಸ್ಯೆಯು ವಿವಿಧ ಮೆಟ್ರೋ ನಿಲ್ದಾಣಗಳ ಮೇಲೆ ಪ್ರಭಾವ ಬೀರಿತ್ತು. ಆದರೆ ಇದೀಗ ಮೆಟ್ರೋ ಪ್ರಯಾಣವು ಸುಗಮವಾಗಿದೆ. ಈ ನಡುವೆ ಮಂಗಳವಾರ ಸಂಜೆ ಮೆಟ್ರೋ ಪ್ರಯಾಣಿಕರು ಪರದಾಡಿದ್ದು ಹಾಗೂ ಮೆಟ್ರೋ ಸಂಚಾರ ಸೇವೆಯಲ್ಲಿ ವ್ಯತ್ಯಾಸವಾದಾಗ ಪರ್ಯಾಯ ವ್ಯವಸ್ಥೆಗಳು ಇಲ್ಲದೆ ಇರುವುದು ರಿವೀಲ್ ಆಗಿದೆ. ಮಂಗಳವಾರ ಸಂಜೆ ಹಲವು ಮೆಟ್ರೋ ಪ್ರಯಾಣಿಕರು ಲಾರಿಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರಿನಂತಹ ಮಹಾನಗರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಇರುವುದು ನಗೆಪಾಟಲಿಗೂ ಕಾರಣವಾಗಿದೆ. ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಸಹ ಟ್ವೀಟ್ ಮಾಡಿದ್ದಾರೆ.
ಲಾರಿಯಲ್ಲಿ ಪ್ರಯಾಣಿಸಿದ ಬೆಂಗಳೂರು ಪ್ರಯಾಣಿಕರು
ಇನ್ನು ಜೂನ್ 23ರ ಮಂಗಳವಾರ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಮೆಟ್ರೋದಿಂದ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡದೆ ಇರುವುದು ಭಾರೀ ಸಮಸ್ಯೆಗೆ ಕಾರಣವಾಯಿತು. ರಾತ್ರಿ ಇದೇ ಸಂದರ್ಭವನ್ನು ಬಳಸಿಕೊಂಡು ಆಟೋ ಚಾಲಕರು ಸಹ ದುಬಾರಿ ಮೊತ್ತವನ್ನು ನಿಗದಿ ಮಾಡಿದ್ದರು. ಹೀಗಾಗಿ, ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಲಾರಿಗಳಲ್ಲಿ ಪ್ರಯಾಣ ಮಾಡುವಂತಾಯಿತು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫಸ್ಟ್‌ಕ್ಲಾಸ್ ವರ್ಡ್‌ಟೆಕ್ ಸಿಟಿ - ಥರ್ಡ್‌ಕ್ಲಾಸ್ ಸೇವೆ: ಸಂಸದ ತೇಜಸ್ವಿ ಸೂರ್ಯ ಟ್ವೀಟ್
ನಮ್ಮ ಮೆಟ್ರೋ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಹೆಸರಿಗೆ ಫಸ್ಟ್‌ಕ್ಲಾಸ್, ವರ್ಡ್‌ಟೆಕ್ ಸಿಟಿ ಆದರೆ ಥರ್ಡ್‌ಕ್ಲಾಸ್ ಸೇವೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಕಥೆಯೂ ಅಷ್ಟೇ. ಮೆಟ್ರೋದಲ್ಲಿ ಅಡಚಣೆಗಳು ಆತಂಕಕಾರಿಯಾಗಿ ಆಗಾಗ್ಗೆ ಆಗುತ್ತಿವೆ. ಪ್ರತಿ ಬಾರಿ ಮೆಟ್ರೋ ವಿಫಲವಾದಾಗ, ಇಡೀ ನಗರವು ಅವ್ಯವಸ್ಥೆಗೆ ಸಿಲುಕುತ್ತದೆ. ಕ್ಯಾಬ್‌ಗಳು ಕಣ್ಮರೆಯಾಗುತ್ತವೆ. ಆಟೋ ಚಾಲಕರು ಹೇಳುವ ಜಾಗಕ್ಕೆ ಬರಲು ನಿರಾಕರಿಸುತ್ತಾರೆ. ಈ ಎಲ್ಲ ಸಮಸ್ಯೆಗಳ ನಡುವೆ ಸಾರ್ವಜನಿಕರು ಸಿಲುಕಿಕೊಂಡಿದ್ದಾರೆ. ನಿನ್ನೆ, ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಶ್ರಮಶೀಲ ವೃತ್ತಿಪರರು ಕೆಲಸ ಮುಗಿಸಿ ಮನೆಗೆ ಹೋಗಲು ಟ್ರಕ್‌ಗಳು ಮತ್ತು ಲಾರಿಗಳನ್ನು ಹತ್ತಬೇಕಾದ ಅನಿವಾರ್ಯತೆ ಎದುರಾಯ್ತು. ಅವರು ನಾಳೆ ಎಚ್ಚರಗೊಳ್ಳುತ್ತಾರೆ, ಕಚೇರಿಗೆ ಹಿಂತಿರುಗುತ್ತಾರೆ, ತೆರಿಗೆಗಳನ್ನು ಪಾವತಿಸುತ್ತಾರೆ ಮತ್ತು ಅದೇ ಮುರಿದ ವ್ಯವಸ್ಥೆಯನ್ನು ಮತ್ತೆ ಸಹಿಸಿಕೊಳ್ಳುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Bengalureans hop on to a lorry after metro train serves were disrupted last night due to technical glitches. Hundreds were stranded at inside metro stations and streets. The technical issue has been fixed at 5 am today. pic.twitter.com/WU2AIQaqfO
— Deepak Bopanna (@dpkBopanna) June 24, 2026














Click it and Unblock the Notifications