ಕೋಟ್ಯಾಧಿಪತಿಯಾಗುವ ಸೂಚನೆಗಳು ದೇಹದಲ್ಲೇ ಇವೆಯಾ? ಪುರಾತನ ಶಾಸ್ತ್ರ ಏನ್‌ ಹೇಳುತ್ತೆ?

ಮೊನ್ನೆ ಜ್ಯೋತಿಷಿಯೊಬ್ಬರು ಒಂದು ಚಾನೆಲ್‌ನಲ್ಲಿ ಕುಳಿತುಕೊಂಡು "ವ್ಯಕ್ತಿಯ ಪೃಷ್ಠ ಭಾಗ ಒಳಗೆ ಹೋಗಿದ್ದರೆ, ಸಣ್ಣದಾಗಿದ್ದರೆ ಅವರು ಕೀರ್ತಿವಂತರಾಗುತ್ತಾರೆ" ಎಂದು ಹೇಳಿದ್ದರು. ಅದಕ್ಕೆ ಅವರು ಬಿಗ್‌ ಬಾಸ್‌ ಗಿಲ್ಲಿಯ ಉದಾಹರಣೆ ಕೊಟ್ಟಿದ್ದರು. ಇದು ನಗು ತರಿಸುವಂತೆ ಇದ್ದರೂ, ವಿಷಯ ಯೋಚಿಸುವಂತೆಯೇ ಇತ್ತು. ಇದಕ್ಕೆ ತುಂಬಾ ಮಂದಿ ನೆಗೆಟಿವ್‌ ಕಮೆಂಟ್‌ ಮಾಡಿದ್ದರು. ಇರಲಿ.

ಹಾಗಾದರೆ ದೇಹದ ಲಕ್ಷಣಗಳ ಮೂಲಕ, ಇವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರಾ ಇಲ್ವಾ ಅಂತ ಹೇಳಲು ಸಾಧ್ಯವಿದೆಯಾ? ಖಂಡಿತಾ ಇದೆ. ದೇಹದಲ್ಲಿ ಉತ್ತಮ ಶಕ್ತಿ, ಎಚ್ಚರಿಕೆ, ಆತ್ಮವಿಶ್ವಾಸ ಮತ್ತು ದೈಹಿಕ ಸಾಮರ್ಥ್ಯವನ್ನು ಸೂಚಿಸುವ ಲಕ್ಷಣಗಳಿದ್ದರೆ, ಅದು ಯಾವುದೇ ಕೆಲಸದಲ್ಲಿ ಯಶಸ್ಸನ್ನು (ದೈಹಿಕ ಮತ್ತು ಮಾನಸಿಕ) ಗಳಿಸಲು ಪೂರಕವಾಗಿರುತ್ತದೆ. ಸಾಮಾನ್ಯವಾಗಿ ಯಶಸ್ಸಿಗೆ ಕಾರಣವಾಗುವ ದೇಹದ ಪ್ರಮುಖ ಲಕ್ಷಣಗಳು ಎಲ್ಲಿ ಗೊತ್ತಾಗುತ್ತವೆ?

Signs of Future Wealth

ಸಾಮುದ್ರಿಕ ಶಾಸ್ತ್ರ

ಸಾಮುದ್ರಿಕ ಶಾಸ್ತ್ರ ಎಂಬುದು ಮನುಷ್ಯನ ದೇಹದ ಅಂಗಾಗಗಳ ಆಕಾರ, ರೇಖೆಗಳು, ಮುಖದ ಲಕ್ಷಣಗಳು ಮತ್ತು ಮಚ್ಚೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವ, ನಡವಳಿಕೆ ಹಾಗೂ ಭವಿಷ್ಯವನ್ನು ವಿಶ್ಲೇಷಿಸುವ ಒಂದು ಪುರಾತನ ಭಾರತೀಯ ಜ್ಯೋತಿಷ್ಯ ಪದ್ಧತಿ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜೀವನದಲ್ಲಿ ಅಖಂಡ ಯಶಸ್ಸು, ಕೀರ್ತಿ ಮತ್ತು ಸಂಪತ್ತನ್ನು ಸೂಚಿಸುವ ಕೆಲವು ಪ್ರಮುಖ ದೈಹಿಕ ಲಕ್ಷಣಗಳಿವೆ.

ಹಸ್ತದ (ಅಂಗೈ) ಶುಭ ರೇಖೆಗಳು ಮತ್ತು ಚಿಹ್ನೆಗಳು

1. ಭಾಗ್ಯ ರೇಖೆ (Fate Line): ಮಣಿಕಟ್ಟಿನ ಭಾಗದಿಂದ ಆರಂಭವಾಗಿ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಮಧ್ಯದ ಬೆರಳಿನ (ಶನಿ ಪರ್ವತ) ಕಡೆಗೆ ಹೋಗುವ ರೇಖೆಯಿದ್ದರೆ ಜೀವನದಲ್ಲಿ ತೀವ್ರ ಯಶಸ್ಸು ಸಿಗುತ್ತದೆ.

