Daily Horoscope July 21: ಈ ರಾಶಿಯವರಿಗೆ ಅದೃಷ್ಟದ ದಿನ, ವೃತ್ತಿ-ಆರೋಗ್ಯದಲ್ಲಿ ಪ್ರಗತಿ; ದಿನ ಭವಿಷ್ಯ
Horoscope July 21: ಜುಲೈ 21ರ ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಜುಲೈ 16ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ಎಂಬುದನ್ನು ಇಲ್ಲಿ ತಿಳಿಯಿರಿ.
ಮೇಷ ರಾಶಿ (Aries):
ಇಂದು ನಿಮಗೆ ಅದೃಷ್ಟದ ದಿನವಾಗಲಿದೆ. ಎಲ್ಲಾ ಕೆಲಸಗಳಲ್ಲಿಯೂ ಸಕಾರಾತ್ಮಕ ಫಲ ಸಿಗುವುದು. ಆದರೂ ಕೋಪದ ಮೇಲೆ ನಿಯಂತ್ರಣ ಇರಲಿ. ತಾಳ್ಮೆಯಿಂದ ಮುಂದುವರೆಯಿರಿ. ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಅಪಾಯಕಾರಿ ಎಂದೆನಿಸುವ ಕೆಲಸಕ್ಕೆ ಕೈ ಹಾಕದಿರುವುದು ಸೂಕ್ತ.

ವೃಷಭ ರಾಶಿ (Taurus):
ಸಂತೋಷದಿಂದ ತುಂಬಿದ ದಿನವಾಗಿರಲಿದೆ. ಹೊಸ ಕೆಲಸ ಆರಂಭಿಸಲು ಅತ್ಯುತ್ತಮ ಸಮಯ. ಸಮಯ ನಿರ್ವಹಣೆಗೆ ವಿಶೇಷ ಗಮನ ಕೊಡಿ. ಉದ್ಯಮಿಗಳು ತಮ್ಮ ಯೋಜನೆಗಳನ್ನು ಗೌಪ್ಯವಾಗಿಟ್ಟರೆ ಯಶಸ್ಸು ಸಿಗಬಹುದು. ಕೆಲಸದ ಹೊರೆ ಹೆಚ್ಚುವುದು.
ಮಿಥುನ ರಾಶಿ (Gemini):
ಇಂದು ಅದೃಷ್ಟ ನಿಮ್ಮ ಕಡೆ ಇರುತ್ತದೆ. ಇಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುವುದು. ವ್ಯವಹಾರದಲ್ಲಿ ವೃದ್ಧಿಯಾಗುವುದು. ಹಠಾತ್ ಆರ್ಥಿಕ ಲಾಭವು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಆರೋಗ್ಯ ಉತ್ತಮವಾಗಿರುವುದು.
ಕರ್ಕಾಟಕ ರಾಶಿ (Cancer):
ಕರ್ಕಾಟಕ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ವಿದೇಶ ಪ್ರವಾಸ ಮಾಡಲು ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಅನಿರೀಕ್ಷಿತವಾಗಿ ಆಗುವ ಪರಿಚಯ ಪ್ರಯೋಜನಕಾರಿಯಾಗಿರುವುದು. ಕೆಲವು ವೈಯಕ್ತಿಕ ಕೆಲಸಗಳಲ್ಲಿ ಸಹೋದರ ಸಹೋದರಿಯಿಂದ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಸಿಗುವುದು.
ಸಿಂಹ ರಾಶಿ (Leo):
ಬಡ್ತಿಯ ಸಾಧ್ಯತೆಗಳಿವೆ. ಇಂದು ಕಠಿಣ ಪರಿಸ್ಥಿತಿಯಲ್ಲಿ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಮನೆಯಲ್ಲಿ ಮತ್ತು ವ್ಯವಹಾರದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ವೈವಾಹಿಕ ಜೀವನವು ಸಿಹಿಯಾಗಿರುತ್ತದೆ. ಆಸಿಡಿಟಿ ಸಮಸ್ಯೆ ಕಾಡಬಹುದು.
