ಮೋದಿ ಯಾವ ವಿಮಾನದಲ್ಲಿ ಹೋಗ್ತಾರೆ ಬಿಜೆಪಿಯವರನ್ನ ಕೇಳ್ರಿ: ಸಿದ್ದರಾಮಯ್ಯ

ಮೈಸೂರು, ಡಿಸೆಂಬರ್‌ 22: ತಾವು ಮತ್ತು ತಮ್ಮ ಸಚಿವರು ಐಷಾರಾಮಿ ಜೆಟ್‌ನಲ್ಲಿ ದೆಹಲಿಗೆ ಪ್ರಯಾಣಿಸುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಕ್ಕೆ ಪ್ರತಿಕ್ರಿಸಿದ ಸಿಎಂ ಸಿದ್ದರಾಮಯ್ಯ ಅವರು, "ಪ್ರಧಾನಿ ಮೋದಿ ಯಾವ ವಿಮಾನದಲ್ಲಿ ಪ್ರಯಾಣಿಸುತ್ತಾರೆ ಎಂದು ಬಿಜೆಪಿಯವರನ್ನು ಕೇಳಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನ ಕ್ರೌಡ್ ಫಂಡಿಂಗ್ ಪ್ರಚಾರದ ನಡುವೆ ಬಿಜೆಪಿ ಶುಕ್ರವಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪಕ್ಷ ದೇಣಿಗೆ ಕೇಳುತ್ತಿರುವ ಸಮಯದಲ್ಲಿ ಇಬ್ಬರು ನಾಯಕರು ಖಾಸಗಿ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಟೀಕೆ ಮಾಡಿದೆ.

Ask BJP members which plane Modi will take: Siddaramaiah

ಇದಕ್ಕೆ ಪ್ರತಿಕ್ರಿಯಿಸಿ ಸಿಟ್ಟಿಗೆದ್ದ ಸಿದ್ದರಾಮಯ್ಯ, 'ಪ್ರಧಾನಿ ನರೇಂದ್ರ ಮೋದಿ ಅವರು ಯಾವ ವಿಮಾನದಲ್ಲಿ ಪ್ರಯಾಣಿಸುತ್ತಾರೆ ಎಂದು ಬಿಜೆಪಿಯವರಿಗೆ ಕೇಳಿ, 60 ಆಸನಗಳ ವಿಮಾನದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಾರೆ ಎಂದರು.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಗ್ ಗೋಹಿಲ್ ಕೂಡ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ, "ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ವಿಶೇಷವಾಗಿ ಯುಎಇಯಿಂದ ತಂದ ಅತ್ಯಂತ ದುಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಿದರು.

ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಕೇಂದ್ರದಿಂದ ಬರ ನಿಧಿ ಬಿಡುಗಡೆಗಾಗಿ ದೆಹಲಿಗೆ ಪ್ರಯಾಣಿಸಿದ ಸಿಎಂ ಹಾಗೂ ಸಿಚಿವ ಜಮೀರ್‌ ಖಾಸಗಿ ಜೆಟ್‌ನಲ್ಲಿ ಇಬ್ಬರೂ ಸಂತೋಷವಾಗಿರುವುದನ್ನು ನೋಡಬಹುದು ಎಂದು ಕರ್ನಾಟಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಅವರು ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಮಾಳವಿಯಾ, "ಒಂದೆಡೆ ಕಾಂಗ್ರೆಸ್ ಕ್ರೌಡ್‌ಫಂಡ್‌ ಮಾಡುವಂತೆ ಹಾಗೂ ಐಎನ್‌ಡಿಐ ಮೈತ್ರಿಕೂಟದ ಸಭೆಯಲ್ಲಿ ಸಮೋಸವನ್ನು ಸಹ ನೀಡಲಿಲ್ಲ ಎಂದು ನಟಿಸುತ್ತಿದೆ. ಮತ್ತೊಂದೆಡೆ ಕರ್ನಾಟಕದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಂಪುಟ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಖಾಸಗಿ ಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಬರ ಪರಿಹಾರಕ್ಕಾಗಿ ಹಣವನ್ನು ಪಡೆಯಲು ದೆಹಲಿಗೆ ಒಟ್ಟಿಗೆ ಸಂತೋಷವಾಗಿ ಹೋಗುತ್ತಿದ್ದಾರೆ ಎಂದು ಹೇಳಿದರು.

