‘ಬಿಜೆಪಿ ಎಂಬ ಮನೆಹಾಳರ ಪಕ್ಷದ ನಾಯಕರ ಮಹಿಳಾ ಪೀಡನೆಯ ಪ್ರಕರಣಗಳು ಒಂದೆರಡಲ್ಲ’ ಹಿಂಗೆ ಹೇಳಿದ್ದು ಯಾರು?
ಬಿಜೆಪಿ & ಕಾಂಗ್ರೆಸ್ ನಡುವೆ ಫೈಟಿಂಗ್ ತಾರಕಕ್ಕೆ ಏರಿದ್ದು ಕರ್ನಾಟಕದಲ್ಲಿ ರಾಜಕೀಯ ಯುದ್ಧ ಬಲು ಜೊರಾಗಿದೆ. 2023ರ ಲೋಕಸಭೆ ಚುನಾವಣೆ ಸಮಯದಲ್ಲಿ ಶುರುವಾಗಿದ್ದ ಈ ವಾರ್ ಇಂದಿಗೂ ಮುಗಿದಿಲ್ಲ ಸೈಲೆಂಟ್ ಆಗುತ್ತಿಲ್ಲ. ಅದರ ಬದಲಾಗಿ ಬಿಜೆಪಿ & ಕಾಂಗ್ರೆಸ್ ಮಧ್ಯೆ ದಿನದಿಂದ ದಿನಕ್ಕೆ ಕಿತ್ತಾಟ ಜೋರಾಗುತ್ತಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ.
ಅಂದಹಾಗೆ ಲೋಕಸಭೆ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ರಾಜಕೀಯ ಜಿದ್ದಾಜಿದ್ದಿ ಕೂಡ ಹಿಡಿತಕ್ಕೆ ಸಿಗುತ್ತಿಲ್ಲ. ಪಂಚರಾಜ್ಯ ಅಂದ್ರೆ 5 ರಾಜ್ಯಗಳ ಚುನಾವಣೆ ಫಲಿತಾಂಶ ಈಗ ಇಬ್ಬರ ನಡುವೆ ಮತ್ತಷ್ಟು ಕಿಚ್ಚನ್ನು ಹೊತ್ತಿಸಿದೆ. ಹೀಗಿದ್ದಾಗಲೇ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿ ಎಂಬ ಮನೆಹಾಳರ ಪಕ್ಷದ ನಾಯಕರ ಮಹಿಳಾ ಪೀಡನೆಯ ಪ್ರಕರಣಗಳು ಒಂದೆರಡಲ್ಲ' ಎಂದು ಟ್ವೀಟ್ ಪೋಸ್ಟ್ ಮೂಲಕ ಆರೋಪ ಮಾಡಿ ದೊಡ್ಡ ಪಟ್ಟಿಯನ್ನೇ ನೀಡಿದೆ. ಹಾಗಾದರೆ ಕಾಂಗ್ರೆಸ್ ಆರೋಪ ಏನು?

ನಿಲ್ಲುತ್ತಿಲ್ಲ ಬಿಜೆಪಿ VS ಕಾಂಗ್ರೆಸ್ ಫೈಟ್!
ಈಗ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿ ಎಂಬ ಮನೆಹಾಳರ ಪಕ್ಷದ ನಾಯಕರ ಮಹಿಳಾ ಪೀಡನೆಯ ಪ್ರಕರಣಗಳು ಒಂದೆರಡಲ್ಲ. ಬಿಜೆಪಿಗೆ ನಿಜಕ್ಕೂ ಮಹಿಳೆಯರ ಘನತೆಯ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, • ಸಂಸದ @Tejasvi_Surya ಮೇಲೆ ಕೇಳಿಬಂದಿದ್ದ ಮೀಟೂ ಆರೋಪದ ಬಗ್ಗೆ ಬಿಜೆಪಿ ಮಾತಾಡಲಿಲ್ಲ ಏಕೆ? • ಸಂಸದ @mepratap ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ ಸಂಸದನ ಹೀನ ವರ್ತನೆಯನ್ನು ಬಿಜೆಪಿ ಖಂಡಿಸಲಿಲ್ಲವೇಕೆ? • ಮೈಸೂರಿನ ರಾಮ್ ದಾಸ್ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪ ಕೇಳಿಬಂದಾಗ ಬಿಜೆಪಿ ಮೌನವಹಿಸಿದ್ದೇಕೆ? • ಆರಗ ಜ್ಞಾನೇಂದ್ರ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಕ್ಷುಲ್ಲಕವಾಗಿ ಮಾತಾಡಿದಾಗ ಬಿಜೆಪಿ ಬಾಯಿ ಮುಚ್ಚಿಕೊಂಡಿದ್ದೀಕೆ? ಉತ್ತರಿಸುವಿರಾ @BJP4Karnataka?' ಎಂದು ಪ್ರಶ್ನೆ ಮಾಡಿದೆ.
