‘ಕಾಂಗ್ರೆಸ್ ಹೇಳುವಂತೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ...
ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ, ಯುವಕರಿಗೆ ಅನ್ಯಾಯ ಆಗುತ್ತಿದೆ ಅಂತಾ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ ಇದು ಸುಳ್ಳು ಕಾಂಗ್ರೆಸ್ ಸುಳ್ಳುಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಈ ಸಮದಯಲ್ಲೇ ಕರ್ನಾಟಕ ಕಾಂಗ್ರೆಸ್ & ಬಿಜೆಪಿ ಮಧ್ಯೆ ಭರ್ಜರಿ ಫೈಟಿಂಗ್ ಶುರುವಾಗಿದೆ. ನಿರುದ್ಯೋಗ ವಿಚಾರದ ದೊಡ್ಡ ವಿಷಯವಾಗಿ ಚರ್ಚೆಗೆ ವೇದಿಕೆ ಒದಗಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 'ದೇಶದ ಯುವ ಸಮುದಾಯ ಅತಿಹೆಚ್ಚು ಪ್ರಮಾಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುತ್ತಿರುವುದು @INCKarnataka ಕ್ಕೆ ಆತಂಕ ಮೂಡಿಸುತ್ತಿದೆ. ಇನ್ನೊಂದೆಡೆ ತನ್ನ ಕಾಲದಲ್ಲಿ ಅತಿದೊಡ್ಡ ಸಮಸ್ಯೆಯಾಗಿದ್ದ ನಿರುದ್ಯೋಗ ಈ ಕಾಲದಲ್ಲೂ ಜೀವಂತವಿದೆ ಎಂದು ನಂಬಿದೆ. ಹಾಗಾಗಿ ನಿರುದ್ಯೋಗದ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ. 53 ವರ್ಷಗಳಾದರೂ ಸರಿಯಾದ ಉದ್ಯೋಗ ಸಿಗದೆ, ಈಗ ಅಳೆದುಳಿದಿರುವ ಮೈತ್ರಿಕೂಟದ ಮುಖ್ಯಸ್ಥಿಕೆಯನ್ನೂ ವಹಿಸುವುದಕ್ಕೆ ಸಿಗದೆ ನಿರುದ್ಯೋಗಿಯಾಗಿರುವ ಅವರ ರಾಜಕುವರನ ಹಾಗೆಯೇ ದೇಶದಲ್ಲಿ ಎಲ್ಲರೂ ಕೆಲಸವಿಲ್ಲದೆ ಕೂತಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಭಾವನೆ.' ಎಂದು ಬಿಜೆಪಿ ಆರೋಪ ಮಾಡಿದೆ.

ಕಾಂಗ್ರೆಸ್ & ಬಿಜೆಪಿ ನಿರುದ್ಯೋಗ ಫೈಟ್!
ಹಾಗೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ, 'ಕಾಂಗ್ರೆಸ್ ಹೇಳುವಂತೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಕಾರ್ಯಕರ್ತರು ತುಂಬಿ ತುಳುಕಬೇಕಿತ್ತು, ಕಾಂಗ್ರೆಸ್ಸೇ ಅತಿದೊಡ್ಡ ಪಕ್ಷವಾಗಬೇಕಿತ್ತು. ಆದರೆ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವ ಜನ ಸ್ವತಃ ನಿರುದ್ಯೋಗಿಗಳನ್ನು ಬೆಂಬಲಿಸುವುದಿಲ್ಲವಾದ ಕಾರಣ ಕಾಂಗ್ರೆಸ್‌ಗೆ ಮೌಲ್ಯಯುತ ಕಾರ್ಯಕರ್ತರದ್ದೂ ಕೊರತೆಯಿದೆ.' ಎಂದು ಆರೋಪ ಮಾಡಿದೆ.
ದೇಶದ ಯುವ ಸಮುದಾಯ ಅತಿಹೆಚ್ಚು ಪ್ರಮಾಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುತ್ತಿರುವುದು @INCKarnataka ಕ್ಕೆ ಆತಂಕ ಮೂಡಿಸುತ್ತಿದೆ. ಇನ್ನೊಂದೆಡೆ ತನ್ನ ಕಾಲದಲ್ಲಿ ಅತಿದೊಡ್ಡ ಸಮಸ್ಯೆಯಾಗಿದ್ದ ನಿರುದ್ಯೋಗ ಈ ಕಾಲದಲ್ಲೂ ಜೀವಂತವಿದೆ ಎಂದು ನಂಬಿದೆ. ಹಾಗಾಗಿ ನಿರುದ್ಯೋಗದ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ.
— BJP Karnataka (@BJP4Karnataka) December 22, 2023
53 ವರ್ಷಗಳಾದರೂ…
'ಸ್ವತಂತ್ರ ಭಾರತದಲ್ಲೇ ಇದುವರೆಗೆ..'