2. ಲಕ್ಷ್ಮಿ ಮತ್ತು ಗಜ ರೇಖೆ: ಅಂಗೈಯಲ್ಲಿ ಲಕ್ಷ್ಮಿ ರೇಖೆ ಅಥವಾ ಆನೆಯ ಆಕಾರದ (ಗಜ) ರೇಖೆಗಳಿದ್ದರೆ ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.

3. ತ್ರಿಶೂಲ ಅಥವಾ ದ್ವಜ ಚಿಹ್ನೆ: ರೇಖೆಗಳ ಕೊನೆಯಲ್ಲಿ ತ್ರಿಶೂಲ, ಸ್ವಸ್ತಿಕ ಅಥವಾ ಧ್ವಜದಂತಹ ಚಿಹ್ನೆಗಳಿದ್ದರೆ ಸಮಾಜದಲ್ಲಿ ಉನ್ನತ ಗೌರವ ಮತ್ತು ರಾಜಯೋಗ ದೊರೆಯುತ್ತದೆ.

4. ಅಂಗೈಯ ಮಧ್ಯದಲ್ಲಿ 'M' ಆಕಾರದ ರೇಖೆಗಳು ಉತ್ತಮ ನಾಯಕತ್ವ, ವ್ಯವಹಾರ ಬುದ್ಧಿವಂತಿಕೆ ಮತ್ತು ಆರ್ಥಿಕ ಯಶಸ್ಸಿನ ಸೂಚನೆ ಎಂದು ಹಸ್ತರೇಖಾಶಾಸ್ತ್ರ ಹೇಳುತ್ತದೆ.

ಯಾರ ಪಾದಗಳು ಹೀಗಿರುತ್ತದೆಯೋ ಅವರು ಹುಟ್ಟು ಅದೃಷ್ಟವಂತರು!ಸೋಲೇ ಇಲ್ಲದ ಸರದಾರರು
ಯಾರ ಪಾದಗಳು ಹೀಗಿರುತ್ತದೆಯೋ ಅವರು ಹುಟ್ಟು ಅದೃಷ್ಟವಂತರು!ಸೋಲೇ ಇಲ್ಲದ ಸರದಾರರು

ಹಣೆ ಮತ್ತು ತಲೆಯ ಆಕಾರ

1. ಅರ್ಧ ಚಂದ್ರಾಕೃತಿಯ ಹಣೆ: ಹಣೆ ವಿಶಾಲವಾಗಿದ್ದು, ನಾಳಗಳು ಕಾಣಿಸದೆ, ಅರ್ಧ ಚಂದ್ರನ ಆಕಾರದಲ್ಲಿದ್ದರೆ ಅತ್ಯಂತ ಅದೃಷ್ಟಶಾಲಿ ಎನ್ನಲಾಗುತ್ತದೆ. ಇವರು ಬುದ್ಧಿವಂತರು ಮತ್ತು ನಾಯಕತ್ವ ಗುಣ ಹೊಂದಿರುತ್ತಾರೆ.

2. ಉಬ್ಬಿದ ಹಣೆ: ಹಣೆಯ ಮಧ್ಯಭಾಗ ಸ್ವಲ್ಪ ಉಬ್ಬಿಕೊಂಡಿದ್ದರೆ ಆರ್ಥಿಕವಾಗಿ ಯಾವುದೇ ಕೊರತೆ ಎದುರಾಗುವುದಿಲ್ಲ.

ಮುಖ ಮತ್ತು ಕಣ್ಣುಗಳ ಲಕ್ಷಣ

1. ಬಿಲ್ಲಿನಂತಹ ಹುಬ್ಬುಗಳು: ಕಣ್ಣಿನ ಹುಬ್ಬುಗಳು ದಟ್ಟವಾಗಿ, ಬಿಲ್ಲಿನ ಆಕಾರದಲ್ಲಿದ್ದು, ಮಧ್ಯದಲ್ಲಿ ಒಂದಕ್ಕೊಂದು ಅಂಟಿಕೊಳ್ಳದೇ ಇದ್ದರೆ ಅದು ಸುಖಿ ಜೀವನದ ಸಂಕೇತ.

2. ತೇಜಸ್ವಿ ಕಣ್ಣುಗಳು: ಕಣ್ಣಿನ ಬಿಳಿ ಭಾಗವು ಹಾಲಿನಂತೆ ಶುಭ್ರವಾಗಿದ್ದು, ಕಣ್ಣುಗಳಲ್ಲಿ ನೈಸರ್ಗಿಕವಾದ ಹೊಳಪಿದ್ದರೆ ಅವರು ಕೀರ್ತಿವಂತರಾಗುತ್ತಾರೆ.

3. ಕಿವಿಗಳು: ಉದ್ದವಾದ ಮತ್ತು ದಪ್ಪನೆಯ ಮೃದುವಾದ ಕಿವಿಗಳನ್ನು ಹೊಂದಿರುವವರು ದೀರ್ಘಾಯುಷಿಗಳು ಮತ್ತು ಯಶಸ್ವಿ ಉದ್ಯಮಿಗಳಾಗುತ್ತಾರೆ.

