‘ವಿರೋಧ ಪಕ್ಷವಾಗಿಯೂ ಬಿಜೆಪಿ ಆಸಮರ್ಥವಾಗಿದೆ ಎಂಬುದನ್ನು ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ’
ಕರ್ನಾಟಕ ಬಿಜೆಪಿಗೆ ಈಗ ಆಂತರಿಕ ಜಗಳ ದೊಡ್ಡ ಸವಾಲಾಗಿದೆ. ಹೊರಗಿನ ಶತ್ರುಗಳನ್ನು ನಿಭಾಯಿಸುವ ಸವಾಲಿಗಿಂತ, ಹೊರಗಿನ ಶತ್ರುಗಳ ಎದುರಿಸುವುದೇ ದೊಡ್ಡ ಕೆಲಸವಾಗಿದೆ. ಅದರಲ್ಲೂ ಕರ್ನಾಟಕ ಬಿಜೆಪಿ ಘಟಕಕ್ಕೆ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆಯಾದ ಬಳಿಕ ಹೊಸ ಬಿರುಗಾಳಿ ಎದ್ದಿದೆ. ಅಲ್ಲದೆ, ಹೊಸ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧವೂ ಬಿಜೆಪಿ ಒಳಗೆ ಆಕ್ರೋಶ ಮೊಳಗುತ್ತಿದೆ. ಹೀಗಿದ್ದಾಗ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ.
ಹೀಗೆ ಬಿಜೆಪಿ ಒಳಗೆ ಹೊತ್ತಿರುವ ಬೆಂಕಿಯ ಕಿಡಿಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ತುಪ್ಪ ಸುರಿದಿವೆ. ಅದ್ರಲ್ಲೂ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ವೇಳೆ ಬಿಜೆಪಿ ನಾಯಕರಿಗೆ & ವರಿಷ್ಠರಿಗೆ ಹೊಸ ಟೆನ್ಷನ್ ಶುರು ಆಗುತ್ತಿದೆ. ಈಗ ಇದೇ ವಿಚಾರವನ್ನ ಮುಂದಿಟ್ಟು ಕರ್ನಾಟಕ ಕಾಂಗ್ರೆಸ್ ಹೊಸ ಆರೋಪದ ಬಾಂಬ್ ಸಿಡಿಸಿದೆ. ಇದು ಈಗ ಬಿಜೆಪಿ ನಾಯಕ ಪಡೆಗೆ ಕೂಡ ನುಂಗಲಾರದ ತುತ್ತಾಗಿದೆ. ಹಾಗಾದ್ರೆ ಬಿಜೆಪಿ ಒಳಜಗಳ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು? ಪೂರ್ಣ ಮಾಹಿತಿಗಾಗಿ ಮುಂದೆ ಓದಿ.

'ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ'
ಅಂದಹಾಗೆ ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ಪಕ್ಷವಾಗಿರಲಿಲ್ಲ, ಜನ ತಿರಸ್ಕರಿಸಿದಾಗ ಉತ್ತಮ ವಿರೋಧ ಪಕ್ಷವಾಗಿಲ್ಲ. ವಿರೋಧ ಪಕ್ಷವಾಗಿಯೂ @BJP4Karnataka ಆಸಮರ್ಥವಾಗಿದೆ ಎಂಬುದನ್ನು ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವ ಮುಗಿದ ಅದ್ಯಾಯ, ಫೇಕ್ ನ್ಯೂಸ್ ಹಬ್ಬಿಸುವುದನ್ನೇ ವಿರೋಧ ಪಕ್ಷದ ಕೆಲಸ ಎಂದು ನಂಬಿಕೊಂಡಿರುವ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ.' ಎಂದು ಆರೋಪ ಮಾಡಿದೆ.
ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ಪಕ್ಷವಾಗಿರಲಿಲ್ಲ, ಜನ ತಿರಸ್ಕರಿಸಿದಾಗ ಉತ್ತಮ ವಿರೋಧ ಪಕ್ಷವಾಗಿಲ್ಲ.
