ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ವಿಡಿಯೋ ಪ್ಲೇಯರ್‌ನಿಂದ ಹಿಡಿದು ರಾಜವಿಲಾಸಿ ಬಂಗಲೆ ತನಕ

|
Google Oneindia Kannada News

ಬೆಂಗಳೂರು, ಆ. 05: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿವಾಸ ಹಾಗೂ ಟ್ರಾವೆಲ್ಸ್ ಸಂಸ್ಥೆ ಮೇಲೆ ದೆಹಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಆರೋಪಿಸಿದೆ. ಜೆಡಿಎಸ್ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟು ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡ ಜಮೀರ್ ಅಹಮದ್ ಖಾನ್ ಅವರು ಎರಡು ವಿಡಿಯೋ ಕ್ಯಾಸೆಟ್ ರೆಕಾರ್ಡರ್‌ನಿಂದ ಹಿಡಿದು ಅರಬ್ ರಾಜ ವಂಶಸ್ಥರ ಮಾದರಿಯ ಬಂಗಲೆ ನಿರ್ಮಾಣವರೆಗೆ ಗಳಿಸಿದ ಆದಾಯ, ಸಂಪತ್ತಿನ ವಿವರಗಳನ್ನು 'ಒನ್ಇಂಡಿಯಾ ಕನ್ನಡ' ಇಲ್ಲಿ ಪ್ರಸ್ತುತ ಪಡಿಸುತ್ತಿದೆ.

ಮನೆಯಲ್ಲಿ ಎರಡು ವಿಡಿಯೋ ಕ್ಯಾಸೆಟ್ ರೆಕಾರ್ಡರ್, ಐದು ಸೆಟ್ ಟೆಲಿವಿ‍ಷನ್ ಸೆಟ್, ಪ್ರಾಚೀನ ಕಾಲದ ಜೋಪುರ್ ಗೋಡೆ ಗಡಿಯಾರ. 250 ಗ್ರಾಂ ಬೆಳ್ಳಿ, 234 ಗ್ರಾಂ ಚಿನ್ನ, 45 ಗ್ರಾಂ ಚಿನ್ನದ ಒಡವೆ. ಜಯನಗರದಲ್ಲಿ ಮನೆ, ಸದಾಶಿವನಗರ ರಾಜವಿಲಾಸ ಬಡಾವಣೆಯಲ್ಲಿ ಒಂದು ಕಟ್ಟಡ, ಶಾಸಕ ಸ್ಥಾನದಿಂದ ಬರುವ ಸಂಬಳ, ಅಂಚೆ ಕಚೇರಿಯಲ್ಲಿ ಐದು ಸಾವಿರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಐದು ಲಕ್ಷ ರೂ. ಎಲ್ಐಸಿ ಬಾಂಡ್. ಶಾಸಕರ ವೇತನ ಭತ್ಯೆ ಉಳಿತಾಯ ಆಗಿದ್ದು ಕೇವಲ 3.53 ಲಕ್ಷ ಮಾತ್ರ. ವಾರ್ಷಿಕ ವರಮಾನ 1.20 ಲಕ್ಷ ರೂ!

ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ! ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ!

ಎರಡು ಕ್ಯಾಸೆಟ್ ರೆಕಾರ್ಡ್ ರ್, ಐದು ಟಿವಿ ಸೆಟ್

ಎರಡು ಕ್ಯಾಸೆಟ್ ರೆಕಾರ್ಡ್ ರ್, ಐದು ಟಿವಿ ಸೆಟ್

ಶಾಸಕ ಬಿ.ಝೆಡ್ ಜಮೀರ್ ಅಹಮದ್ ಖಾನ್ ಅವರು 2006 ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಉತ್ತರ ದಾಯಿತ್ವ ಆಸ್ತಿಯ ವಿವರಗಳು ಇಷ್ಟೇ! ಆರು ಪುಟದಲ್ಲಿ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದಾರೆ. ಆದರೆ ಇವತ್ತು ಜಮೀರ್ ಆಸ್ತಿಯ ಮರ್ಮ ಯಾರಿಗೂ ಗೊತ್ತಿಲ್ಲ. ದೆಹಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಗೆ ಒಳಗಾದ ಕಂಟೋನ್ಮೆಟ್ ರಸ್ತೆಯ ಅರಬ್ ಎಮಿರೇಟ್ಸ್ ವಿಲಾಸಿ ಬಂಗಲೆಯ ಮೊತ್ತವೇ ಬರೋಬ್ಬರಿ ಐವತ್ತು ಕೋಟಿ ಬಾಳಬಹುದು ಎಂದರೆ ತಪ್ಪಾಗಲಾರದು. ಚದರಡಿ 15 ಸಾವಿರ ರೂ. ಬಾಳುವ ಜಾಗದಲ್ಲಿ 33,000 ಚದರಡಿ ಜಾಗದಲ್ಲಿ ಆಗರ್ಭ ರಾಜಮನೆತನದವರು ಕಟ್ಟಿರುವ ಮನೆ ಕಟ್ಟಿದ್ದಾರೆ. ಜಮೀರ್ ಮನೆಯ ಫೋಟೋಗಳು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಕೂಡ ವೈರಲ್ ಆಗಿದೆ.

ಆದ್ರೆ ಇಡಿ ಯಾಕೆ ದಾಳಿ ಮಾಡಿತು?

ಆದ್ರೆ ಇಡಿ ಯಾಕೆ ದಾಳಿ ಮಾಡಿತು?

ಒಬ್ಬ ವ್ಯಕ್ತಿ ಕಾನೂನು ಬದ್ಧವಾಗಿ ಸಾವಿರ ಕೋಟಿ ರೂ. ಗಳಿಸಿದರೂ ಭಾರತದಲ್ಲಿ ಅದು ಅಪರಾಧವಲ್ಲ. ಅದರ ಹಿಂದೆ ಪರಿಶ್ರಮದ ಬೆವರು ಹನಿಗಳು ಸುರಿದಿರುತ್ತದೆ. ಜಮೀರ್ ನ್ಯಾಯ ಬದ್ಧವಾಗಿ ಗಳಿಸಿದರೋ, ಅನ್ಯಾಯವಾಗಿ ಗಳಿಸಿದರೋ ಗೊತ್ತಿಲ್ಲ. ಐಎಂಎ ಸಂಸ್ಥೆ ಜತೆಗಿನ ಭೂ ವಹಿವಾಟು ಅವರನ್ನು ಇಡಿ ಜಾಡಿಗೆ ಸಿಲುಕುವಂತೆ ಮಾಡಿದೆ. ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಒಂದು ವೇಳೆ ಅಕ್ರಮ ಆಸ್ತಿ ಗಳಿಸಿರುವುದು ಸಾಭೀತಾದರೆ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ವಹಿಸಬಹುದು. ಇಲ್ಲವೇ ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ದಾಖಲೆ ಲಭ್ಯವಾದರೆ ಜಮೀರ್ ಅಹಮದ್ ಖಾನ್ ಅವರನ್ನು ಬಂಧಿಸಿದರೂ ಅಚ್ಚರಿ ಪಡಬೇಕಿಲ್ಲ. ಇಂತಹ ಅನುಮಾನ ಹುಟ್ಟಿಹಾಕಲು ಕಾರಣ 2006 ರಿಂದ 2020 ರ ಅವಧಿಯಲ್ಲಿ ಅವರು ಸ್ವತಃ ಘೋಷಣೆ ಮಾಡಿಕೊಂಡಿರುವ ಆಸ್ತಿಯಲ್ಲೇ ಸಾಕಷ್ಟು ಅನುಮಾನಗಳು ಮೂಡುತ್ತವೆ.

ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಇಡಿ ದಾಳಿಯ ಸೀಕ್ರೇಟ್ ಏನು?ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಇಡಿ ದಾಳಿಯ ಸೀಕ್ರೇಟ್ ಏನು?

33 ಸಾವಿರ ಚದರಡಿಯ ನಿವೇಶನದ ವಿಲಾಸಿ ಕಟ್ಟಡ

33 ಸಾವಿರ ಚದರಡಿಯ ನಿವೇಶನದ ವಿಲಾಸಿ ಕಟ್ಟಡ

ಲೋಕಾಯುಕ್ತ ಸಂಸ್ಥೆಗೆ ಖಾನ್ ಸಲ್ಲಿಸಿದ ಆಸ್ತಿ ಮೊತ್ತ: ಜಮೀರ್ ಅಹಮದ್ ಖಾನ್ ಅವರು ಕಂಟೋನ್ಮೆಟ್ ಬಳಿ ಕಟ್ಟಿರುವ ರಾಜ ವಿಲಾಸಿ ಬಂಗಲೆಯ ಗೃಹ ಪ್ರವೇಶ ಹಾಗೂ ಮಗಳು ಜಹಾರಾ ಫಾತಿಮಾ ಮದುವೆ ಒಂದೇ ಸಮಯದಲ್ಲಿ ಆಗಿದ್ದು. ಮಗಳ ಮದುವೆ ವೇಳೆಗೆ 15 ಕೋಟಿ ರೂ. ಮೊತ್ತದ 33 ಸಾವಿರ ಚದರಡಿಯಲ್ಲಿ (ದಾಖಲೆ ಪ್ರಕಾರ- ಮಾರುಕಟ್ಟೆ ಮೌಲ್ಯ ಅಲ್ಲ) ಕಟ್ಟಿರುವ ಎಮಿರೇಟ್ ಶೇಖ್ ವಂಶಸ್ಥರ ಮಾದರಿಯ ಬಂಗಲೆಯ ವೆಚ್ಚದ ವಿವರ ಅದೆಷ್ಟು ಆಗಿದೆಯೋ ಗೊತ್ತಿಲ್ಲ. ನ್ಯಾಷನಲ್ ಟ್ರಾವೆಲ್ಸ್ ಲಾಭವೋ, ವಿವಾದಾತ್ಮಕ ಭೂ ವ್ಯಾಜ್ಯ ಇತ್ಯರ್ಥ ಮಾಡಿ ಗಳಿಸಿದ ಸಂಪತ್ತೋ, ಅಥವಾ ಇನ್ಯಾವುದೋ ಮಾರ್ಗದಲ್ಲಿ ಗಳಿಸಿದ ಆದಾಯವೋ ಗೊತ್ತಿಲ್ಲ. ಆದರೆ ಬಂಗಲೆ ಇವತ್ತಿನ ಮಾರುಕಟ್ಟೆ ಬೆಲೆಯಲ್ಲಿ ಐವತ್ತು ಕೋಟಿ ರೂ. ಆಗಬಹುದು ಎಂದು ಹೇಳುತ್ತಾರೆ. ಚಿನ್ನದ ಬಣ್ಣ ಲೇಪಿತ ಮನೆಯ ಪೀಠೋಪಕರಣಗಳು ಖರ್ಚುರ ಮರದ್ದು ಎಂದೇ ಹೇಳಲಾಗುತ್ತಿದೆ. ವಿದೇಶದಿಂದ ಖರ್ಜೂರ ಪೀಠೋಪಕರಣ ಮಾಡಿಸಲು ಅದೆಷ್ಟು ವೆಚ್ಚ ಆಗಿದೆಯೋ ಆ ದೇವರೇ ಬಲ್ಲ.

ಜಮೀರ್ ಕಾರುಗಳು ನೋಡಿದ್ರೆ ತಲೆ ಗಿರಗಿಟ್ಲೆ

ಜಮೀರ್ ಕಾರುಗಳು ನೋಡಿದ್ರೆ ತಲೆ ಗಿರಗಿಟ್ಲೆ

ಇನ್ನು ಶಾಸಕ ಜಮೀರ್ ಅವರು 2019 ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಆಸ್ತಿ ಹಾಗೂ ಉತ್ತರ ದಾಯಿತ್ವದ 35 ಪುಟಗಳಲ್ಲಿ ಸಲ್ಲಿಸಿರುವ ಲೆಕ್ಕಾಚಾರದ ವಿವರಗಳು ಇಂತಿವೆ. ಜಮೀರ್ ಬಳಿ ಇದ್ದ ನಗದು ಕೇವಲ 7 ಸಾವಿರ ರೂ. ಪತ್ನಿ ಕೈಯಲ್ಲಿ ಕೇವಲ 50 ಸಾವಿರ ರೂ. ಎನ್. ಟಿ. ಜಮೀರ್ ಅಹಮದ್ ಖಾನ್ ಅಸೋಸಿಯೇಟ್ಸ್‌ನಿಂದ ವೇತನವಾಗಿ ಪಡೆದ ವಾರ್ಷಿಕ ವರಮಾನ 14 ಲಕ್ಷ ರೂ. ಶಾಸಕರಾಗಿ ವಾರ್ಷಿಕ ವೇತನ ಹಾಗೂ ಭತ್ಯೆ 22 ಲಕ್ಷ ರೂ. ಪತ್ನಿ ಬೀಬಿ ಜೋಹರ ಅವರಿಗೆ ಎನ್. ಟಿ. ಜಮೀರ್ ಅಹಮದ್ ಖಾನ್ ಅಸೋಸಿಯೇಟ್ಸ್‌ನಿಂದ ಬಂದ ವಾರ್ಷಿಕ ವರಮಾನ 33 ಸಾವಿರ ಮಾತ್ರ! ಜಮೀರ್ ಯಾವ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿಲ್ವಂತೆ. ಕಲಾಸಿಪಾಳ್ಯದ ಎಸ್ ಬಿಐ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿರುವುದು ಕೇವಲ 63 ಸಾವಿರ ರೂ. ವಿಧಾನಸೌಧ ಅಪೆಕ್ಸ್ ಬ್ಯಾಂಕ್‌ನಲ್ಲಿ 3.73 ಲಕ್ಷ ರೂ. ಮಹಾಲಕ್ಷ್ಮೀಪುರಂ ಜನತಾ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿ ಕೇವಲ 42 ಸಾವಿರ ರೂಪಾಯಿ ಹೊಂದಿದ್ದರಂತೆ. ಯಾವ ಜೀವ ವಿಮಾ, ಉಳಿತಾಯದ ಹಣವೂ ಜಮೀರ್ ಬಳಿ ಇಲ್ಲವಂತೆ.

ಪತ್ನಿ ಬಳಿ ಇರೋದು 234 ಗ್ರಾಂ ಚಿನ್ನ

ಪತ್ನಿ ಬಳಿ ಇರೋದು 234 ಗ್ರಾಂ ಚಿನ್ನ

ಇನ್ನು ಜಮೀರ್ ಅಹಮದ್ ಖಾನ್ ಅವರ ಬಂಗಲೆ ಚಿನ್ನವನ್ನೇ ನೆನಪಿಸುತ್ತದೆ. ಆದರೆ ಜಮೀರ್ ಬಳಿ ಇರೋದು ಕೇವಲ 49 ಗ್ರಾಂ ಚಿನ್ನವಂತೆ. ಪತ್ನಿ ಬಳಿ 234 ಗ್ರಾಂ ಚಿನ್ನ, ತಾಯಿ ಬಳಿ ಇರೋದು 45 ಗ್ರಾಂ. ಇನ್ನು 2500 ರೂ. ಬೆಲೆ ಬಾಳುವ ವಸ್ತುಗಳ ಬಗ್ಗೆ ರೆಫ್ರಿಜರೇಟರ್ ಒಟ್ಟು ಹದಿನೈದು ಉಪಕರಣಗಳನ್ನು ಹೊಂದಿದ್ದಾರೆ. ಇನ್ನು ಕೃಷಿ ಭೂಮಿ ಇಲ್ಲ. ಆದರೆ ನಿವೇಶನ ವಿಚಾರಕ್ಕೆ ಬಂದರೆ, ರಾಜಮಹಲ್ ಬಡಾವಣೆಯಲ್ಲಿ ಒಂದು ಕಟ್ಟಡ, ಕಂಟೋನ್ಮೆಂಟ್ ಬಂಗಲೆ, ರಿಚ್ಮಂಡ್ ಟೌನ್ ಕಟ್ಟಡ ಒಟ್ಟು ಮೂರು ಆಸ್ತಿಗಳನ್ನು 18. 35 ಕೋಟಿ ರೂ.ಗೆ ಖರೀದಿ ಮಾಡಿರುವುದಾಗಿ ತಮೀರ್ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಖರೀದಿ ಮಾಡಿರುವ ನಿವೇಶನ ಬೆಲೆ ಉಲ್ಲೇಖಿಸಿರುವ ಜಮೀರ್ ಅಹಮದ್ ಖಾನ್, ಕಟ್ಟಡ ನಿರ್ಮಾಣದ ವೆಚ್ಚಗಳನ್ನು ತೋರಿಸಿಲ್ಲ. ಇನ್ನು ಜಮೀರ್ ಅಹಮದ್ ಪ್ರತಿ ಕಟ್ಟಡ ಖರೀದಿಗೂ ಕಾರಣ ನೀಡಿದ್ದಾರೆ.

ಜಮೀರ್ ಗೆ ಕ್ಯೂ ನಿಂತು ಸಾಲ ಕೊಟ್ಟವರು

ಜಮೀರ್ ಗೆ ಕ್ಯೂ ನಿಂತು ಸಾಲ ಕೊಟ್ಟವರು

ಹೊಸೂರು ಬಳಿ ಆಸ್ತಿ ಮಾರಿ ಸದಾಶಿವನಗರ ಕಟ್ಟಡವನ್ನು 35 ಲಕ್ಷ ರೂ.ಗೆ ಖರೀದಿ ಮಾಡಿದರಂತೆ. ಜತೆಗೆ ರಿಚ್ಮಂಟ್ ಟೌನ್ ನಲ್ಲಿರುವ 14 ಸಾವಿರ ಚದರಡಿಯ ಕಟ್ಟಡ ಮೂರು ಕೋಟಿ ರೂ.ಗೆ ಖರೀದಿ ಮಾಡಿದ್ದು, ಅದಕ್ಕಾಗಿ ಯು. ಮಲ್ಲಿಕಾರ್ಜುನ ಎಂಬುವರು ಎರಡು ಕೋಟಿ ರೂ. ಸಾಲ ನೀಡಿದ್ದಾರಂತೆ. ಉಳಿದ ಹಣವನ್ನು ಸಂಸ್ಥೆಯ ಬಸ್‌ಗಳನ್ನು ಮಾರಿ ಹಣ ಹೊಂದಿಸಿದರಂತೆ. ಇನ್ನು ಕಂಟೋನ್ಮೆಂಟ್ ಬಳಿ ಇರುವ ರಾಜ ವಿಲಾಸಿ ಬಂಗಲೆಯ 33,000 ಚದರಡಿ ನಿವೇಶನ ಹದಿನೈದು ಕೋಟಿ ರೂ.ಗೆ ಖರೀದಿ ಮಾಡಿದ್ದು ಅದಕ್ಕಾಗಿ ಏಳು ಮಂದಿ ಜಮೀರ್‌ಗೆ ಸಾಲ ನೀಡಿದ್ದಾರೆ. ಅದರಲ್ಲೂ ಸಹ ಮಲ್ಲಿಕಾರ್ಜುನ್ ಎಂಬಾತ ಮೂರು ಕೋಟಿ ರೂ. ಸಾಲ ನೀಡಿದ್ದಾಗಿ ಜಮೀರ್ ದಾಖಲೆಗಳಲ್ಲಿ ತೋರಿಸಿಕೊಂಡಿದ್ದಾರೆ. ನೂರುಲ್ಲಾ ಖಾನ್, ಉಮ್ರಾ ಬಿಲ್ಡರ್ಸ್, ಮತ್ತಿತರ ಹದಿಮೂರು ಮಂದಿಯಿಂದ ಒಟ್ಟು 15 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿರುವುದಾಗಿ ತೋರಿಸಿಕೊಂಡಿದ್ದಾರೆ. ಆದರೆ, ಈ ನಿವೇಶನ ಮಾರುಕಟ್ಟೆ ಮೌಲ್ಯ 40 ಕೋಟಿ ರೂ. ದಾಟಲಿದ್ದು, ಇಷ್ಟು ಕಡಿಮೆ ಬೆಲೆಗೆ ಯಾಕೆ ಕೊಟ್ಟರು ಎಂಬುದು ನಿಗೂಢ. ಈ ಕುರಿತ ವಿಶೇಷ ವರದಿ ಒನ್ಇಂಡಿಯಾ ಕನ್ನಡ ಪ್ರಕಟಿಸಿದೆ.

ಜಮೀರ್ ಕಾರುಗಳ ಕಾರುಬಾರು

ಜಮೀರ್ ಕಾರುಗಳ ಕಾರುಬಾರು

ಇಡಿ ದಾಳಿಗೆ ಒಳಗಾಗಿರುವ ಶಾಸಕ ಜಮೀರ್ ಅಹಮದ್ ಖಾನ್ ಹೆಸರಿನಲ್ಲಿ ಹನ್ನೊಂದು ಕಾರುಗಳು ಇವೆ. ಮಾರುತಿ ಸ್ವಿಫ್ಟ್, ಮರ್ಸಿಡಿಸ್ ಬೆಂಜ್ ಕಾರು ಎರಡು, ಫಾರ್ಚುನರ್ ಕಾರು, ಜೀಪ್ , ಹೊಂಡಾ ಬ್ರಿಯೋ, ಶೆವರ್ಲೆ ಬೀಟ್ ಮಾರುತಿ ಆಲ್ಟೋ, ಹುಂಡೈ ವರ್ಣ, ಹೋಂಡಾ ಸಿಟಿ ಒಟ್ಟು ಹನ್ನೊಂದು ಕಾರುಗಳು ಇವೆ. ಆದೆ ಅವನ್ನು ಎನ್. ಟಿ. ಜಮೀರ್ ಅಹಮದ್ ಖಾನ್ ಅಸೋಸಿಯೇಟ್ಸ್ ಹೆಸರಿನಲ್ಲಿ ಖರೀದಿ ಮಾಡಿರುವುದಾಗಿ ತಿಳಿಸಿದ್ದಾರೆ. ಇವುಗಳ ಮೌಲ್ಯ ಆದಾಯದ ಮೂಲದ ಬಗ್ಗೆ ಜಮೀರ್ ಎಲ್ಲೂ ಉಲ್ಲೇಖಿಸಿಲ್ಲ. 2006 ರಲ್ಲಿ ಒಂದು ವಾಹನವನ್ನು ಹೊಂದಿರದ ಜಮೀರ್ ಅಹಮದ್ ಖಾನ್ ಐಶರಾಮಿ ಕಾರುಗಳ ಒಡೆಯನಾಗಿದ್ದಾನೆ.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada
ಎನ್ ಟಿ ಝೆಡ್ ಬಸ್ ವಹಿವಾಟು

ಎನ್ ಟಿ ಝೆಡ್ ಬಸ್ ವಹಿವಾಟು

ಎನ್.ಟಿ. ಜಮೀರ್ ಅಹಮದ್ ಖಾನ್ ಅಸೋಸಿಯೇಟ್ಸ್ ಸೇರಿದ 25 ವಾಹನ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಮಲ್ಟಿ ಆಕ್ಸಲ್ ಬಸ್ ಸೇರಿದಂತೆ ಒಟ್ಟು 15 ಬಸ್‌ಗಳು ಹತ್ತು ಈಚರ್ ವಾಹನಗಳನ್ನು ಹೊಂದಿರುವುದಾಗಿ ಜಮೀರ್ ಹೇಳಿಕೊಂಡಿದ್ದಾರೆ. 2019 - 20 ನೇ ಸಾಲಿನಲ್ಲಿ ಒಂದು ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡಿದ್ದಾರೆ. ಒಟ್ಟಾರೆ ಜಮೀರ್ ಅವರಿಗೆ ಸೇರಿದ 33 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಜಮೀರ್ ಹೇಳಿಕೊಂಡಿದ್ದಾರೆ. ಅದರಲ್ಲಿ 22 ಕೋಟಿ ರೂ. ಸಾಲ ಹೊಂದಿರುವುದಾಗಿ ಆಸ್ತಿ ವಿವರ ಸಲ್ಲಿಸಿದ್ದಾರೆ.

English summary
ED Raid on MLA Zameer Ahmad Khan House and offices. Here is the MLA Zameer Ahmad Khan assets, net worth and Liabilities till 2019-20. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X