ದಕ್ಷಿಣ ರೈಲ್ವೆಗೆ ದೇಶದಲ್ಲೇ ನಂ.1 ಸ್ಥಾನ! ವಿಶೇಷ ರೈಲುಗಳಲ್ಲಿ ದಾಖಲೆ ಸಂಖ್ಯೆಯ ಪ್ರಯಾಣಿಕರ ಸಂಚಾರ

2025-26ನೇ ಹಣಕಾಸು ವರ್ಷದಲ್ಲಿ ವಿಶೇಷ ರೈಲುಗಳ ನಿರ್ವಹಣೆ ಹಾಗೂ ಪ್ರಯಾಣಿಕರ ಬಳಕೆಯಲ್ಲಿ ದಕ್ಷಿಣ ರೈಲ್ವೆ (Southern Railway) ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ಒಟ್ಟು 229 ವಿಶೇಷ ರೈಲು ಸೇವೆಗಳ ಮೂಲಕ 2,513 ಟ್ರಿಪ್‌ಗಳನ್ನು ನಡೆಸಿ, ಸುಮಾರು 32.98 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಿದೆ. ಈ ಸೇವೆಗಳಿಂದ ರೈಲ್ವೆಗೆ 243.22 ಕೋಟಿ ಆದಾಯ ಲಭಿಸಿದೆ.

ದಕ್ಷಿಣ ರೈಲ್ವೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪ್ರತಿ ವಿಶೇಷ ರೈಲು ಟ್ರಿಪ್‌ಗೆ ಸರಾಸರಿ 1,312 ಪ್ರಯಾಣಿಕರು ಪ್ರಯಾಣಿಸಿದ್ದು, ಇದು ಭಾರತೀಯ ರೈಲ್ವೆಯ ರಾಷ್ಟ್ರೀಯ ಸರಾಸರಿ 894 ಪ್ರಯಾಣಿಕರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಸಾಧನೆಯೊಂದಿಗೆ ಕಾರ್ಯಾಚರಣಾ ದಕ್ಷತೆಯ ಪ್ರಮುಖ ಮಾನದಂಡದಲ್ಲಿ ದಕ್ಷಿಣ ರೈಲ್ವೆ ದೇಶದ ಅತ್ಯುತ್ತಮ ರೈಲ್ವೆ ವಲಯವಾಗಿ ಹೊರಹೊಮ್ಮಿದೆ.

Southern Railway

2025-26ರಲ್ಲಿ ವಿಶೇಷ ರೈಲುಗಳ ಬಹುಪಾಲು ಸೇವೆಗಳು ದಕ್ಷಿಣ ಭಾರತ, ದಕ್ಷಿಣ ಪಶ್ಚಿಮ ವಲಯ ಹಾಗೂ ದೂರದ ಅಂತರರಾಜ್ಯ ಮಾರ್ಗಗಳಲ್ಲಿ ಸಂಚರಿಸಿವೆ. ಇದರಿಂದ ಹಬ್ಬ, ರಜೆ ಹಾಗೂ ಬೇಸಿಗೆ ಕಾಲದ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಜೊತೆಗೆ, ವೇಟಿಂಗ್ ಲಿಸ್ಟ್‌ಗಳನ್ನು ಕಡಿಮೆ ಮಾಡಲು ಸಹಾಯವಾಗಿದೆ.

ದಕ್ಷಿಣ ರೈಲ್ವೆಗೆ ಕೋಟಿ ಕೋಟಿ ಆದಾಯ ತಂದ ವಂದೇ ಭಾರತ್, ಅಗ್ರಸ್ಥಾನದಲ್ಲಿ ಮಂಗಳೂರು-ತಿರುವನಂತಪುರಂ ರೈಲು!
ದಕ್ಷಿಣ ರೈಲ್ವೆಗೆ ಕೋಟಿ ಕೋಟಿ ಆದಾಯ ತಂದ ವಂದೇ ಭಾರತ್, ಅಗ್ರಸ್ಥಾನದಲ್ಲಿ ಮಂಗಳೂರು-ತಿರುವನಂತಪುರಂ ರೈಲು!

