ಇರಾನ್ ವಿರುದ್ಧ ಎಲ್ಲಾ ದೇಶಗಳು ನೌಕೆಗಳನ್ನ ಕಳುಹಿಸಲಿವೆ ಎಂಬ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷರು | Donald Trump
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್ ನಾಯಕರಿಗೆ ಎಚ್ಚರಿಕೆ ಸಂದೇಶದ ಜೊತೆಗೆ, ಘೋರ ದಾಳಿ ಮುನ್ಸೂಚನೆ ಕೂಡ ನೀಡಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ಕಳೆದುಕೊಂಡು ಪರದಾಡುತ್ತಿರುವ ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಮತ್ತಷ್ಟು ದಾಳಿಗೆ ಪ್ಲಾನ್ ಮಾಡಿವೆ. ಈ ನಡುವೆ ಹೊರ್ಮುಜ್ ಜಲಸಂಧಿ ವಿಚಾರವಾಗಿ ಹೊಸ ಹೊಸದಾಗಿ ಬೆಂಕಿ ಹೊತ್ತಿಕೊಂಡು ಭಾರಿ ಸಂಚಲನ ಸೃಷ್ಟಿ ಆಗುತ್ತಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಎಲ್‌ಪಿಜಿ ಸಮೇತ ಹಲವಾರು ಸಿಂಥೆಟಿಕ್ ವಸ್ತುಗಳ ಬೆಲೆ ಮುಗಿಲು ಮುಟ್ಟುತ್ತಿದೆ. ಈ ಸಮಯದಲ್ಲೇ ಇರಾನ್ ವಿರುದ್ಧ ಎಲ್ಲಾ ದೇಶಗಳು ನೌಕೆಗಳನ್ನು ಕಳುಹಿಸಲಿವೆ ಎಂಬ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ಯುದ್ಧ ಇನ್ನೂ ನಿಂತಿಲ್ಲ ಎಂಬುದನ್ನ ವೈರಿಗಳಿಗೆ ತಿಳಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಇರಾನ್
ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಕಾರ್ಯಾಚರಣೆ ಶುರು ಮಾಡಿ 14 ದಿನಗಳೇ ಕಳೆದಿದ್ದು, ಯುದ್ಧದಲ್ಲಿ ಯಾರು ಗೆದ್ದರು? ಯಾರು ಸೋತರು? ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಯುದ್ಧ ಇನ್ನೂ ನಿಂತಿಲ್ಲ, ಇನ್ನಷ್ಟು ದಿನಗಳ ಕಾಲ ಮುಂದುವರಿದು ಇಡೀ ಜಗತ್ತಿನ ಆರ್ಥಿಕತೆ ನಾಶ ಮಾಡಲಿದೆ ಎಂಬ ಮುನ್ಸೂಚನೆ ಸಿಗುತ್ತಿದೆ. ಷೇರು ಮಾರುಕಟ್ಟೆ, ಬಡವರ ಬದುಕು, ಇದೆಲ್ಲಾ ಸಾಲದು ಎನ್ನುವಂತೆ ಪರಿಸರ ಕೂಡ ಇರಾನ್ ಮತ್ತು ಅಮೆರಿಕ ಯುದ್ಧದ ಪರಿಣಾಮ ನಾಶವಾಗುತ್ತಾ ಇದೆ ಎಂಬ ಆರೋಪ ಮಾಡಲಾಗುತ್ತಿದೆ. ಅದರಲ್ಲೂ ತೈಲ ಘಟಕಗಳ ಮೇಲೆ ನಡೆಯುತ್ತಿರುವ ಭಾರಿ ಘೋರ ದಾಳಿ ಈಗ ಎಲ್ಲೆಲ್ಲೂ ತಲ್ಲಣ ಎಬ್ಬಿಸಿದೆ. ಈ ಮೂಲಕ ಬಡ ದೇಶಗಳ ಜನರು ಅನ್ನ & ನೀರು ಪಡೆಯುವುದು ಕೂಡ ಮತ್ತಷ್ಟು ಕಷ್ಟವಾಗಲಿದೆ. id='are-slot-2' class='oiad oi-axt oiadv'>












Click it and Unblock the Notifications