Induction Stove: ಎಲ್‌ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಸುತ್ತಿದ್ದೀರಾ? ಈ ವಿಧದ ಪಾತ್ರೆಗಳು ನಿಮ್ಮ ಅಡುಗೆಮನೆಯಲ್ಲಿರಲಿ

ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಹಾಗೂ ಅಭಾವದಿಂದಾಗಿ ಜನರು ಇಂಡಕ್ಷನ್ ಸ್ಟೌವ್‌ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಇಂಡಕ್ಷನ್ ಸ್ಟೌವ್‌ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ಇವುಗಳ ಮೇಲೆ ಅಡುಗೆ ಮಾಡಲು ಎಲ್ಲ ರೀತಿಯ ಪಾತ್ರೆಗಳು ಬರುವುದಿಲ್ಲ. ಇಂಡಕ್ಷನ್ ಸ್ಟೌವ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದಕ್ಕೆ ಯಾವ ರೀತಿಯ ಪಾತ್ರೆಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂಡಕ್ಷನ್ ಸ್ಟೌವ್‌ಗಳು ಸಾಂಪ್ರದಾಯಿಕ ಗ್ಯಾಸ್ ಸ್ಟೌವ್‌ಗಳಿಗಿಂತ ಭಿನ್ನವಾಗಿವೆ. ಇಲ್ಲಿ ಬೆಂಕಿ ಅಥವಾ ಕಾಯಿಲ್‌ಗಳು ಇರುವುದಿಲ್ಲ. ಬದಲಾಗಿ, ಸ್ಟೌವ್‌ನ ಒಳಗೆ ಇರುವ ಮ್ಯಾಗ್ನೆಟಿಕ್‌ ಫೀಲ್ಡ್‌ ಪಾತ್ರೆಯ ತಳಭಾಗದೊಂದಿಗೆ ವರ್ತಿಸಿ ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ. ಇದರಿಂದ ಉಷ್ಣವು ಪಾತ್ರೆಯ ಹೊರಭಾಗದ ಬದಲು ನೇರವಾಗಿ ಪಾತ್ರೆಯ ಒಳಗೇ ಉತ್ಪತ್ತಿಯಾಗುತ್ತದೆ. ಇದು ಅಡುಗೆಯನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.

Induction Stove

ಯಾವ ಪಾತ್ರೆಗಳು ಇಂಡಕ್ಷನ್ ಸ್ಟೌವ್‌ಗೆ ಸೂಕ್ತ?

ಪಾತ್ರೆಯು ಕಾಂತೀಯ ಗುಣವನ್ನು ಹೊಂದಿದ್ದರೆ ಮಾತ್ರ ಅದು ಇಂಡಕ್ಷನ್ ಮೇಲೆ ಕೆಲಸ ಮಾಡುತ್ತದೆ. ಕಾಸ್ಟ್ ಐರನ್ ಇವು ಕಾಂತೀಯ ಗುಣ ಹೊಂದಿದ್ದು, ಶಾಖವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಸಮವಾಗಿ ಹಂಚುತ್ತವೆ. ಇನ್ನು ಮ್ಯಾಗ್ನೆಟಿಕ್ ಸ್ಟೇನ್‌ಲೆಸ್ ಸ್ಟೀಲ್ ಎಲ್ಲ ಸ್ಟೀಲ್ ಪಾತ್ರೆಗಳು ಇಂಡಕ್ಷನ್ ಮೇಲೆ ಕೆಲಸ ಮಾಡುವುದಿಲ್ಲ. ಯಾವುದರಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದು ಕಾಂತೀಯ ಶಕ್ತಿ ಇರುತ್ತದೆಯೋ ಅವು ಮಾತ್ರ ಸೂಕ್ತ.

ಕಾರ್ಬನ್ ಸ್ಟೀಲ್ ಕಾಸ್ಟ್ ಐರನ್‌ನಂತೆ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಸ್ಟೀಲ್‌ನಂತೆ ಹಗುರವಾಗಿರುತ್ತದೆ. ಟ್ರೈ-ಪ್ಲೈ ಪಾತ್ರೆಗಳಲ್ಲಿ ಮೂರು ಪದರಗಳಿರುತ್ತವೆ. ಒಳಗಿನ ಪದರ ಸ್ಟೀಲ್, ಮಧ್ಯದಲ್ಲಿ ಅಲ್ಯೂಮಿನಿಯಂ ಮತ್ತು ಹೊರಭಾಗದಲ್ಲಿ ಮ್ಯಾಗ್ನೆಟಿಕ್ ಸ್ಟೀಲ್ ಇರುತ್ತದೆ. ಇದು ಅಡುಗೆ ಮಾಡಲು ಅತ್ಯಂತ ಸುರಕ್ಷಿತ ಮತ್ತು ವೇಗವಾದ ಆಯ್ಕೆಯಾಗಿದೆ.

