2.32 ಲಕ್ಷ ಮನೆ ಉಚಿತ; ಸರ್ಕಾರ ದಿಂದ ಆರನೇ ಗ್ಯಾರಂಟಿ: ಜಮೀರ್ ಹೇಳಿದಿಷ್ಟು!

ಬೆಂಗಳೂರು, ನವೆಂಬರ್‌ 03: ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 2.32 ಲಕ್ಷ ಮನೆಗಳನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದ್ದಾರೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಸುದ್ಧಿಗಾರರ ಜತೆ ಮಾತನಾಡಿದ ಅವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವಿತಿಯಿಂದ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ್ದ ಯೋಜನೆ ಫಲಾನುಭವಿ ಗಳ ವಂತಿಗೆ ಪಾವತಿ ಆಗದೆ ನೆನೆ ಗುದಿಗೆ ಬಿದ್ದಿದ್ದು ಇದೀಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.

2.32 Lakh free houses: Sixth guarantee of the government Says Zameer Ahmed Khan

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಜತೆಗೆ ಆರನೇ ಗ್ಯಾರಂಟಿ ಆಗಿ ಅಪೂರ್ಣ ಆಗಿರುವ 2.32 ಲಕ್ಷ ಮನೆ ಮುಂದಿನ ವರ್ಷದ ಅಂತ್ಯದೊಳಗೆ ಪೂರ್ಣ ಗೊಳಿಸಲು ಗುರಿ ಹಾಕಿಕೊಳ್ಳ ಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮ ದ ವೇದಿಕೆಯಲ್ಲೇ 2.42 ಲಕ್ಷ ಮನೆ ಉಚಿತ ವಾಗಿ ನೀಡುವ ಭರವಸೆ ನೀಡಿದ್ದು ಅದಕ್ಕೆ ತಗಲುವ ಎಂಟು ಸಾವಿರ ಕೋಟಿ ರೂ. ಹಂತ ಹಂತವಾಗಿ ಒದಗಿಸುವ ಭರವಸೆ ನೀಡಿದ್ದು ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ ಎಂದು ಹೇಳಿದರು.

ಈ ತೀರ್ಮಾನ ದಿಂದಾಗಿ 2.42 ಲಕ್ಷ ಕುಟುಂಬ ಗಳಿಗೆ ನೆಮ್ಮದಿ ದೊರಕಲಿದೆ. ಬ್ಯಾಂಕ್ ಸಾಲ ಸಿಗದೆ ಆತಂಕದಲ್ಲಿದ್ದವರು ನಿರಾಳ ಆಗಲಿದ್ದು, ಫಲಾನುಭವಿಗಳ ವಂತಿಗೆ ಇಲ್ಲದೆ ಮನೆ ಸಿಗಲಿದೆ ಎಂದು ತಿಳಿಸಿದರು.

2.32 Lakh free houses: Sixth guarantee of the government Says Zameer Ahmed Khan

ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿ ಕೊಡುವ ಮನೆಗೆ ಘಟಕ ವೆಚ್ಚ 7 ಲಕ್ಷ ರೂ. ಆಗಲಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ 3 ಲಕ್ಷ ರೂ. ವರೆಗೆ ಸಿಗಲಿದ್ದು ಉಳಿದ ನಾಲ್ಕು ಲಕ್ಷ ರೂ. ಫಲಾನುಭವಿಗಳು ಕಟ್ಟಬೇಕಿತ್ತು. ಇದೀಗ ಫಲಾನುಭವಿ ಪಾಲಿನ ವಂತಿಗೆ ಸರ್ಕಾರವೇ ಭರಿಸಲಿದಂತಾಗಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+