ಸರಣಿ ಟ್ವೀಟ್‌ನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, 'ಸ್ವತಂತ್ರ ಭಾರತದಲ್ಲೇ ಇದುವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ, ದಾಖಲೆಯ ಪ್ರಮಾಣದಲ್ಲಿ ರೈಲ್ವೆ ವಿದ್ಯುದೀಕರಣ, ಹೊಸ ಬಂದರು-ವಿಮಾನ ನಿಲ್ದಾಣಗಳ ನಿರ್ಮಾಣಗಳೆಲ್ಲ @narendramodi ಸರ್ಕಾರದ ಆಡಳಿತದಲ್ಲಿ ನಡೆದಿದೆ ಮತ್ತು ಇದು ಮುಂದಿನ ಎರಡು ದಶಕಗಳ ಕಾಲ ನಿರಂತರ ಪ್ರಕ್ರಿಯೆಗಿರಲಿದೆ. ಇವುಗಳಿಗೆಲ್ಲಾ ಎಷ್ಟು ಮಂದಿ ಉದ್ಯೋಗಿಗಳು ಬೇಕು ಎಂಬ ಪರಿಕಲ್ಪನೆಯೂ ಕಾಂಗ್ರೆಸ್‌ಗೆ ಇಲ್ಲ.' ಎಂದಿದೆ ಬಿಜೆಪಿ.
ಸ್ವತಂತ್ರ ಭಾರತದಲ್ಲೇ ಇದುವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ, ದಾಖಲೆಯ ಪ್ರಮಾಣದಲ್ಲಿ ರೈಲ್ವೆ ವಿದ್ಯುದೀಕರಣ, ಹೊಸ ಬಂದರು-ವಿಮಾನ ನಿಲ್ದಾಣಗಳ ನಿರ್ಮಾಣಗಳೆಲ್ಲ @narendramodi ಸರ್ಕಾರದ ಆಡಳಿತದಲ್ಲಿ ನಡೆದಿದೆ ಮತ್ತು ಇದು ಮುಂದಿನ ಎರಡು ದಶಕಗಳ ಕಾಲ ನಿರಂತರ ಪ್ರಕ್ರಿಯೆಗಿರಲಿದೆ. ಇವುಗಳಿಗೆಲ್ಲಾ ಎಷ್ಟು ಮಂದಿ ಉದ್ಯೋಗಿಗಳು…
— BJP Karnataka (@BJP4Karnataka) December 22, 2023
ಹಾಗೇ, 'ಕಾಂಗ್ರೆಸ್‌ನ ಯುಪಿಎ ಸರ್ಕಾರದ ಕಾಲದಲ್ಲಿ ಇದ್ದುದಕ್ಕಿಂತ ದುಪ್ಪಟ್ಟಿಗಿಂತಲೂ ಅಧಿಕ, ಅಂದರೆ ವಾರ್ಷಿಕ ₹8400 ಕೋಟಿ ಡಾಲರ್ ಮೌಲ್ಯದ ಬಂಡವಾಳ ಹೂಡಿಕೆಯಾಗಿದೆ. ಮುದ್ರಾ ಯೋಜನೆಯೊಂದರಲ್ಲೇ ₹23 ಲಕ್ಷ ಕೋಟಿಯಷ್ಟು ಸಾಲ ನೇರವಾಗಿ ಹೂಡಿಕೆಯಾಗಿರುವುದು ಉದ್ಯೋಗ ಸೃಷ್ಟಿಯ ಮೇಲೆ. ಗ್ರಾಮೀಣ ಮೂಲಸೌಕರ್ಯಕ್ಕಾಗಿ ಮೋದಿ ಸರ್ಕಾರ ವಿನಿಯೋಗಿಸುತ್ತಿರುವ ₹50,000 ಕೋಟಿ ಗ್ರಾಮೀಣ ಭಾರತದಲ್ಲಿ ಹೊಸ ಉದ್ಯೋಗ ಸೃಷ್ಟಿಸಿದೆ.' ಎಂದಿದೆ ಕರ್ನಾಟಕ ಬಿಜೆಪಿ ಘಟಕ.
ಒಟ್ನಲ್ಲಿ ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ವಿಷಯ ಎಂಟ್ರಿ ಆಗಿದೆ. ಈ ಮೂಲಕ ನಿರುದ್ಯೋಗದ ವಿಚಾರದಲ್ಲಿ ಎರಡೂ ಪಕ್ಷದ ಮಧ್ಯೆ ಭರ್ಜರಿ ಫೈಟ್ ಈಗ ಶುರು ಆಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ.












Click it and Unblock the Notifications