92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei
ಕೋಟಿ ರೂಪಾಯಿ ಅಂದ್ರೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ, ಒಂದು ಕಡೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಹಾಗೂ ಇನ್ನೊಂದು ಕಡೆ ಯುದ್ಧದ ಕಾರಣಕ್ಕೆ ಆರ್ಥಿಕತೆಯಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಷೇರು ಮಾರುಕಟ್ಟೆ ಕೂಡ ಕುಸಿದು ಬೀಳುತ್ತಿದ್ದು, ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಶುರು ಮಾಡಿರುವ ಯುದ್ಧ ಈ ರೀತಿ ನೂರಾರು ಸಮಸ್ಯೆ ಸೃಷ್ಟಿಸಿದೆ. ಇಂತಹ ಸಮಯದಲ್ಲೇ 92,00,00,000 ರೂಪಾಯಿ ಬಹುಮಾನ ಘೋಷಣೆ ಮಾಡಿದೆ ಅಮೆರಿಕ. ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಈ ಹಣ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಡುಗೆ ಎಣ್ಣೆ... ಹೀಗೆ ಇರಾನ್ ವಿರುದ್ಧ ಯುದ್ಧವು ಶುರುವಾದ ನಂತರ ಎಲ್ಲಾ ವಸ್ತುಗಳ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಬೆಲೆ ಏರಿಕೆ ಕಾರಣಕ್ಕೆ ಬಡವರು & ಮಧ್ಯಮ ವರ್ಗದ ಜನರು ನರಳುವ ಸ್ಥಿತಿ ಇದೆ. ಇಂತಹ ಸಮಯದಲ್ಲೇ ಷೇರು ಮಾರುಕಟ್ಟೆ ಕುಸಿತ ಇನ್ನಷ್ಟು ಸಮಸ್ಯೆ ಎದುರಾಗುವಂತೆ ಮಾಡಿದೆ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಈಗ ಒದ್ದಾಡಿ ಹೋಗುತ್ತಿದ್ದು, ಭಾರತದಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲಾ ಘಟನೆಗಳು ನಡೆಯುವ ಸಮಯದಲ್ಲೇ 92,00,00,000 ರೂಪಾಯಿ ಬಹುಮಾನ ಘೋಷಣೆ ಮಾಡಿದೆ ಅಮೆರಿಕ.

92 ಕೋಟಿ ರೂಪಾಯಿ ಬಹುಮಾನ!
ಹೌದು ಅಮೆರಿಕ ದಿಢೀರ್ ಆಫರ್ ಒಂದನ್ನ ನಿಡಿದೆ, ಅಂದಹಾಗೆ ಇರಾನ್ ದೇಶದ ನೂತನ ಸರ್ವಾಧಿಕಾರಿ ಬಗ್ಗೆ ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗೆ ಭಾರಿ 92,00,00,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಹೊರಡಿಸಿದೆ. ಅಮೆರಿಕ ವಿದೇಶಾಂಗ ಇಲಾಖೆ ತನ್ನ ರಿವಾರ್ಡ್ ಫಾರ್ ಜಸ್ಟಿಸ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಈ ರೀತಿ ಬಹುಮಾನ ಘೋಷಣೆ ಬಗ್ಗೆ ಮಾಹಿತಿ ನೀಡಿದೆ.
ಒಂದೆಡೆ ಖಮೇನಿ ಸಾವಿನ ನಂತರ ಖಮೇನಿ ಮಗ ಮೊಜ್ತಾಬಾ ಖಮೇನಿಗೆ ಇರಾನ್ ಸರ್ವಾಧಿಕಾರಿಯ ಪಟ್ಟ ಕಟ್ಟಲಾಗಿದೆ. ಇಂತಹ ಸಮಯದಲ್ಲೇ ಹೇಗಾದರೂ ಇರಾನ್ ದೇಶದ ನೂತನ ಸುಪ್ರೀಂ ಲೀಡರ್ ಅಂದ್ರೆ ಸರ್ವಾಧಿಕಾರಿ ಕಥೆಯನ್ನು ಮುಗಿಸಬೇಕು ಎಂದು ಮುಂದೆ ನುಗ್ಗಿದೆ ಅಮೆರಿಕ. ಇದೇ ಕಾರಣಕ್ಕೆ ಭಾರಿ ದೊಡ್ಡ ಮೊತ್ತ ಅಂದ್ರೆ, ಬರೋಬ್ಬರಿ 92 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.












Click it and Unblock the Notifications