ಯಾವ ಪಾತ್ರೆಗಳು ಇಂಡಕ್ಷನ್ ಸ್ಟೌವ್‌ಗೆ ಒಗ್ಗುವುದಿಲ್ಲ?

ಕಾಂತೀಯ ಗುಣವಿಲ್ಲದ ಯಾವುದೇ ಪಾತ್ರೆ ಇಂಡಕ್ಷನ್ ಮೇಲೆ ಬಿಸಿಯಾಗುವುದಿಲ್ಲ. ಸೆರಾಮಿಕ್ ಮತ್ತು ಗಾಜಿನ ಪಾತ್ರೆಗಳು ಇವುಗಳಲ್ಲಿ ಲೋಹದ ಅಂಶವಿಲ್ಲದ ಕಾರಣ ಶಾಖ ಉತ್ಪತ್ತಿಯಾಗುವುದಿಲ್ಲ. ತಾಮ್ರ ಮತ್ತು ಅಲ್ಯೂಮಿನಿಯಂ ಶಾಖವನ್ನು ಚೆನ್ನಾಗಿ ಹರಿಸುತ್ತವೆ. ಆದರೆ ಕಾಂತೀಯ ಗುಣವಿಲ್ಲದ ಕಾರಣ ಇಂಡಕ್ಷನ್ ಮೇಲೆ ಕೆಲಸ ಮಾಡುವುದಿಲ್ಲ. ಸಮತಟ್ಟಲ್ಲದ ತಳವಿರುವ ಪಾತ್ರೆಗಳು ಇಂಡಕ್ಷನ್ ಪ್ಲೇಟ್ ಮೇಲೆ ಪಾತ್ರೆ ಸಂಪೂರ್ಣವಾಗಿ ಕುಳಿತುಕೊಳ್ಳಬೇಕು. ತಳಭಾಗ ಸಮತಟ್ಟಾಗಿಲ್ಲದಿದ್ದರೆ ಅಥವಾ ಸ್ಟ್ಯಾಂಡ್ ಇರುವ ಪಾತ್ರೆಗಳಿದ್ದರೆ ಶಾಖ ಉತ್ಪತ್ತಿಯಾಗುವುದು ಕಷ್ಟ.

Induction Stove

ಮ್ಯಾಗ್ನೆಟ್ ತೆಗೆದುಕೊಂಡು ಪಾತ್ರೆಯ ತಳಭಾಗಕ್ಕೆ ಅಂಟಿಸಿ ನೋಡಿ. ಕಾಂತವು ಬಲವಾಗಿ ಅಂಟಿಕೊಂಡರೆ ಆ ಪಾತ್ರೆಯನ್ನು ನೀವು ಇಂಡಕ್ಷನ್ ಮೇಲೆ ಬಳಸಬಹುದು. ಪಾತ್ರೆಯ ಕೆಳಭಾಗದಲ್ಲಿ ಅಥವಾ ಪ್ಯಾಕಿಂಗ್ ಮೇಲೆ 'Induction Compatible' ಎಂಬ ಚಿಹ್ನೆ ಅಥವಾ ಕಾಯಿಲ್ ಮಾದರಿಯ ಲೋಗೋ ಇದೆಯೇ ಎಂದು ನೋಡಿ. ಪಾತ್ರೆಯ ತಳಭಾಗ ದಪ್ಪವಾಗಿ ಮತ್ತು ಸಮತಟ್ಟಾಗಿ ಇರಲಿ. ಪಾತ್ರೆಯ ಗಾತ್ರವು ಇಂಡಕ್ಷನ್ ಸ್ಟೌವ್ ಮೇಲಿರುವ ವೃತ್ತದ ಗಾತ್ರಕ್ಕೆ ಸರಿಯಾಗಿ ಹೊಂದುತ್ತಿರಲಿ, ಆಗ ಶಾಖ ವ್ಯರ್ಥವಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+