• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...

|

ಮತ್ತೊಬ್ಬರ ಕಷ್ಟವನ್ನೂ, ದೌರ್ಬಲ್ಯವನ್ನೂ, ದೈಹಿಕ ನ್ಯೂನತೆಯನ್ನೂ ಟ್ರೋಲ್ ಮಾಡಿಕೊಂಡು ನಗುವ ಕಾಲ ಇದು! ಇತ್ತೀಚೆಗಷ್ಟೇ ಚಂದ್ರಗ್ರಹಣದ ದಿನವೂ ಕೃಷ್ಣವರ್ಣದ ವ್ಯಕ್ತಿಗಳ ಚಿತ್ರವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿತ್ತು.

ಈ ನೀಚ ಅಭಿರುಚಿಯ ಸ್ವಭಾವಕ್ಕೆ ತಾಜಾ ಉದಾಹರಣೆ ಕೇರಳದ ಹನಾನ್ ಹಮಿದ್ ಎಂಬ 21 ವರ್ಷದ ಹುಡುಗಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದು!

ಮೀನು ಮಾರಿ ಟ್ರೋಲ್ ಆದ ಹುಡುಗಿ ಈಗ ramp ಮೇಲೆ!

ಯೂನಿಫಾರ್ಮ್ ತೊಟ್ಟು ಮೀನು ಮಾರುತ್ತಿದ್ದ ಆ ಹುಡುಗಿಯ ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೀವನೋಪಾಯಕ್ಕೆಂದು ಆಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ನಗಲಾಗಿತ್ತು. 'ಕಾಲೇಜು ಓದೋದು ಬಿಟ್ಟು ಇದೇ ಕೆಲಸಾನಾ' ಎಂದು ತೀರಾ ಅಪಹಾಸ್ಯ ಮಾಡಲಾಗಿತ್ತು!

ಈ ಕೀಳು ಅಭಿರುಚಿಯ ಟ್ರೋಲ್ ಗಳು ಅಷ್ಟೇ ಕೀಳು ಅಭಿರುಚಿ ಹೊಂದಿರುವ ಕೆಲವು ವ್ಯಕ್ತಿಗಳಿಗೆ ಹಾಸ್ಯದ ವಿಷಯವಾಗಿದ್ದಿರಬಹದು, ನಾಲ್ಕು ದಿನ ಅವರನ್ನು ನಗಿಸಿರಲೂಬಹುದು. ಆದರೆ ಈ ಎಲ್ಲರ ಕುಹಕದ, ಅಪಹಾಸ್ಯದ ನಗುವಿನಿಂದಾಗಿ ಮರೆಯಾಗಿಹೋದ ಆ ಮುಗ್ಧ ಹುಡುಗಿಯ ಕರುಣಾಜನಕ ಕತೆ ಎಷ್ಟು ಜನರಿಗೆ ಗೊತ್ತು? ತನ್ನ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತು, ಹಗಲು, ರಾತ್ರಿ, ನಿದ್ದೆ, ಊಟಗಳನ್ನು ಮರೆತು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಆಕೆಯ ಕಾರ್ಪಣ್ಯ ಯಾರಿಗೆ ಗೊತ್ತು?!

ಹುಟ್ಟಿದ್ದು ಶ್ರೀಮಂತ ಅವಿಭಕ್ತ ಕುಟುಂಬದಲ್ಲಿ

ಹುಟ್ಟಿದ್ದು ಶ್ರೀಮಂತ ಅವಿಭಕ್ತ ಕುಟುಂಬದಲ್ಲಿ

ಹನಾನ್ ಹುಟ್ಟಿದ್ದು ಒಂದು ಶ್ರೀಮಂತ ಕುಟುಂಬದಲ್ಲೇ. ತ್ರಿಶೂರದ ಅವಿಭಕ್ತ ಕುಟುಂಬವೊಂದರಲ್ಲಿ ಜನಿಸಿದ ಹನಾನ್ ಗೆ ಚಿಕ್ಕ ವಯಸ್ಸಿನಲ್ಲಿ ಯಾವ ಕಷ್ಟವೂ ಇರಲಿಲ್ಲ. ತಂದೆ ಹಮಿದ್, ತಾಯಿ ಜುಹ್ರಾಬಿ, ತಮ್ಮ... ಇಷ್ಟೇ ಹನಾನ್ ಪ್ರಪಂಚ. ಆದರೆ ಅದ್ಯಾವುದೋ ದುರದೃಷ್ಟ ಗಳಿಗೆಯಲ್ಲಿ ತಂದೆ ಮದ್ಯವ್ಯಸನಿಯಾಗಿ ಬದಲಾದ. ಅದಾದ ನಂತರ ಶುರುವಾಯ್ತು ನರಕಸದೃಶ ಬದುಕು. ದಿನವೂ ಕುಡಿದುಬಂದು ಅಮ್ಮನಿಗೆ ಹೊಡೆವ ಅಪ್ಪ. ಈ ಬದುಕು ರೋಸಿಹೋಗಿತ್ತು ಹನಾನ್ ಗೆ.