ಕರ್ನಾಟಕದ ಪ್ರಯಾಣಿಕರಿಗೂ ಅನುಕೂಲ:

ರೈಲ್ವೆ ಇಲಾಖೆಯ ವಿಶೇಷ ರೈಲುಗಳ ಸಂಚಾರದಿಂದಾಗಿ ಕರ್ನಾಟಕದ ಪ್ರಯಾಣಿಕರ ಟಿಕೆಟ್ ಬುಕಿಂಗ್ ಸಮಸ್ಯೆ ನಿವಾರಣೆಯಾಗಿದೆ. ಬೆಂಗಳೂರಿನಿಂದ ನೆರೆರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಹಾಗೂ ಉತ್ತರ ಭಾರತದ ನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೆಚ್ಚುವರಿ ರೈಲುಗಳನ್ನು ನಿಯೋಜಿಸಲಾಗಿದೆ. ಇದು ಹಬ್ಬ ಹಾಗೂ ಬೇಸಿಗೆ ರಜೆಯ ಸಂದರ್ಭದಲ್ಲಿ ವೇಟಿಂಗ್ ಲಿಸ್ಟ್ ಅನ್ನು ಗಣನೀಯವಾಗಿ ತಗ್ಗಿಸಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡಿದೆ.

ದಕ್ಷಿಣ ಭಾರತದ ಪ್ರಮುಖ ಕೇಂದ್ರಗಳಾದ ಬೆಂಗಳೂರು, ಕೇರಳ, ತಮಿಳುನಾಡಿನ ದಕ್ಷಿಣ ಭಾಗ, ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ದೇಶದ ಪೂರ್ವ, ಪಶ್ಚಿಮ ಹಾಗೂ ಉತ್ತರ ರಾಜ್ಯಗಳೊಂದಿಗೆ ಜೋಡಿಸುವ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರವನ್ನು ತೀವ್ರಗೊಳಿಸಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ದಕ್ಷಿಣ ರೈಲ್ವೆಯು ಈ ಕ್ರಮ ಕೈಗೊಂಡಿದ್ದು, ನಿಯಮಿತ ಕಾಯ್ದಿರಿಸಿದ (Reserved) ರೈಲುಗಳಷ್ಟೇ ಅಲ್ಲದೆ ಸಾಮಾನ್ಯ ಜನಸಾಮಾನ್ಯರ ಅನುಕೂಲಕ್ಕಾಗಿ ಅನ್‌ರಿಸರ್ವ್ಡ್ (Unreserved) ವಿಶೇಷ ರೈಲುಗಳನ್ನೂ ಸಹ ಕಾರ್ಯಾಚರಣೆಗೆ ಇಳಿಸಿದೆ.

ವಂದೇ ಭಾರತ್‌ನಲ್ಲಿ ಸಾಕು ನಾಯಿ, ಬೆಕ್ಕಿನೊಂದಿಗೆ ಪ್ರಯಾಣಿಸಬೇಕೇ? ಈ ಹೊಸ ಪೆಟ್ ಬಾಕ್ಸ್ ನಿಯಮ ತಿಳಿಯಿರಿ
ವಂದೇ ಭಾರತ್‌ನಲ್ಲಿ ಸಾಕು ನಾಯಿ, ಬೆಕ್ಕಿನೊಂದಿಗೆ ಪ್ರಯಾಣಿಸಬೇಕೇ? ಈ ಹೊಸ ಪೆಟ್ ಬಾಕ್ಸ್ ನಿಯಮ ತಿಳಿಯಿರಿ

ಚೆನ್ನೈ-ಕನ್ಯಾಕುಮಾರಿ ಹಾಗೂ ಚೆನ್ನೈ-ತಿರುವನಂತಪುರಂ ಮಾರ್ಗಗಳೂ ಸೇರಿದಂತೆ ದೇಶದ ಪ್ರಮುಖ ರೈಲ್ವೆ ಮಾರ್ಗಗಳಲ್ಲಿನ ಪ್ರಯಾಣಿಕರ ಬೇಡಿಕೆ ಮತ್ತು ವೇಟಿಂಗ್ ಲಿಸ್ಟ್ ಪ್ರವೃತ್ತಿಯನ್ನು ರೈಲ್ವೆ ಮಂಡಳಿ ನಿರಂತರವಾಗಿ ಪರಿಶೀಲಿಸುತ್ತಿದೆ. ಇನ್ಮುಂದೆ ಭಾರಿ ಬೇಡಿಕೆ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾವುದೇ ಹೊಸ ವಿಶೇಷ ರೈಲುಗಳನ್ನು ಘೋಷಿಸಿದರೆ, ಅದೇ ಮಾರ್ಗದ ಸಾಮಾನ್ಯ ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಹೊಂದಿರುವ ಪ್ರಯಾಣಿಕರಿಗೆ ತಕ್ಷಣವೇ ಮೊಬೈಲ್ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಈ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣದ ಅವಕಾಶ ದೊರೆತಿದ್ದು, ವಿಶೇಷ ರೈಲುಗಳ ಬಳಕೆ ಹೆಚ್ಚುವುದರ ಜೊತೆಗೆ ಅವುಗಳ ಆಸನ ಭರ್ತಿಯ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+