ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಕೊನೆಯ ಮನ್ ಕಿ ಬಾತ್ ಭಾಷಣ ಮಾಡಲಿರುವ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಡಿ. 25: ಪ್ರಧಾನಿ ನರೇಂದ್ರ ಮೋದಿ ಭಾನುವಾರ 2022 ರ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ ನ 96ನೇ ಆವೃತ್ತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಡಿಸೆಂಬರ್ 25 ರಂದು ನಡೆಯಲಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಡಿಸೆಂಬರ್ 13 ರಂದು ಪ್ರಧಾನಿ ಮೋದಿ ಕರೆ ನೀಡಿದ್ದರು.

Year end 2022; ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣYear end 2022; ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ

ನಮೋ (NaMo) ಅಪ್ಲಿಕೇಶನ್ ಮತ್ತು ಮೈಗೌ (MyGov) ಅಪ್ಲಿಕೇಶನ್‌ನಲ್ಲಿ ಅಭಿಪ್ರಾಯ ತಿಳಿಸಲು ಅಥವಾ 1800-11-7800 ನಲ್ಲಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಿ ಕಳುಹಿಸಲು ಪಿಎಂ ಮೋದಿ ತಿಳಿಸಿದ್ದರು.

PM Narendra Modi will address last Mann Ki Baat of the year 2022

"2022 ರ ಕೊನೆಯ ಮನ್ ಕಿ ಬಾತ್ ಈ ತಿಂಗಳ 25 ರಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಅಭಿಪ್ರಾಯಗಳನ್ನು ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. ನಮೋ ಆಪ್, ಮೈಗೌ ನಲ್ಲಿ ಬರೆಯಲು ಅಥವಾ ನಿಮ್ಮ ಅನಿಸಿಕೆಗಳನ್ನು 1800-11-7800 ನಲ್ಲಿ ರೆಕಾರ್ಡ್ ಮಾಡಲು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ" ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ನವೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ನ 95 ನೇ ಆವೃತ್ತಿಯಲ್ಲಿ ನಮ್ಮ ದೇಶವು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂದು ಹೇಳಿದ್ದರು. ಆದ್ದರಿಂದ ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಪ್ರಚಾರ ಮಾಡಲು ಮತ್ತು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು ಎಂದಿದ್ದರು.

ಭಾರತೀಯ ಸಂಗೀತವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಜನರ ನಡುವೆ ಹೇಗೆ ಬೆರೆತು ಹೋಗಿದೆ. ಸಂಗೀತವು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ, ಸಂಗೀತವು ನಮ್ಮ ಸಮಾಜವನ್ನು ಕೂಡ ಸಂಪರ್ಕಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು. ಇದಕ್ಕೆ ನಾಗಾ ಸಮುದಾಯದ ಉದಾಹರಣೆಯನ್ನು ನೀಡಿ, ಅವರ ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಅವರು ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಿ ತಿಳಿಸಿದ್ದರು.

PM Narendra Modi will address last Mann Ki Baat of the year 2022

ಮನ್ ಕಿ ಬಾತ್ ಸಂದರ್ಭದಲ್ಲಿ, ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಾಪು ಅವರ ನೆಚ್ಚಿನ ಹಾಡನ್ನು ಹಾಡಿರುವ ಗ್ರೀಸ್‌ನ ಗಾಯಕ 'ಕಾನ್‌ಸ್ಟಾಂಟಿನೋಸ್ ಕಲೈಟ್ಜಿಸ್' ಕುರಿತು ಪ್ರಧಾನ ಮಂತ್ರಿ ಉಲ್ಲೇಖಿಸಿದ್ದರು.

English summary
Prime Minister Narendra Modi will address 96th edition of Mann Ki Baat on Sunday. its a last Mann Ki Baat of the year 2022. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X