ದೆಹಲಿಗೆ ತೆರಳುತ್ತಿರುವ ವಿಡಿಯೋವನ್ನು ಮೂಲತಃ ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ಪೋಸ್ಟ್ ಮಾಡಿದ್ದಾರೆ. "ನಮ್ಮ ಹೆಮ್ಮೆಯ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ ಸಂತೋಷದ ಕ್ಷಣಗಳು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗಿನ ಐಷಾರಾಮಿ ಖಾಸಗಿ ಜೆಟ್ ಪ್ರಯಾಣಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಇದೇ ವಿಡಿಯೋವನ್ನು ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ ಮುಖಂಡ ಸಿ.ಟಿ.ರವಿ, ಬರಗಾಲದಿಂದ ಸಂತ್ರಸ್ತರಾಗಿರುವ ನಮ್ಮ ರೈತರಿಗೆ ಪಾವತಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಆದರೆ ಮುಖ್ಯಮಂತ್ರಿಯನ್ನು ಹಾರಿಸಲು ಎಲ್ಲ ಹಣವಿದೆ ಎಂದು ಪ್ರಶ್ನಿಸಿದ್ದಾರೆ.

"ಕರ್ನಾಟಕ ಸರ್ಕಾರದ ಬಳಿ ಬರಗಾಲದಿಂದ ಸಂತ್ರಸ್ತರಾದ ನಮ್ಮ ರೈತರಿಗೆ ಪಾವತಿಸಲು ಹಣವಿಲ್ಲ, ಅಭಿವೃದ್ಧಿಗೆ ಅಥವಾ ಅದರ ಭರವಸೆಗಳನ್ನು ಪೂರೈಸಲು ಅದರ ಬಳಿ ಹಣವಿಲ್ಲ, ಆದರೆ ಮುಖ್ಯಮಂತ್ರಿ, ಅವರ ರಾಜಕೀಯ ಕಾರ್ಯದರ್ಶಿ ಮತ್ತು ವಸತಿ ಸಚಿವರನ್ನು ಐಷಾರಾಮಿ ಖಾಸಗಿ ಜೆಟ್‌ನಲ್ಲಿ ಹಾರಿಸಲು ಎಲ್ಲಾ ಹಣವಿದೆ. ಅದೂ ಕೂಡ ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಹಣ ಕೇಳಲು ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಅವರು ಬರೆದಿದ್ದಾರೆ.

ಏತನ್ಮಧ್ಯೆ, ಡಿಸೆಂಬರ್ 28 ರಂದು ತನ್ನ ಸ್ಥಾಪನೆಯಾಗಿ 138 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಕಾಂಗ್ರೆಸ್, ಇತ್ತೀಚೆಗೆ 2024 ರ ಲೋಕಸಭೆ ಚುನಾವಣೆಗೆ ಮುನ್ನ 'ದೇಶಕ್ಕಾಗಿ ದೇಣಿಗೆ' ಎಂಬ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಸಮಾನ ಸಂಪನ್ಮೂಲ ವಿತರಣೆ ಮತ್ತು ಅವಕಾಶಗಳಲ್ಲಿ ಸಮೃದ್ಧವಾಗಿರುವ ಭಾರತವನ್ನು ರಚಿಸಲು ಪಕ್ಷವನ್ನು ಸಬಲೀಕರಣಗೊಳಿಸುವುವ ಗುರಿಯನ್ನು ಹೊಂದಿದೆ.

ಅಭಿಯಾನದ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಇದೇ ಮೊದಲ ಬಾರಿಗೆ ದೇಶಕ್ಕಾಗಿ ದೇಣಿಗೆ ಕೇಳುತ್ತಿದೆ. ಕೇವಲ ಶ್ರೀಮಂತರ ಮೇಲೆ ಅವಲಂಬಿತರಾಗಿ ಕೆಲಸ ಮಾಡಿದರೆ ಅವರ ನೀತಿಗಳನ್ನು ಅನುಸರಿಸಬೇಕು. ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕರಿಂದ ದೇಣಿಗೆ ಪಡೆದಿದ್ದರು ಎಂದುಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+