ಕನ್ಯಾ ರಾಶಿ (Virgo):
ಸಾಮಾಜಿಕವಾಗಿ ಗೌರವ ಹೆಚ್ಚಾಗುವ ದಿನ. ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ಜನರು ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಭಾವಿತರಾಗುತ್ತಾರೆ. ಆಸ್ತಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುವುದು.
ತುಲಾ ರಾಶಿ (Libra):
ವ್ಯವಹಾರದಲ್ಲಿ ಅಭಿವೃದ್ದಿಯಾಗುವುದು. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಆರ್ಥಿಕ ಲಾಭವಾಗುವುದು. ವಿದ್ಯಾರ್ಥಿಗಳು ತಮ್ಮ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಸಫಲರಾಗುತ್ತಾರೆ. ಸಂಬಂಧಗಳು ಹೆಚ್ಚು ಸೌಹಾರ್ದಯುತವಾಗುತ್ತವೆ.
ವೃಶ್ಚಿಕ ರಾಶಿ (Scorpio):
ಭೂಮಿ ಅಥವಾ ವಾಹನ ಖರೀದಿಸಲು ಯೋಜಿಸುತ್ತಿದ್ದರೆ, ನಿರ್ಧಾರ ತೆಗೆದುಕೊಳ್ಳುವುದಕ್ಕೆ ಶುಭ ದಿನ. ಸರ್ಕಾರಿ ನೌಕರರಿಗೆ ಬಡ್ತಿ ಸಿಗಬಹುದು. ವಿದ್ಯಾರ್ಥಿಗಳು ಇಂದು ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಆರೋಗ್ಯ ಉತ್ತಮವಾಗಿರುವುದು.
ಧನು ರಾಶಿ (Sagitarius):
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಅನಗತ್ಯ ವಿಚಾರಗಳಿಗೆ ತಲೆ ಹಾಕಬೇಡಿ. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವುದರಿಂದ ಮಾನಸಿಕ ತೃಪ್ತಿ ಸಿಗುತ್ತದೆ. ರಾಜಕೀಯದಲ್ಲಿ ತೊಡಗಿರುವವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.
ಮಕರ ರಾಶಿ (Capricorn):
ಉದ್ಯಮಿಗಳಿಗೆ ಶುಭ ದಿನ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಪಾಲುದಾರಿಕೆಯಲ್ಲಿ ಮಾಡುವ ಉದ್ಯಮ ಪ್ರಯೋಜನಕಾರಿಯಾಗಿರುವುದು. ಕೆಲಸದಲ್ಲಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲು ಇಂದು ಒಳ್ಳೆಯ ದಿನ. ಶಿಕ್ಷಕರಿಗೆ ಇಂದು ಅನುಕೂಲಕರವಾಗಿರುತ್ತದೆ. ನಿಮಗೆ ಬೇಕಾಗಿರುವ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಕುಂಭ ರಾಶಿ (Aquarius):
ನಿಮ್ಮ ಜೀವನದಲ್ಲಿ ಹೊಸ ಬದಲಾವಣೆ ತರುವ ದಿನ. ಹಠಾತ್ ಆರ್ಥಿಕ ಲಾಭವಾಗಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಮಯ ವ್ಯರ್ಥ ಮಾಡಬೇಡಿ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಹಿರಿಯರ ಸಲಹೆ ಪಡೆಯುವುದು ಒಳ್ಳೆಯದು.
ಮೀನ ರಾಶಿ (Pisces):
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ವಿಶೇಷ ವ್ಯಕ್ತಿಯ ಸಹಾಯದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಗುವುದು. ಕುಟುಂಬದ ವಾತಾವರಣವು ಆಹ್ಲಾದಕರ ಮತ್ತು ಶಾಂತಿಯುತವಾಗಿರುತ್ತದೆ.


Click it and Unblock the Notifications
