Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್‌ಗೆ ಗುಡ್‌ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ
ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಶ್ರೀಗಂಧದ ಗುಡಿ' ಪ್ರೇಕ್ಷಕರಿಗೆ ಈಗ ಅನಿರೀಕ್ಷಿತ ಶಾಕ್ ಎದುರಾಗಿದೆ. ಧಾರಾವಾಹಿಯ ಪ್ರಮುಖ ಪಾತ್ರದಲ್ಲಿದ್ದ ಕಿರುತೆರೆ ನಟಿ ಸಂಜನಾ ಬುರ್ಲಿ ದಿಢೀರ್ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಈ ಬಗ್ಗೆ ವಾಹಿನಿಯ ಪ್ರೋಮೋದಲ್ಲೇ ಸಂಜನಾ ಬುರ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಹೊಸ ಪಾತ್ರಧಾರಿ ಯಾರು ಎಂದು ಪರಿಚಯವೂ ಮಾಡಿಕೊಟ್ಟಿದ್ದಾರೆ. ಧಾರಾವಾಹಿಯ ಕೇಂದ್ರ ಬಿಂದುವಾಗಿದ್ದ 'ಚಂದನಾ' ಪಾತ್ರಧಾರಿ, ನಟಿ ಸಂಜನಾ ಬುರ್ಲಿ ಅವರು ಸೀರಿಯಲ್‌ನಿಂದ ದಿಢೀರ್ ಹೊರನಡೆದಿದ್ದಾರೆ.
ಸೀರಿಯಲ್ ಬಿಡಲು ಕಾರಣವೇನು?
ಸಂಜನಾ ಬುರ್ಲಿ ಅವರು ಪ್ರೋಮೋದಲ್ಲಿ ನೇರವಾಗಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ಇವತ್ತು ಚಂದನಾ ಆಗಿ ಬಂದಿಲ್ಲ, ನಿಮ್ಮೆಲ್ಲರ ಸಂಜನಾ ಬುರ್ಲಿ ಆಗಿ ಬಂದಿದ್ದೀನಿ. ಒಂದು ಹುಡುಗಿಯ ಬದುಕಿನಲ್ಲಿ ಮದುವೆ ಎನ್ನುವುದು ಅತ್ಯಂತ ಮುಖ್ಯವಾದ ಘಟ್ಟ. ಈಗ ನಾನು ಕೂಡ ಅದೇ ನಿರ್ಣಾಯಕ ಹಂತದಲ್ಲಿದ್ದೇನೆ. ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಈ ಕಾರಣದಿಂದ ಇನ್ಮುಂದೆ ನಿಮ್ಮ ಮುಂದೆ ಚಂದನಾ ಆಗಿ ಬರಲು ಸಾಧ್ಯವಾಗುತ್ತಿಲ್ಲ" ಎಂದು ಭಾವನಾತ್ಮಕವಾಗಿ ವಿವರಿಸಿದ್ದಾರೆ.

ತಮ್ಮ ಪಾತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಅಕ್ಕರೆಯನ್ನು ತುಂಬಾ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ ಸಂಜನಾ, ಇದೊಂದು ಅನಿವಾರ್ಯ ಬದಲಾವಣೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಜಾಗಕ್ಕೆ ಹೊಸ ಚಂದನಾ ಆಗಿ ಬರಲಿರುವ ನಟಿ ಸ್ನೇಹಾ ಮಂಜುನಾಥ್ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟಿದ್ದಾರೆ. "ನನಗೆ ನೀಡಿದಷ್ಟೇ ಪ್ರೀತಿಯನ್ನು ಈ ಹೊಸ ಚಂದನಾಗೂ ನೀಡಿ" ಎಂದು ವಿನಂತಿಸುವ ಮೂಲಕ ಸಂಜನಾ ಬುರ್ಲಿ ಅವರು ಶ್ರೀಗಂಧದ ಗುಡಿ ತಂಡಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.
ಸ್ನೇಹಾ ಮಂಜುನಾಥ್ ಯಾರು?
ನಟಿ ಸಂಜನಾ ಅವರ ಜಾಗಕ್ಕೆ ಈಗ ಸ್ನೇಹಾ ಮಂಜುನಾಥ್ ಅವರ ಎಂಟ್ರಿಯಾಗಿದೆ. ಸಂಜನಾ ಅವರು ಅನಿವಾರ್ಯ ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜವಾಬ್ದಾರಿಯನ್ನು ಈಗ ಸ್ನೇಹಾ ವಹಿಸಿಕೊಂಡಿದ್ದಾರೆ. ಈ ಹೊಸ ಬದಲಾವಣೆಯು ಧಾರಾವಾಹಿಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಕಥೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ನಟಿ ಸ್ನೇಹಾ ಮಂಜುನಾಥ್ ಅವರಿಗೆ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಮಟ್ಟದ ಹೆಸರಿದೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶುಭಸ್ಯ ಶೀಘ್ರಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು. ಇದಕ್ಕೂ ಮುನ್ನ ಅವರು 'ಶಾಂತಂ ಪಾಪಂ' ನಂತಹ ಕ್ರೈಂ ಸರಣಿಗಳಲ್ಲಿ ಮತ್ತು ಜನಪ್ರಿಯ 'ರಾಮಾಚಾರಿ' ಧಾರಾವಾಹಿಯಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಸ್ನೇಹಾ ಮಂಜುನಾಥ್ ಅವರ ಈ ಹೊಸ ಪಯಣವು ಈಗ ಜೀ ಕುಟುಂಬದಿಂದ ಕಲರ್ಸ್ ಕನ್ನಡ ವಾಹಿನಿಯತ್ತ ಸಾಗಿದೆ. ಇಷ್ಟು ದಿನ ಜೀ ಕನ್ನಡ ವಾಹಿನಿಯ ವಿವಿಧ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದ ಸ್ನೇಹಾ, ಈಗ ಅಧಿಕೃತವಾಗಿ ಕಲರ್ಸ್ ಕನ್ನಡ ಬಳಗವನ್ನು ಸೇರಿಕೊಂಡಿದ್ದಾರೆ. ಧಾರಾವಾಹಿಯ ತಂಡವು ಇವರ ಆಗಮನವನ್ನು ಸ್ವಾಗತಿಸಿದ್ದು, ಸ್ನೇಹಾ ಅವರ ಹೊಸ ಪಾತ್ರದ ಸಂಚಿಕೆಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications