‘ಜಮೀರ್ ಅಹ್ಮದ್ ಅವರಿಂದ ರಾಜೀನಾಮೆ ಪಡೆಯುವುದು ಒಂದು ಕಡೆ ಇರಲಿ...’
ಇಷ್ಟುದಿನ ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ & ಬಿಜೆಪಿ ನಡುವೆ ಗುಪ್ತವಾಗಿದ್ದ ಕಿಚ್ಚು, ಈಗ ಜ್ವಾಲೆಯಾಗಿ ಧಗಧಗಿಸುತ್ತಿದೆ. ವಿಧಾನಸಭೆ ಬೆಳಗಾವಿ ಅಧಿವೇಶನ ಶುರುವಾದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನ ಬಿಜೆಪಿ ಹೊರಿಸುತ್ತಿದೆ. ಇದೀಗ ಆ ಸಾಲಿಗೆ ಜಮೀರ್ ಅಹ್ಮದ್ ಖಾನ್ ಅವರ ವಿಚಾರ ಕೂಡ ಸೇರ್ಪಡೆ ಆಗಿದ್ದು, ಸದನದಲ್ಲಿನ ಕಿತ್ತಾಟ ತಾರಕಕ್ಕೆ ಏರಿದೆ. ಇದೇ ಸಮಯದಲ್ಲಿ ಬಿಜೆಪಿ ಸ್ಫೋಟಕ ಆರೋಪ ಮಾಡಿದೆ!
ಹೌದು, ಪಂಚರಾಜ್ಯ ಚುನಾವಣೆ ಮುಗಿದು ಹೋಗಿದೆ. ಅದರಲ್ಲೂ ಪಂಚರಾಜ್ಯ ಎಲೆಕ್ಷನ್ ರಿಸಲ್ಟ್ ಕರ್ನಾಟಕ ಬಿಜೆಪಿ ನಾಯಕರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ. ಮೊತ್ತೊಮ್ಮೆ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಪಕ್ಕಾ ಅನ್ನೋದು ಬಿಜೆಪಿ ನಾಯಕರ ವಿಶ್ವಾಸವಾಗಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ, ಈ ಆರೋಪ & ಪ್ರತ್ಯಾರೋಪಕ್ಕೆ ಹೊಸ ಸೇರ್ಪಡೆ ಆಗಿದೆ.

'ಜಮೀರ್ ಅಹ್ಮದ್ ಅವರಿಂದ...'
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ, 'ಯಾವುದೇ ಜಾತಿ ಮತ ಪಂಥಗಳಿಗೆ ಸೀಮಿತಗೊಳ್ಳದೆ ಸರ್ವ ಪಕ್ಷದ ಶಾಸಕರನ್ನು ಸಮಾನತೆಯಿಂದ ಕಾಣುವುದು ವಿಧಾನಸಭೆಯ ಸ್ಪೀಕರ್ ಅವರ ಕರ್ತವ್ಯ. ಆದರೆ ಸಚಿವ @BZZameerAhmedK ಅವರು ಪಂಚರಾಜ್ಯ ಚುನಾವಣೆ ಪ್ರಚಾರದ ವೇಳೆ ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದ್ದರು.' ಎಂದಿದೆ ಕರ್ನಾಟಕ ಬಿಜೆಪಿ.
ಹಾಗೇ ಟ್ವೀಟ್‌ನಲ್ಲಿ ವಾಗ್ದಾಳಿ ಮುಂದುವರಿಸಿದ ಬಿಜೆಪಿ, 'ಮುಖ್ಯಮಂತ್ರಿ @siddaramaiah ಅವರಾಗಲಿ, ವಿಧಾನಸಭೆಯ ಸ್ಪೀಕರ್ @utkhader ಅವರಾಗಲಿ ಜಮೀರ್ ಅಹ್ಮದ್ ಅವರಿಂದ ರಾಜೀನಾಮೆ ಪಡೆಯುವುದು ಒಂದು ಕಡೆ ಇರಲಿ, ಹೇಳಿಕೆಯನ್ನು ಸೌಜನ್ಯಕ್ಕಾದರೂ ಖಂಡಿಸುವ ಕೆಲಸ ಮಾಡಿಲ್ಲ.
ಯಾವುದೇ ಜಾತಿ ಮತ ಪಂಥಗಳಿಗೆ ಸೀಮಿತಗೊಳ್ಳದೆ ಸರ್ವ ಪಕ್ಷದ ಶಾಸಕರನ್ನು ಸಮಾನತೆಯಿಂದ ಕಾಣುವುದು ವಿಧಾನಸಭೆಯ ಸ್ಪೀಕರ್ ಅವರ ಕರ್ತವ್ಯ.
— BJP Karnataka (@BJP4Karnataka) December 11, 2023
ಆದರೆ ಸಚಿವ @BZZameerAhmedK ಅವರು ಪಂಚರಾಜ್ಯ ಚುನಾವಣೆ ಪ್ರಚಾರದ ವೇಳೆ ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದ್ದರು.
ಮುಖ್ಯಮಂತ್ರಿ @siddaramaiah ಅವರಾಗಲಿ,… pic.twitter.com/8K12zhywQX
ಕಾಂಗ್ರೆಸ್ ನಾಯಕರು ಅತ್ಯುನ್ನತ ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿದ್ದು ಅಲ್ಲದೇ, ಒಂದು ಧರ್ಮದ ಓಲೈಕೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಾಡಿನ ಸಮಸ್ತ ಜನತೆಗೆ ಮಾಡುತ್ತಿರುವ ದ್ರೋಹ..!' ಎಂದಿದೆ. ಈ ಮೂಲಕ ಕಾಂಗ್ರೆಸ್‌ನ ನಾಯಕರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದೆ.
ಒಟ್ನಲ್ಲಿ ಇತ್ತೀಚೆಗೆ ಬಿಜೆಪಿ ಕರ್ನಾಟಕಕ್ಕೆ ವಿರೋಧ ಪಕ್ಷದ ನಾಯಕರ ಆಗಮನವಾಗಿದ್ದು, ಇದರ ಜೊತೆ ನೂತನ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ವಿಧಾನಸಭೆ ಅಧಿವೇಶನ ಕೂಡ ಶುರುವಾಗಿದ್ದು, ರಾಜಕೀಯ ತಿಕ್ಕಾಟ ಕೂಡ ಬಲು ಜೋರಾಗಿದೆ.












Click it and Unblock the Notifications