ಯುಕೆಯಿಂದ ಬಂದು ಆರ್‌ಸಿಬಿ ಫೈನಲ್ ಪಂದ್ಯ ವೀಕ್ಷಿಸಿದ ಮಹಿಳಾ ಅಭಿಮಾನಿ, ಇನ್‌ಸ್ಟಾ ಪೋಸ್ಟ್ ಭಾರಿ ವೈರಲ್
RCB Fan: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರೀ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವಿದೆ. ಇತ್ತೀಚೆಗಷ್ಟೇ ನಡೆದ ಐಪಿಎಲ್ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಯುಕೆಯಿಂದ ಆರ್‌ಸಿಬಿಯ ಮಹಿಳಾ ಅಭಿಮಾನಿಯೊಬ್ಬರು ಒಂಟಿಯಾಗಿ ಬಂದಿದ್ದರು. ಈ ವೇಳೆ ಅವರು ಆಡಿದ ಒಂದೊಂದು ಮಾತುಗಳು ಬೆಂಗಳೂರಿಗರ ಮನ ಗೆದ್ದಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಅವರು ಇಲ್ಲಿ ತಮಗೆ ಸಿಕ್ಕ ಅಭೂತಪೂರ್ವ ಸ್ವಾಗತ ಮತ್ತು ಕನ್ನಡಿಗರ ಸೌಜನ್ಯದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹಾಗಾದ್ರೆ ಇದರಲ್ಲಿ ಏನು ಇದೆ ಎಂಬ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಆರ್‌ಸಿಬಿ ಪಂದ್ಯ ವೀಕ್ಷಣೆಗೆ ವಿದೇಶದಿಂದ ಬಂದ ಮಹಿಳೆ
ಯುಕೆಯ ಈ ಅಭಿಮಾನಿ ತಮ್ಮ ನೆಚ್ಚಿನ ತಂಡದ ಫೈನಲ್ ಪಂದ್ಯವನ್ನು ಮೈದಾನದಲ್ಲೇ ನೋಡಬೇಕೆಂಬ ಒಂದೇ ಒಂದು ಆಸೆಯಿಂದ ಯಾವುದೇ ಪ್ಲಾನ್ ಇಲ್ಲದೆ, ಒಂಟಿಯಾಗಿ ಲಂಡನ್‌ನಿಂದ ಭಾರತಕ್ಕೆ ವಿಮಾನ ಹತ್ತಿದ್ದರು. ಇಲ್ಲಿ ತಮಗಾದ ಮರೆಯಲಾಗದ ಅನುಭವವನ್ನು ಹಂಚಿಕೊಂಡಿರುವ ಅವರು, ತಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಗೌರವದಿಂದ ನಡೆಸಿಕೊಂಡರು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಆರ್‌ಸಿಬಿ ಅಭಿಮಾನಿಗಳ ಮನಗೆದ್ದ ವಿದೇಶಿ ಮಹಿಳೆ
'ನಾನು ಯಾವುದೇ ಮುಂಚಿತ ಯೋಜನೆ ಇಲ್ಲದೆ, ಸಂಪೂರ್ಣವಾಗಿ ಒಂಟಿಯಾಗಿ ಬಂದಿದ್ದೆ. ಆದರೆ ಇಲ್ಲಿ ನನಗೆ ಸಿಕ್ಕ ಅನುಭವ ಅದ್ಭುತವಾಗಿತ್ತು. ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ನನ್ನ ಬಳಿ ಅತ್ಯಂತ ದಯೆ ಮತ್ತು ಪ್ರೀತಿಯಿಂದ ನಡೆದುಕೊಂಡರು. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅಪರಿಚಿತರೇ ಆಗಿದ್ದರೂ ನನ್ನನ್ನು ತಮ್ಮವರಂತೆ ಬರಮಾಡಿಕೊಂಡರು. ಆರ್‌ಸಿಬಿ ಮೇಲಿರುವ ಕ್ರೇಜ್ ಮತ್ತು ಬೆಂಗಳೂರಿನ ಜನರ ಪ್ರೀತಿ ನನ್ನ ಹೃದಯ ಗೆದ್ದಿದೆ,' ಎಂದು ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ವಿದೇಶದಿಂದ ಹೊಸ ನಗರಕ್ಕೆ ಒಂಟಿಯಾಗಿ ಬಂದಾಗ ಎದುರಾಗುವ ಭಯ ಅಥವಾ ಅಪರಿಚಿತ ಭಾವನೆ ಇಲ್ಲಿ ತಮಗೆ ಎಳ್ಳಷ್ಟೂ ಕಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ. ಹೋಟೆಲ್ ಸಿಬ್ಬಂದಿಯಿಂದ ಹಿಡಿದು, ಆಟೋ ಚಾಲಕರು ಮತ್ತು ರಸ್ತೆಯಲ್ಲಿ ಸಿಕ್ಕ ಸಾಮಾನ್ಯ ಆರ್‌ಸಿಬಿ ಅಭಿಮಾನಿಗಳು ಕೂಡ ತಮಗೆ ಪಂದ್ಯದ ಟಿಕೆಟ್ ಪಡೆಯಲು ಮತ್ತು ಕ್ರೀಡಾಂಗಣ ತಲುಪಲು ಸ್ವಯಂಪ್ರೇರಿತರಾಗಿ ಸಹಾಯ ಮಾಡಿದರು ಎಂದು ಅವರು ನೆನೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ
ಈ ಯುಕೆಯ ಅಭಿಮಾನಿ ಹಂಚಿಕೊಂಡಿರುವ ಪೋಸ್ಟ್ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು, 'ಇದೇ ನಮ್ಮ ಆರ್‌ಸಿಬಿ ಅಭಿಮಾನಿಗಳ ಹೆಮ್ಮೆ ಮತ್ತು ಅತಿಥಿ ದೇವೋ ಭವ ಎಂಬ ಸಂಸ್ಕೃತಿಗೆ ನಾವು ಯಾವತ್ತೂ ಬದ್ಧ,' ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆರ್‌ಸಿಬಿ ತಂಡವು ಕೇವಲ ಪಂದ್ಯಗಳನ್ನು ಮಾತ್ರ ಗೆಲ್ಲುತ್ತಿಲ್ಲ. ಬದಲಿಗೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕ್ರೀಡಾ ಪ್ರೇಮಿಗಳನ್ನು ಬೆಂಗಳೂರಿನತ್ತ ಸೆಳೆಯುವಂತೆ ಮಾಡುತ್ತಿದೆ ಮತ್ತು ಕನ್ನಡಿಗರ ಮುಗ್ಧ ಹಾಗೂ ಸಹೃದಯಿ ವ್ಯಕ್ತಿತ್ವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುತ್ತಿದೆ ಎಂಬುದಕ್ಕೆ ಈ ವಿದೇಶಿ ಯುವತಿನ ಅನುಭವವೇ ಸಾಕ್ಷಿಯಾಗಿದೆ.
Do the thing that scares you.
— Erika Morris (@ErikaMorris79) June 1, 2026
Just 3 days ago I travelled 4,275 miles to India. Alone. For just 72 hours. All to watch the IPL and finally experience Royal Challengers Bengaluru in person.
On paper, it sounds ridiculous. Exhausting flights, barely any sleep, navigating a country… pic.twitter.com/5CfNbONnDa












Click it and Unblock the Notifications