4. ಸಮತೋಲನವಾದ ಮತ್ತು ತುಂಬಿದ ಮೂಗು ಜ್ಯೋತಿಷ್ಯ ಮತ್ತು ಮುಖಶಾಸ್ತ್ರದಲ್ಲಿ ಉತ್ತಮ ಹಣಕಾಸಿನ ಸಾಮರ್ಥ್ಯದ ಸೂಚನೆ ಎಂದು ಹೇಳಲಾಗುತ್ತದೆ.

5. ದೊಡ್ಡ ಕಿವಿಯ ತೊಟ್ಟುಗಳು ಅನೇಕ ಭಾರತೀಯ ಹಾಗೂ ಚೀನೀ ನಂಬಿಕೆಗಳಲ್ಲಿ ಇದು ಸಂಪತ್ತು ಮತ್ತು ದೀರ್ಘಾಯುಷ್ಯದ ಸಂಕೇತ.

ಗಂಡನೊಡನೆ ಜಾಸ್ತಿ ಜಗಳವಾಡೋ ಹೆಂಡತಿಯರ ಜನ್ಮರಾಶಿ ಇದು
ಗಂಡನೊಡನೆ ಜಾಸ್ತಿ ಜಗಳವಾಡೋ ಹೆಂಡತಿಯರ ಜನ್ಮರಾಶಿ ಇದು

ಪಾದಗಳ ಲಕ್ಷಣಗಳು

1. ತ್ರಿಕೋನ ಚಿಹ್ನೆ: ಪುರುಷರ ಅಥವಾ ಮಹಿಳೆಯರ ಪಾದದ ಅಡಿಯಲ್ಲಿ ತ್ರಿಕೋನ (Triangle) ಅಥವಾ ಚಕ್ರದ ಗುರುತು ಇದ್ದರೆ, ಅವರು ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಆಸ್ತಿ ಗಳಿಸುತ್ತಾರೆ.

2. ಮೃದುವಾದ ಮತ್ತು ನಯವಾದ ಪಾದ: ಬಿರುಕುಗಳಿಲ್ಲದ, ಗುಲಾಬಿ ಬಣ್ಣದ ನಯವಾದ ಪಾದಗಳು ರಾಜಭೋಗವನ್ನು ಸೂಚಿಸುತ್ತವೆ. ಹೆಬ್ಬೆರಳಿಗೆ ಹೊಂದಿಕೊಂಡಿರುವ ಪಕ್ಕದ ಬೆರಳು ಉದ್ದವಿದ್ದರೆ ಸ್ವಾವಲಂಬಿ ಯಶಸ್ಸು ಸಿಗುತ್ತದೆ.

3. ಹೆಬ್ಬೆರಳಿನ ಆಕಾರ- ನೇರ ಮತ್ತು ಉದ್ದನೆಯ ಹೆಬ್ಬೆರಳು: ಹೆಬ್ಬೆರಳು ನೇರ ಹಾಗೂ ದೃಢವಾಗಿದ್ದರೆ ಆ ವ್ಯಕ್ತಿ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುತ್ತಾನೆ. ಇವರಿಗೆ ತೀಕ್ಷ್ಣ ಬುದ್ಧಿ ಇರುವುದರಿಂದ ಧನಲಾಭ ಹೆಚ್ಚಾಗಿರುತ್ತದೆ.

4. ಪಾದದ ತಳದಲ್ಲಿ ಶಂಖ, ಚಕ್ರ ಅಥವಾ ಕಮಲದಂತಹ ಗುರುತುಗಳು ರಾಜಯೋಗ ಮತ್ತು ಐಶ್ವರ್ಯದ ಸಂಕೇತ ಎಂದು ಹೇಳುತ್ತಾರೆ.

ದೇಹದ ಮೇಲಿನ ಮಚ್ಚೆಗಳು

1.ಹಣೆಯ ಮಧ್ಯದಲ್ಲಿ ಮಚ್ಚೆ: ಅಪಾರ ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುತ್ತದೆ.
2. ಬಲಗಲ್ಲದ ಮೇಲೆ ಮಚ್ಚೆ: ವ್ಯಾಪಾರ ಅಥವಾ ಉದ್ಯೋಗದಲ್ಲಿ ನಿರಂತರ ಪ್ರಗತಿಯನ್ನು ಕಾಣಬಹುದು.
3. ಹೊಕ್ಕುಳಿನ ಭಾಗದಲ್ಲಿ ಮಚ್ಚೆ: ಜೀವನದಲ್ಲಿ ಭೌತಿಕ ಸುಖ ಭೋಗಗಳನ್ನು ಅನುಭವಿಸುವ ಯೋಗವಿರುತ್ತದೆ.

ವಿಶೇಷ ಸೂಚನೆ: ಇವು ಸಾವಿರಾರು ವರ್ಷಗಳ ಹಿಂದಿನ ಶಾಸ್ತ್ರದ ಸೂಚನೆಗಳು. ಇವುಗಳನ್ನು ನಾವು ದೃಢೀಕರಿಸುವುದಿಲ್ಲ. ತಜ್ಞರ ಅನಿಸಿಕೆ ಅಗತ್ಯ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+