Dear Bengaluru: ಬೆಂಗಳೂರಿಗರೇ ನಿಮ್ಮೊಂದಿಗೆ ಈ ವಿಚಾರವಾಗಿ ಮಾತನಾಡಬೇಕು ಎಂದ ನಾರ್ಥಿ: ಕನ್ನಡಿಗರು ಹೇಳಿದ್ದೇನು

Dear Bengaluru: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದಲೂ ಮಳೆಯಾಗುತ್ತಿದೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾತಾವರಣವು ತಣ್ಣಗಾಗಿದೆ. ಬೆಂಗಳೂರಿನ ತಂಪಾದ ಹವಾಮಾನವೇ ಇಲ್ಲಿ ಜನರು ವಾಸಿಸಲು ಇಷ್ಟಪಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ, ಬೆಂಗಳೂರಿಗೆ ಬಂದಿರುವ ನಾರ್ಥಿಯೊಬ್ಬರು ನಗರದ ತಂಪು ಮತ್ತು ಮೋಡ ಕವಿದ ವಾತಾವರಣದಿಂದ ತುಂಬಾ ಸೋಮಾರಿತನ ಬರ್ತಿದ್ದು, ಯಾವುದೇ ಕೆಲಸ ಮಾಡಲು ಮನಸ್ಸೇ ಆಗುತ್ತಿಲ್ಲ ಕಣ್ರೀ ಅಂತ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ನಗರದ ನಿದ್ರೆಗೆಡಿಸುವ ಹವಾಮಾನದ ಹೊರತಾಗಿಯೂ ಬೆಂಗಳೂರಿನ ನಿವಾಸಿಗಳು ಪ್ರತಿದಿನ ಬೆಳಿಗ್ಗೆ ಎಚ್ಚರಗೊಳ್ಳುತ್ತಾರೆ, ಸಿದ್ಧರಾಗುತ್ತಾರೆ ಮತ್ತು ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಸ್ಟ್ಯಾಂಡಪ್ ಕಾಮಿಡಿಯನ್ ಶುಭಂ ಪೂಜಾರಿ ಹಾಸ್ಯಮಯವಾಗಿ ಪ್ರಶ್ನಿಸಿದ್ದಾರೆ. ನಾನು ಆಗಾಗ ಸ್ಟ್ಯಾಂಡ್ಅಪ್ ಕಾಮಿಡಿ ಶೋ ನೀಡುವುದಕ್ಕೆ ಬೆಂಗಳೂರಿಗೆ ಆಗಾಗ ಬರುತ್ತೇನೆ. ಆದರೆ ಇಲ್ಲಿ ಬಂದ ಮೇಲೆ ನನಗೆ ಕೆಲಸ ಮಾಡದೆ ಆರಾಮಾಗಿ ಇರ್ಬೇಕು ಅನ್ಸುತ್ತೆ. ನೀವು ಹೆಂಗೆ ಕೆಲಸಕ್ಕೆ ಹೋಗ್ತಿರ ಅಂತ ಕೇಳಿದ್ದಾರೆ.

Dear Bengaluru

Dear Bengaluru: ವೈರಲ್ ವಿಡಿಯೋದಲ್ಲಿ ಏನಿದೆ

ಇನ್ನು ಸೋಶಿಯಲ್ ಮೀಡಿಯಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶುಭಂ ಪೂಜಾರಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿಗರೇ ನಿಮ್ಮಲ್ಲಿ ನನ್ನದೊಂದು ಪ್ರಶ್ನೆ ಇದೆ. ಬೆಂಗಳೂರಿನಲ್ಲಿ ವೆದರ್ ಇಷ್ಟೊಂದು ಸ್ವೀಟ್ ಇದೆ. ನೀವು ಬೆಳಗ್ಗೆ ಹೇಗೆ ಎದ್ದೇಳುತ್ತೀರಿ, ಹೇಗೆ ರೆಡಿಯಾಗಿ ಈ ವೆದರ್‌ನಲ್ಲಿ ನಿಮ್ಮ ಕೆಲಸಗಳಿಗೆ ಹೋಗುತ್ತೀರಿ ಹೇಳಿ ಅಂತ ಅವರು ಕೇಳಿದ್ದಾರೆ. ನಿಮಗೆ ಯಾವ Motivaiinal ಏನು, ಇದರ ರಹಸ್ಯವಾದರೂ ಯಾವುದು ಅಂತ ಅವರು ಪ್ರಶ್ನೆ ಮಾಡಿದ್ದಾರೆ.

ನಾನಂತೂ ಬೆಂಗಳೂರಲ್ಲಿ ತುಂಬಾ ಸೊಂಬೇರಿ ಆಗ್ಬಿಟ್ಟಿದ್ದಿನಿ ಕಣ್ರಿ... ಮನೆಯಲ್ಲೇ ಮಲ್ಕೋ, ಫೋನ್ ಸ್ಕ್ರೋಲ್ ಮಾಡಿಕೊಂಡು ಯಾವುದೇ ಕೆಲಸ ಮಾಡದೆ ಇದ್ರೆ ಸಾಕು ಅಂತಲೂ ಅವರು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು ಈ ವೈರಲ್ ವಿಡಿಯೋಗೆ ನೆಟ್ಟಿಗರು ಮಜವಾಗಿ ರಿಪ್ಲೈ ಮಾಡಿದ್ದಾರೆ. ಈ ವೈರಲ್ ವಿಡಿಯೋಗೆ ಬೆಂಗಳೂರಿಗರು ಹಾಗೂ ನೆಟ್ಟಿಗರು ಹೇಳಿದ್ದೇನು ಎನ್ನುವ ವಿವರ ನೋಡೋಣ.

ಬೆಂಗಳೂರು ಸ್ವೀಟ್ ವೆದರ್; ನೆಟ್ಟಿಗರು ಹೇಳಿದ್ದೇನು

ಬೆಂಗಳೂರಿನ ವೆದರ್ ಬಗ್ಗೆ ಶುಭಂ ಪೂಜಾರಿ ಅವರು, Dear Bengaluru, we need to TALK. (Bengaluru, Namma Bengaluru, Weather, Rant, Explore Page, Explore, FYP, Comedy) ಎನ್ನುವ ಪದಗಳನ್ನು ಬಳಸಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮಜವಾಗಿಯೇ ರಿಪ್ಲೈ ಕೊಟ್ಟಿದ್ದಾರೆ. "ಸರ್, ನೀವು ಹೇಳುತ್ತಿರುವುದು ನಿಜ.

ನಾನೂ ಕಳೆದ ವರ್ಷ ಒಂದು ವರ್ಷ ಬೆಂಗಳೂರಿನಲ್ಲಿದ್ದೆ. ಅಲ್ಲಿನ ಹವಾಮಾನ ಎಷ್ಟು ಚೆನ್ನಾಗಿದೆಯೆಂದರೆ, ಯಾವಾಗಲೂ ಖುಷಿಯಾಗಿರಲು ಮತ್ತು ಪಾಸಿಟಿವ್ ಆಗಿ ಇರುವುದಕ್ಕೆ ಸಹಾಯ ಮಾಡುತ್ತದೆ. ನನಗೆ ಬೆಂಗಳೂರು ತುಂಬಾ ನೆನಪಾಗುತ್ತಿದೆ." ಎಂದು ಹೇಳಿದ್ದಾರೆ. ಹಲವು ನೆಟ್ಟಿಗರು ಬೆಂಗಳೂರಿನಲ್ಲಿ ನಮಗೂ ಈ ವೆದರ್ ತುಂಬಾ ಇಷ್ಟ ಅಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+