ಬಿಜೆಪಿ ಎಂಬ ಮನೆಹಾಳರ ಪಕ್ಷದ ನಾಯಕರ ಮಹಿಳಾ ಪೀಡನೆಯ ಪ್ರಕರಣಗಳು ಒಂದೆರಡಲ್ಲ.
— Karnataka Congress (@INCKarnataka) December 18, 2023
ಬಿಜೆಪಿಗೆ ನಿಜಕ್ಕೂ ಮಹಿಳೆಯರ ಘನತೆಯ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ,
• ಸಂಸದ @Tejasvi_Surya ಮೇಲೆ ಕೇಳಿಬಂದಿದ್ದ ಮೀಟೂ ಆರೋಪದ ಬಗ್ಗೆ ಬಿಜೆಪಿ ಮಾತಾಡಲಿಲ್ಲ ಏಕೆ?
• ಸಂಸದ @mepratap ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಸಾಮಾಜಿಕ…
ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಹಾಗೇ ಮತ್ತೊಂದು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ 'ಪ್ರಧಾನಿ @narendramodi ಅವರು ಉತ್ತರದಾತ್ವದಿಂದ ತಪ್ಪಿಸಿಕೊಳ್ಳುವ ಉತ್ತರಕುಮಾರ! ಸಂಸತ್ತಿನಲ್ಲಿ ಭದ್ರತಾ ವೈಫಲ್ಯವಾಗಿರುವ ಸಂಗತಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಮೋದಿ ಹಿಂದೇಟು ಹಾಕುತ್ತಿರುವುದೇಕೆ? ತಮ್ಮ ಬಂಡವಾಳ ಬಯಲಾಗುವ ಭಯವೇ? ಪುಲ್ವಾಮ ದಾಳಿಯ ತನಿಖೆ ಮುಗಿಯಲೇ ಇಲ್ಲ, ಭದ್ರತಾ ವೈಫಲ್ಯದ ಲೋಪದ ಸಂಗತಿ ಹೊರಬರಲಿಲ್ಲ ಏಕೆ ಮೋದಿಯವರೇ? ಯೋಧರ ಹತ್ಯೆಯನ್ನು ತನಿಖೆ ಮಾಡುವುದಕ್ಕಿಂತ ಸಾರ್ವಜನಿಕ ಚರ್ಚೆಯ ಮೂಲಕ ಚುನಾವಣೆಗೆ ಬಳಸಿಕೊಂಡಿದ್ದೀರಿ ಅಲ್ಲವೇ? ಸಂಸತ್ ದಾಳಿ ಪ್ರಕರಣದಲ್ಲಿ ನಿಮ್ಮದೇ ಪಕ್ಷದ ಸಂಸದ @mepratap ಅವರನ್ನು ತನಿಖೆಗೆ ಒಳಪಡಿಸದಿರುವಾಗ ನಿಮ್ಮ ತನಿಖೆಗೆ ವಿಶ್ವಾಸಾರ್ಹ ಎಂದು ನಂಬಲು ಸಾಧ್ಯವೇ?' ಎಂದು ಬಿಜೆಪಿಗೆ ಪ್ರಶ್ನೆ ಹಾಕಿದೆ ಕಾಂಗ್ರೆಸ್.
ಪ್ರಧಾನಿ @narendramodi ಅವರು ಉತ್ತರದಾತ್ವದಿಂದ ತಪ್ಪಿಸಿಕೊಳ್ಳುವ ಉತ್ತರಕುಮಾರ!
— Karnataka Congress (@INCKarnataka) December 18, 2023
ಸಂಸತ್ತಿನಲ್ಲಿ ಭದ್ರತಾ ವೈಫಲ್ಯವಾಗಿರುವ ಸಂಗತಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಮೋದಿ ಹಿಂದೇಟು ಹಾಕುತ್ತಿರುವುದೇಕೆ? ತಮ್ಮ ಬಂಡವಾಳ ಬಯಲಾಗುವ ಭಯವೇ?
ಪುಲ್ವಾಮ ದಾಳಿಯ ತನಿಖೆ ಮುಗಿಯಲೇ ಇಲ್ಲ, ಭದ್ರತಾ ವೈಫಲ್ಯದ ಲೋಪದ ಸಂಗತಿ ಹೊರಬರಲಿಲ್ಲ ಏಕೆ ಮೋದಿಯವರೇ?… pic.twitter.com/TBjvJrc75N
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹೊತ್ತಿರುವ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಯಾವ ಲಕ್ಷಣಗಳು ಕಾಣ್ತಿಲ್ಲ. ಈ ಪೈಕಿ ಮುಂದಿನ ಲೋಕಸಭೆ ಚುನಾವಣೆ ತನಕ ಈ ಫೈಟಿಂಗ್ ಜೋರಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಇನ್ನ ಸ್ವಲ್ಪ ತಿಂಗಳ ಕಾಲ ಕಾದು ನೋಡಬೇಕು.












Click it and Unblock the Notifications