Gold Price: ಚಿನ್ನದ ಬೆಲೆಯಲ್ಲಿ ಇಂದು ಬದಲಾವಣೆ ಇಲ್ಲ, ಆದ್ರೆ ಬೆಳ್ಳಿ ಕೊಳ್ಳೋ ಮುನ್ನ ಈ ರೇಟ್ ನೋಡಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಕೆಟ್ ವೇಗದಲ್ಲಿ ಜಿಗಿಯುತ್ತಿದ್ದ ಚಿನ್ನದ ದರಕ್ಕೆ ಇಂದು ಕೂಡ ಬ್ರೇಕ್ ಬಿದ್ದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬಂಗಾರದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ದಾಖಲಾಗಿದೆ. ನಿನ್ನೆಯ ದರವೇ ಇಂದೂ ಕೂಡ ಮುಂದುವರಿದಿರುವುದು ಗ್ರಾಹಕರಿಗೆ ಮತ್ತು ಆಭರಣ ಪ್ರಿಯರಿಗೆ ಕೊಂಚ ನಿರಾಳತೆ ತಂದಿದೆ. ಇಂದು ಬೆಂಗಳೂರಿನ ಪ್ರಮುಖ ಜ್ಯುವೆಲ್ಲರಿ ಮಾರುಕಟ್ಟೆಗಳಲ್ಲಿ ದಾಖಲಾಗಿರುವ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ನಿಖರ ಬೆಲೆ ಪಟ್ಟಿ ಇಲ್ಲಿದೆ.

ಇಂದಿನ ದರಗಳು ಹೇಗಿವೆ?

ಹೂಡಿಕೆದಾರರ ನೆಚ್ಚಿನ, ಅತ್ಯಂತ ಶುದ್ಧವಾದ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಳಿತವಾಗಿಲ್ಲ. ನಿನ್ನೆಯಂತೆಯೇ ಇಂದು ಕೂಡ ಪ್ರತಿ ಗ್ರಾಂಗೆ ₹15,622ರಂತೆ ವ್ಯಾಪಾರವಾಗುತ್ತಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಬೆಲೆ ₹1,56,220 ಆಗಿದೆ. ಸಾಮಾನ್ಯವಾಗಿ ಸಾರ್ವಜನಿಕರು ಒಡವೆಗಳನ್ನು ಮಾಡಿಸಲು ಬಳಸುವ ಬಿಐಎಸ್ ಹಾಲ್‌ಮಾರ್ಕ್‌ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯೂ ಸಹ ಇಂದು ಸ್ಥಿರವಾಗಿದೆ. ನಿನ್ನೆಯ ದರವಾದ ಪ್ರತಿ ಗ್ರಾಂಗೆ ₹14,320 ರೇಟ್ ಇಂದೂ ಮುಂದುವರಿದಿದೆ. ಹತ್ತು ಗ್ರಾಂ ಆಭರಣ ಚಿನ್ನದ ಬೆಲೆ ₹1,43,200 ತಲುಪಿದೆ.

Gold Price

ಇನ್ನು ವಜ್ರದ ಆಭರಣಗಳ ತಯಾರಿಕೆಗೆ ಹೆಚ್ಚಾಗಿ ಬಳಕೆಯಾಗುವ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಂದು ಕೂಡ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ ₹11,717ರ ದರದಲ್ಲೇ ಮುಂದುವರಿದಿದೆ. ಇಲ್ಲಿ ನೀಡಲಾಗಿರುವ ಚಿನ್ನದ ದರಗಳು ಮಾರುಕಟ್ಟೆಯ ಮೂಲ ಬೆಲೆಗಳಾಗಿವೆ. ನೀವು ಆಭರಣ ಮಳಿಗೆಗಳಿಗೆ ತೆರಳಿ ಒಡವೆಗಳನ್ನು ಖರೀದಿಸುವಾಗ ಈ ಬೆಲೆಯ ಜೊತೆಗೆ ಜಿಎಸ್‌ಟಿ ಮತ್ತು ಅಂಗಡಿಯವರ ತಯಾರಿಕಾ ವೆಚ್ಚ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತದೆ.

Gold Price: ಅಚ್ಚರಿ ಮೂಡಿಸಿದ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ನಿಖರ ಮಾಹಿತಿ
Gold Price: ಅಚ್ಚರಿ ಮೂಡಿಸಿದ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ನಿಖರ ಮಾಹಿತಿ

ಬೆಳ್ಳಿ-ಪ್ಲಾಟಿನಂ ಬೆಲೆ ಎಷ್ಟಿದೆ?

ಬಂಗಾರದ ಬೆಲೆಯಲ್ಲಿ ಸ್ಥಿರತೆ ಕಂಡುಬಂದ ಬೆನ್ನಲ್ಲೇ, ಇತ್ತ ಬೆಳ್ಳಿಯ ದರವು ಗ್ರಾಹಕರಿಗೆ ಭಾರಿ ಶಾಕ್ ನೀಡಿದೆ. ಕೈಗಾರಿಕಾ ವಲಯದಿಂದ ಹೆಚ್ಚುತ್ತಿರುವ ಬೇಡಿಕೆ ಹಾಗೂ ಜಾಗತಿಕ ಮಾರುಕಟ್ಟೆಯ ಏರುಪೇರುಗಳಿಂದಾಗಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಜಿಗಿದಿದೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ ₹280ರಷ್ಟಿದೆ. ಇನ್ನು ಭಾರಿ ಪ್ರಮಾಣದಲ್ಲಿ ಬೆಳ್ಳಿ ಖರೀದಿಸುವವರಿಗೆ ದರ ಗಗನಕ್ಕೇರಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ ₹2,80,000 ತಲುಪಿದೆ.

ಬಂಗಾರ ಮತ್ತು ಬೆಳ್ಳಿಯ ದರಗಳ ಬೆನ್ನಲ್ಲೇ ಇದೀಗ ಪ್ಲಾಟಿನಂ ಬೆಲೆಯೂ ಸಹ ರಾಕೆಟ್ ವೇಗದಲ್ಲಿ ಜಿಗಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ದರದಲ್ಲಿ ಏರಿಕೆ ದಾಖಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಕಳೆದ ದಿನಕ್ಕೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಪ್ಲಾಟಿನಂ ಬೆಲೆಯಲ್ಲಿ ₹30ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಆಭರಣ ಪ್ರಿಯರು ಹೆಚ್ಚಾಗಿ ಖರೀದಿಸುವ 10 ಗ್ರಾಂ ಪ್ಲಾಟಿನಂ ದರದಲ್ಲಿ ಬರೋಬ್ಬರಿ ₹300ರಷ್ಟು ಜಿಗಿತ ಕಂಡುಬಂದಿದೆ. ಇನ್ನು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವವರಿಗೆ 100 ಗ್ರಾಂ ಪ್ಲಾಟಿನಂ ದರವು ನಿನ್ನೆಗಿಂತ ₹3,000ರಷ್ಟು ದುಬಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+