ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ಹರಿಬಿಟ್ಟವರಿಗೆ ಸಂಕಷ್ಟ: 29 ಅಕೌಂಟ್ ವಿರುದ್ಧ ಎಫ್‌ಐಆರ್, ಶೀಘ್ರ ಬಂಧನ
ಬೆಂಗಳೂರು: ಕಾಂತಾರ ಚಾಪ್ಟರ್ -1 ಸಿನಿಮಾದ ಕನಕವತಿ ಖ್ಯಾತಿಯ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಬಿಕಿನಿ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೈಬರ್ ವಿಭಾಗದಲ್ಲಿ ನಟಿ ದೂರು ದಾಖಲಿಸಿದ್ದರು. ತನಿಖೆ ಚುರುಕುಗೊಳಿಸಿರುವ ಸೈಬರ್ ಅಪರಾಧ ಪೊಲೀಸರು ವಿಡಿಯೋ ವೈರಲ್ ಮಾಡಿದ ಸುಮಾರು 29 ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನೂ ಕೆಲವರಿಗೆ ಕಾನೂನು ಸಂಕಷ್ಟ ಎದುರಾಗಲಿದೆ.
ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ರುಕ್ಮಿಣಿ ಅವರು ತಮ್ಮ ನಟನೆ, ಸೌಂದರ್ಯದ ಮೂಲಕ ಛಾಪು ಮೂಡಿಸಿದ್ದಾರೆ. ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಎಲ್ಲ ಅಭಿಮಾನಿಗಳು ಅಚ್ಚರಿಗೊಳ್ಳುವಂತೆ ಎಐ ತಂತ್ರಜ್ಞಾನ ಮೂಲಕ ಡೀಪ್ ಫೇಕ್ ಮಾಡಿ ರುಕ್ಮಿನಿ ಅವರದ್ದೇ ಎನ್ನುವಂತೆ ಬಿಕಿನಿ ವಿಡಿಯೋ ಹರಿಬಿಡಲಾಗಿತ್ತು.

ನೋಡಿದವರು ಇವರೇನಾ ರುಕ್ಮಿಣಿ ವಸಂತ್ ಎಂದು ನಂಬುವಂತಿತ್ತು. ಇಂಟರ್‌ನೆಟ್‌ನಲ್ಲಿ ಅಸಲಿ ಎನ್ನುವಂತೆ ವಿಡಿಯೋ, ಫೋಟೋಗಳು ಹರಿದಾಡಿದವು. ಬಳಿಕ ಇದೆಲ್ಲ ನಕಲಿ ಎನ್ನುವುದು ಸಾಬೀತಾಯಿತು. ತಂತ್ರಜ್ಞಾನ ದುರ್ಬಳಕೆಯಿಂದ ಹೀಗೆ ಮಾಡಲಾಗಿದೆ ಎಂದು ನಟಿ ಕಿಡಿ ಕಾರಿದ್ದರು. ಈ ಬಗ್ಗೆ ದೂರು ನೀಡುವುದಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ಕೊಟ್ಟಿದ್ದರು.
ವಿಡಿಯೋ ರಚಿಸಿದವರ ಬಂಧನ ಶೀಘ್ರ
ಅದರಂತೆ ಬೆಂಗಳೂರು ಸೈಬರ್ ಕ್ರೈಂ ವಿಭಾಗದಲ್ಲಿ ರುಕ್ಮಿಣಿ ವಸಂತ್ ಅವರನ್ನಿಟ್ಟುಕೊಂಡು ಡೀಪ್ ಫೇಕ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಡಿಯೋ ಹರಿಬಿಟ್ಟ ಒಟ್ಟು 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನೂ ವಿಡಿಯೋ ವೈರಲ್ ಮಾಡಿದವರಿಗೆ ನಡುಕ ಶುರುವಾಗಿದೆ. ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಪಾತ್ರ ಇರುವಂತಿದೆ. ಇನ್ನೂ ರುಕ್ಮಿಣಿ ಅವರ ಮುಖ ಡೀಪ್ ಫೇಕ್ ಮಾಡಿ ವಿಡಿಯೋ ರಚಿಸಿದವರ ಬಂಧನ ಶೀಘ್ರವೇ ಆಗುವ ಸಾಧ್ಯತೆ ಇದೆ.
ಈ ಹಿಂದೆ ರಶ್ಮಿಕಾಗೆ ಡೀಪ್ ಫೆಕ್ ಕಾಟ, ಆರೋಪಿಗಳ ಬಂಧನ
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸದುಪಯೋಗ ಪಡೆದುಕೊಳ್ಳಬೇಕು ವಿನಃ ದುರುಪಯೋಗ ಅಲ್ಲ ಎಂಬುದನ್ನು ಹೇಳಿಕೊಂಡು ಬರಲಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಕ್ರಮಕ್ಕೆ ಮುಂದಾಗಿತ್ತು. ಆದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ರುಕ್ಮಿಣಿ ವಸಂತ್ ಅವರಿಗೂ ಮೊದಲು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್ ಒಳಗೆ ಅರೆಬರೆ ಬಟ್ಟೆಯಲ್ಲಿ ಬರುವಂತೆ ಡೀಪ್ ಫೇಕ್ ಕೆಲವು ವಿಡಿಯೋಗಳನ್ನು ಹರಿಬಿಡಲಾಗಿತ್ತು. ಅಂದು ರಶ್ಮಿಕಾ ಸಹ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಳಿಕ ಆರೋಪಿಗಳ ಬಂಧನವಾಗಿತ್ತು.
My team and I have come across certain AI-generated images being circulated online claiming to be me.
— rukmini (@rukminitweets) May 23, 2026
I want to state clearly that these images are entirely fake and fabricated.
The creation and circulation of such manipulated content is deeply irresponsible and a serious… pic.twitter.com/8iitXTvFvT













Click it and Unblock the Notifications