— Karnataka Congress (@INCKarnataka) December 20, 2023
ವಿರೋಧ ಪಕ್ಷವಾಗಿಯೂ @BJP4Karnataka ಆಸಮರ್ಥವಾಗಿದೆ ಎಂಬುದನ್ನು ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವ ಮುಗಿದ ಅದ್ಯಾಯ, ಫೇಕ್ ನ್ಯೂಸ್ ಹಬ್ಬಿಸುವುದನ್ನೇ ವಿರೋಧ ಪಕ್ಷದ ಕೆಲಸ ಎಂದು… pic.twitter.com/Sy8Yedzo6l
'ಕರ್ಮ ರಿಟರ್ನ್ಸ್ ಎಂದರೆ ಇದೇ ಅಲ್ಲವೇ'
ಹಾಗೇ ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್, 'ಕರ್ಮ ರಿಟರ್ನ್ಸ್ ಎಂದರೆ ಇದೇ ಅಲ್ಲವೇ @BJP4Karnataka? ಅಧಿಕಾರವಿದ್ದಾಗ ದಲಿತವಿರೋಧಿಯಾಗಿ ನಡೆದುಕೊಂಡು ಈಗ ರಾಜಕೀಯ ಕಾರಣಕ್ಕೆ ಮೊಸಳೆ ಕಣ್ಣೀರು ಸುರಿಸಲು ಹೋದರೆ ಜನ ಕೇಳುವರೇ? ಬಿಜೆಪಿಗರು ಹೋದಹೋದಲ್ಲಿ ಜನತೆ ತಪರಾಕಿ ಕೊಡುತ್ತಿದ್ದಾರೆ, ಅ ಮಟ್ಟಿಗೆ ಜನವಿರೋಧಿಯಾಗಿ ನಡೆದುಕೊಂಡಿತ್ತು ಬಿಜೆಪಿ. ಪ್ರಶ್ನೆ ಮಾಡಿದವರ ವಿರುದ್ಧ ದೂರು ನೀಡುವುದು ಯಾವ ಸೀಮೆಯ ದಲಿತಪರ ಕಾಳಜಿ @BJP4Karnataka?'ಎಂದು ಆರೋಪ ಮಾಡಿದೆ ಕರ್ನಾಟಕ ಕಾಂಗ್ರೆಸ್.
ಕರ್ಮ ರಿಟರ್ನ್ಸ್ ಎಂದರೆ ಇದೇ ಅಲ್ಲವೇ @BJP4Karnataka?
— Karnataka Congress (@INCKarnataka) December 20, 2023
ಅಧಿಕಾರವಿದ್ದಾಗ ದಲಿತವಿರೋಧಿಯಾಗಿ ನಡೆದುಕೊಂಡು ಈಗ ರಾಜಕೀಯ ಕಾರಣಕ್ಕೆ ಮೊಸಳೆ ಕಣ್ಣೀರು ಸುರಿಸಲು ಹೋದರೆ ಜನ ಕೇಳುವರೇ?
ಬಿಜೆಪಿಗರು ಹೋದಹೋದಲ್ಲಿ ಜನತೆ ತಪರಾಕಿ ಕೊಡುತ್ತಿದ್ದಾರೆ, ಅ ಮಟ್ಟಿಗೆ ಜನವಿರೋಧಿಯಾಗಿ ನಡೆದುಕೊಂಡಿತ್ತು ಬಿಜೆಪಿ.
ಪ್ರಶ್ನೆ ಮಾಡಿದವರ ವಿರುದ್ಧ ದೂರು… pic.twitter.com/8VWRcpoGHE
ಈ ಮೂಲಕ ಬಿಜೆಪಿ ಒಳಜಗಳ ಸ್ವತಃ ಕರ್ನಾಟಕದ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವನ್ನ ತರಿಸಿದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಮೊದಲೇ ಹೀಗೆ ಕಿರಿಕ್ ಶುರುವಾಗಿದ್ದು, ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಮುಂದೆ ಏನಾಗುತ್ತೆ? ಅಂತ ಬಿಜೆಪಿ ವರಿಷ್ಠರಿಗೆ ಚಿಂತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿರುವ ನಾಯಕರ ಮೇಲೆ ಕ್ರಮ ಕೈಗೊಳ್ತಾರಾ? ಅಂತ ಕಾದು ನೋಡಬೇಕು.












Click it and Unblock the Notifications