ಬೇರೆಯಾದ ತಂದೆ-ತಾಯಿ

ಬೇರೆಯಾದ ತಂದೆ-ತಾಯಿ

ಹನಾನ್ ಹೈಸ್ಕೂಲ್ ಓದುವ ಸಮಯದಲ್ಲಿ ಆಕೆಯ ತಂದೆ-ತಾಯಿ ಕಾನೂನಾತ್ಮಕವಾಗಿ ಬೇರೆಯಾದರು. ತಾಯಿ ವಿಚ್ಛೇದನ ಪಡೆದ ಬಳಿಕ ತಾಯಿಯ ಜವಾಬ್ದಾರಿ ಸಂಪೂರ್ಣ ಹನಾನ್ ಮೇಲೆ ಬಿತ್ತು. ಆಕೆಯ ತಮ್ಮ ತಂದೆಯೊಂದಿಗಿದ್ದ. ಶಾಲೆ ಓದುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಮಾಡುತ್ತ, ಕಿವಿಯೋಲೆ, ಕರಕುಶಲ ವಸ್ತುಗಳನ್ನು ಮಾಡುತ್ತ ಅದರಲ್ಲಿ ಬಂದ ಹಣದಲ್ಲೇ ಬದುಕು ಸಾಗಿತ್ತು. ಕೆಲ ದಿನಗಳ ಬಳಿಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ ಹನಾನ್, ನೈಟ್ ಶಿಫ್ಟ್, ಮಾರ್ನಿಂಗ್ ಶಿಫ್ಟ್ ಎನ್ನುತ್ತ ದುಡಿಯುತ್ತ, ಜೊತೆಗೆ ಓದನ್ನೂ ಮುಂದುವರಿಸಿದ್ದರು.

ಶ್ರವಣ ದೋಷದಿಂದ ಕೆಲಸವೂ ಹೋಯ್ತು!

ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತೀರಾ ಶಬ್ದವಿದ್ದಿದ್ದರಿಂದ ಅವರಿಗೆ ಶ್ರವಣ ದೋಷ ಶುರುವಾಗಿತ್ತು. ಇದರಿಂದಾಗಿ ಅವರು ತಮ್ಮ ಕೆಲಸ ಕಳೆದುಕೊಳ್ಳಬೇಕಾಯ್ತು. ನಂತರ ಮತ್ತೆ ಇನ್ನೊಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಹನಾನ್ ಗೆ ಡಾಕ್ಟರ್ ಆಗುವ ಕನಸು. ಬಿಎಸ್ಸಿ ಓದುತ್ತಿರುವ ಆಕೆಗೆ ಮೀನು ಮಾರುವುದರಿಂದಲೂ ಒಂದಷ್ಟು ಹಣ ದುಡಿಯಬಹುದು ಎಂಬುದು ತಿಳಿದು, ಮೀನು ಮಾರುವುದಕ್ಕೆ ಆರಂಭಿಸಿದರು. ಕಾಲೇಜು ಮುಗಿಸಿ ಸೀದಾ ಮೀನು ಮಾರುಕಟ್ಟೆಗೆ ಇಲ್ಲವೆಂದರೆ ದಿನ ಬೆಳಗ್ಗಿನ ಜಾವವೆಲ್ಲ 3:30 ಕ್ಕೆ ಸರಿಯಾಗಿ ಮಾರುಕಟ್ಟೆಗೆ. ನಂತರ ಹಾಗೆಯೇ ಕಾಲೇಜಿಗೆ!

ಟ್ರೋಲಿಗರ ಕೀಳು ಅಭಿರುಚಿ!

ಇಂಥದೇ ಒಂದು ದಿನ ಕಾಲೇಜಿನಿಂದ ಬಂದು ತಕ್ಷಣ ಮೀನು ಮಾರುವುದಕ್ಕೆಂದು ಹೊರಟ ಹನಾನ್ ಅದ್ಯಾರೋ ಕೀಳು ಅಭಿರುಚಿಯವರಿಗೆ ಕಂಡಳು. ಆಕೆಯ ಚಿತ್ರ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಯಿತು. ಹೊತ್ತಿನ ಊಟಕ್ಕಾಗಿ ಕಷ್ಟಪಡುತ್ತಿರುವ ಆಕೆಯನ್ನು ಆಡಿಕೊಂಡು ನಕ್ಕ ಟ್ರೋಲಿಗರನ್ನು ಕೇರಳ ಸರ್ಕಾರ ತರಾಟೆಗೆದೆ ತೆಗೆದುಕೊಂಡಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹನಾನ್ ಬೆಂಬಲಕ್ಕೆ ನಿಂತರು! ಈ ಘಟನೆಯ ನಂತರ ಆಕೆಯ ಬೆಂಬಲಕ್ಕೆ ಹಲವಾರು ಸೆಲೆಬ್ರಿಟಿಗಳು ನಿಂತರು. ಸಾಮಾಜಿಕ ಕಾರ್ಯಕರ್ತರು ಆಕೆಯ ಸಹಾಯಕ್ಕೆ ಬಂದರು. ಸದ್ಯಕ್ಕೆ ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಸಿಕ್ಕಿದೆ.

English summary
Hanan Hamid a student from Kerala trolled after selling fish by wearing College uniform. Here is her tragical story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X