ದೇರಾ ಮುಖ್ಯಸ್ಥ ಮಿಮಿಕ್ರಿ ಮಾಡಿದ್ದಕ್ಕೆ ನಟ ಕಿಕು ಬಂಧನ

Posted By:
Subscribe to Oneindia Kannada

ಮುಂಬೈ, ಜ. 13: 'ಕಾಮಿಡಿ ನೈಟ್ ವಿತ್ ಕಪಿಲ್' ಟಾಕ್ ಶೋನ ನಟ ಕಿಕು ಶಾರ್ದ ಅಲಿಯಾಸ್ ಪಲಕ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೇರಾ ಸಚ್ಚಾ ಸೌದಾ ಸಮುದಾಯದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಮಿಮಿಕ್ರಿ ಮಾಡಿದ ತಪ್ಪಿಗೆ ಕಿಕು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಜನಪ್ರಿಯ ಟಿವಿ ನಟ ಕಿಕು ಅವರಿಗೆ ಈಗ ಹರ್ಯಾಣದ ಕಾಯಿಥಾಲ್ ಪೊಲೀಸರು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ವಯಂ ಘೋಷಿತ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅಣಕು ಮಾಡಿದ ಆರೋಪವನ್ನು ಕಿಕು ಹೊತ್ತಿದ್ದಾರೆ. [ಸಕತ್ ಕಾಮಿಡಿ 'ಲೆಸ್' ಚಿತ್ರದಲ್ಲಿ ಕಪಿಲ್ 'ಕಮಾಲ್']

ನಾನೊಬ್ಬ ನಟ ನನಗೆ ಕೊಟ್ಟ ಪಾತ್ರವನ್ನು ನಾನು ನಿಭಾಯಿಸಿರುವೆ. ನಿರ್ದೇಶಕರು ಹೇಳಿದಂತೆ ಗೆಟ್ ಅಪ್ ಹಾಕಿಕೊಂಡಿದ್ದೆ. ನಾನು ಈಗಾಗಲೇ ದೇರಾ ಸಚ್ಚಾ ಸೌದಾ ಸಮುದಾಯಕ್ಕೆ ಕ್ಷಮೆಯಾಚಿಸಿದ್ದೇನೆ. ನಾನು ಯಾವ ಸಮುದಾಯ ಅಥವಾ ಬಾಬಾಗಳಿಗೆ ಅಗೌರವ ಸಲ್ಲಿಸಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಕ್ಷಮಿಸಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ['ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ]

ಯಾವುದನ್ನು ಪ್ರಸಾರ ಮಾಡಬೇಕು ಯಾವುದನ್ನು ಕಟ್ ಮಾಡಬೇಕು ಎಂಬುದು ಚಾನೆಲ್ ನ ಹೊಣೆಯಾಗಿರುತ್ತದೆ. ಇಲ್ಲಿ ನಾನು ಸ್ಕ್ರಿಪ್ಟ್ ಬರೆದು ನಾನೇ ಎಲ್ಲವನ್ನು ನಿಭಾಯಿಸುತ್ತಿಲ್ಲ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕಿಕು ಶರ್ಮ ಅಲಿಯಾಸ್ ಪಲಕ್ ಇನ್ ಟ್ರಬಲ್

ಕಿಕು ಶರ್ಮ ಅಲಿಯಾಸ್ ಪಲಕ್ ಇನ್ ಟ್ರಬಲ್

'ಕಾಮಿಡಿ ನೈಟ್ ವಿತ್ ಕಪಿಲ್' ಟಾಕ್ ಶೋನ ನಟ ಕಿಕು ಶರ್ಮ ಅಲಿಯಾಸ್ ಪಲಕ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೇರಾ ಸಚ್ಚಾ ಸೌದಾ ಸಮುದಾಯದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಮಿಮಿಕ್ರಿ ಮಾಡಿದ ತಪ್ಪಿಗೆ ಕಿಕು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪಲಕ್ ಬಂಧನ ಖಂಡಿಸಿ ಸಹ ನಟ, ನಟಿಯರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಿಕು ಶರ್ಮ ಬಂಧನ ಸರಿಯಿಲ್ಲ

ಕಿಕು ಶರ್ಮ ಬಂಧನ ಸರಿಯಿಲ್ಲ ಎಂದ ಅಭಿಮಾನಿಗಳು

ಸೆಕ್ಷನ್ 295ಎ ಬದಲಾಗಬೇಕಿದೆ

ಸೆಕ್ಷನ್ 295ಎ ಬದಲಾಗಬೇಕಿದೆ ಎಂಬ ಎಐಬಿ ಖ್ಯಾತಿಯ ಕಾಮಿಡಿಯನ್ ತನ್ಮಯ್ ಭಟ್

ಪ್ರಧಾನಿ ಸಚಿವಾಲಯಕ್ಕೆ ಮನವಿ

ಪ್ರಧಾನಿ ಸಚಿವಾಲಯಕ್ಕೆ ಮನವಿ, ಹರ್ಯಾಣ ಪೊಲೀಸರ ಕ್ರಮ ಸರಿಯೇ ಎಂದು ಪ್ರಶ್ನಿಸಿದ ನಟ, ನಿರೂಪಕ ರಣವೀರ್ ಶೋರ್

ಟಿವಿ ಕಲಾವಿದರಿಗೆ ಉಳಿಗಾಲವಿಲ್ಲ

ಟಿವಿ ಕಲಾವಿದರಿಗೆ ಉಳಿಗಾಲವಿಲ್ಲ, ರಾಮ್ ರಹಿಮ್ ಅವರನ್ನು ನ್ಯಾಯಾಂಗ ಬಂಧನ ರಿಯಲ್ ಜೋಕ್.

ಮಿಮಿಕ್ರಿ ಮಾಡಿದವರೆಲ್ಲರನ್ನು ಬಂಧಿಸುತ್ತೀರಾ?

ಮಿಮಿಕ್ರಿ ಮಾಡಿದವರೆಲ್ಲರನ್ನು ಬಂಧಿಸುತ್ತೀರಾ? ಕಿಕು ಶಾರ್ದಾ ಅವರನ್ನು ಬಂಧಿಸಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂಬ ಟ್ವಿಟ್ಟರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Kiku Sharda, alias Palak of Comedy Nights with Kapil, has been arrested on Wednesday for for mimicking Dera Sacha Sauda chief Gurmeet Ram Rahim Singh.
Please Wait while comments are loading...