ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion
ಇಸ್ರೇಲ್ ಸೇನೆ ಹಾಗೂ ಇಸ್ರೇಲ್ ದೇಶದ ಗುಪ್ತಚರ ಇಲಾಖೆಗಳು ಮತ್ತೊಂದು ದೊಡ್ಡ ಆಘಾತವನ್ನು ತನ್ನ ಶತ್ರು ಇರಾನ್‌ಗೆ ನೀಡಿವೆ. ಇರಾನ್ ದೇಶವನ್ನು ಹೇಗಾದರೂ ಮಾಡಿ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿನ ಆಡಳಿತ ನಿಯಂತ್ರಿಸಬೇಕು ಎಂಬುದು ಇಸ್ರೇಲ್ ಹಾಗೂ ಅಮೆರಿಕದ ಉದ್ದೇಶ ಎಂಬ ಆರೋಪ ಇದೆ. ಆದರೆ ಇರಾನ್ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದ್ದು, ಅದನ್ನು ತೊಲಗಿಸಲು ನಾವು ಈ ಯುದ್ಧ ಮಾಡುತ್ತಿದ್ದೇವೆ, ಇರಾನ್ ಜನರಿಗೆ ಯುದ್ಧದ ಮೂಲಕ ಸ್ವಾತಂತ್ರ್ಯ ಕೊಡಿಸುವ ಕೆಲಸ ಮಾಡ್ತಾ ಇದ್ದೀವಿ ಎನ್ನುತ್ತಿದ್ದಾರೆ ಇಸ್ರೇಲ್ ಹಾಗೂ ಅಮೆರಿಕ ನಾಯಕರು. ಈ ಸಮಯದಲ್ಲೇ ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್ ಮತ್ತೊಂದು ಆಘಾತವನ್ನು ಇರಾನ್ ನಾಯಕರಿಗೆ ನೀಡಿದೆ.
ಇಸ್ರೇಲ್ ದೇಶ ಚಿಕ್ಕದಾಗಿ ಇದ್ದರೂ, ಇಸ್ರೇಲ್‌ನ ಸೇನಾ ಶಕ್ತಿ ಮಾತ್ರ ದೊಡ್ಡ ದೊಡ್ಡ ದೇಶಗಳನ್ನೂ ಮೀರಿಸುವ ರೀತಿ ಇದೆ. ಅದರಲ್ಲೂ ಇಸ್ರೇಲ್ ಬಳಿ ವಿನಾಶಕಾರಿ ಅಸ್ತ್ರಗಳು ಇದ್ದು, ಇಸ್ರೇಲ್ ಕುರಿತು ಶತ್ರು ದೇಶಗಳಿಗೆ ಭಯ ಕಾಡುತ್ತಲೇ ಇದೆ. ಹೀಗಿದ್ದಾಗ ಇರಾನ್ ನೇರವಾಗಿ ಇಸ್ರೇಲ್ ರಾಜಧಾನಿ ಮೇಲೆ ದಾಳಿ ಮಾಡುತ್ತಿರುವ ಸಮಯದಲ್ಲೇ ಪಕ್ಕಾ ಪ್ಲಾನ್ ಮಾಡಿ ಇರಾನ್ ಪರಮಾಣು ವಿಜ್ಞಾನಿ ಹತ್ಯೆಯನ್ನ ಮಾಡಿದೆಯಂತೆ ಇಸ್ರೇಲ್. ಈ ಬಗ್ಗೆ ಖುದ್ದು ಇಸ್ರೇಲ್ ಮಾಹಿತಿ ನೀಡಿದ್ದು, ಮಧ್ಯಪ್ರಾಚ್ಯ ಮತ್ತೊಮ್ಮೆ ಯುದ್ಧದ ಕುಲುಮೆಯಲ್ಲಿ ನರಳುವುದು ಫಿಕ್ಸ್ ಆಗುತ್ತಿದೆ. ಅರಬ್ ದೇಶಗಳು ಹಾಗೂ ತೈಲ ಉತ್ಪಾದಕ ರಾಷ್ಟ್ರಗಳು ಈ ಘಟನೆಯಿಂದ ಮತ್ತಷ್ಟು ಚಿಂತೆಗೀಡಾಗಿವೆ.

ಇರಾನ್ ವಿರುದ್ಧ ನೆತನ್ಯಾಹು ವಾಗ್ದಾಳಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಬಗ್ಗೆ ಮಾತನಾಡಿದ್ದು, ಇರಾನ್ ಪರಮಾಣು ಶಕ್ತಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಜ್ಞಾನಿ ಇಸ್ರೇಲ್ ದಾಳಿಯಲ್ಲಿ ಹತ್ಯೆ ಆಗಿರುವುದನ್ನ ತಿಳಿಸಿದ್ದಾರೆ. ಫೆಬ್ರವರಿ 28 ಶನಿವಾರ ಆರಂಭ ಆದ ಯುದ್ಧ ಬಳಿಕ ಮೊದಲ ಬಾರಿ ಮಾಧ್ಯಮಗಳ ಎದುರು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಾತನಾಡಿದ್ದು, ಈ ದಾಳಿ ಇರಾನ್ ಸೇನೆ ಹಾಗೂ ಭದ್ರತಾ ವ್ಯವಸ್ಥೆಗೆ ಭಾರೀ ಹೊಡೆತ ನೀಡಿದೆ ಎಂದಿದ್ದಾರೆ. ನಾವು ಇರಾನ್ ಭಯೋತ್ಪಾದಕ ಆಡಳಿತ ನಾಶಪಡಿಸಿ ಅದರ ಸಹಚರ ಶಕ್ತಿಗಳನ್ನೂ ಹೊಡೆದು ಉರುಳಿಸುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ಇಸ್ರೇಲ್ ಮತ್ತು ಇರಾನ್ ನಡುವೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಹೊಡೆದಾಟ & ಬಡಿದಾಟ ಫಿಕ್ಸ್ ಆಗುತ್ತಿದೆ.












Click it and Unblock the Notifications