ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಬಗ್ಗೆ ಬಿಜೆಪಿ ಹೇಳಿದ್ದೇನು?
ಕರ್ನಾಟಕದಲ್ಲಿ ಈಗ ಮತ್ತೊಮ್ಮೆ ಟಿಪ್ಪು ಸುಲ್ತಾನ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟಿಪ್ಪು ಸುಲ್ತಾನ್ ವಿಚಾರಕ್ಕೆ ದೊಡ್ಡ ಯುದ್ಧವೇ ನಡೆಯುತ್ತಿದೆ. ಹೀಗಿದ್ದಾಗಲೇ ಮೊನ್ನೆ ಮೊನ್ನೆಯಷ್ಟೇ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವ ವಿಚಾರ ಪ್ರಸ್ತಾಪ ಆಗಿತ್ತು. ಅದಕ್ಕೆ ಬಿಜೆಪಿ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಭರ್ಜರಿ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಟಿಪ್ಪು ಜಯಂತಿ & ಟಿಪ್ಪು ಸುಲ್ತಾನ್ ವಿಚಾವೇ ಭಾರಿ ಚರ್ಚೆಯಾಗುತ್ತಿದೆ. ಒಂದು ಕಡೆ ಟಿಪ್ಪು ಸುಲ್ತಾನ್ ಪರ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ರೆ ಇನ್ನೊಂದು ಕಡೆ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ವಿರುದ್ಧ ಮಾತನಾಡುತ್ತಾರೆ. ಹೀಗಿದ್ದಾಗ ಇಬ್ಬರ ನಡುವೆ ಭರ್ಜರಿ ಫೈಟಿಂಗ್ ನಡೆಯುತ್ತಿದೆ. ಇದೆಲ್ಲಾ ಒಂದು ಕಡೆ ಇರುವಾಗ, ಈಗ ಹೊಸ ಅಸ್ತ್ರ ಪ್ರಯೋಗಿಸಿದೆ ಬಿಜೆಪಿ. ಹಾಗಾದರೆ ಏನದು ಹೊಸ ಅಸ್ತ್ರ? ಟಿಪ್ಪು ಸುಲ್ತಾನ್ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಹೇಳಿದ್ದೇನು? ಮುಂದೆ ಓದಿ.

'ವೋಟಿಗಾಗಿ ಟಿಪ್ಪು ಸುಲ್ತಾನ್ ನಮ್ಮವನು ಎಂದು..'
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 'ರಾಜ್ಯದಲ್ಲಿ @INCKarnataka ತುಷ್ಟೀಕರಣ ಅತಿರೇಕದ ಉತ್ತುಂಗಕ್ಕೆ ತಲುಪಿದೆ. ವೋಟಿಗಾಗಿ ಟಿಪ್ಪು ಸುಲ್ತಾನ್ ನಮ್ಮವನು ಎಂದು ಹೇಳುವ @CMahadevappa ಅವರಂತಹ ಕಾಂಗ್ರೆಸ್ಸಿಗರು ನಾಳೆ ಭಯೋತ್ಪಾದಕರಾದ ಒಸಮಾ ಬಿನ್ ಲಾಡೆನ್, ಹಫೀಜ್ ಸೈಯದ್, ದಾವುದ್ ಇಬ್ರಾಹಿಂ ಕೂಡ ನಮ್ಮವನು ಎಂದು ಹೇಳಿದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಲಜ್ಜೆಬಿಟ್ಟು ನಿಲ್ಲುವುದಕ್ಕೂ ಹೇಸುವುದಿಲ್ಲ.' ಎಂದು ಆರೋಪ ಮಾಡಿದೆ.
ರಾಜ್ಯದಲ್ಲಿ @INCKarnataka ತುಷ್ಟೀಕರಣ ಅತಿರೇಕದ ಉತ್ತುಂಗಕ್ಕೆ ತಲುಪಿದೆ.
— BJP Karnataka (@BJP4Karnataka) December 19, 2023
ವೋಟಿಗಾಗಿ ಟಿಪ್ಪು ಸುಲ್ತಾನ್ ನಮ್ಮವನು ಎಂದು ಹೇಳುವ @CMahadevappa ಅವರಂತಹ ಕಾಂಗ್ರೆಸ್ಸಿಗರು ನಾಳೆ ಭಯೋತ್ಪಾದಕರಾದ ಒಸಮಾ ಬಿನ್ ಲಾಡೆನ್, ಹಫೀಜ್ ಸೈಯದ್, ದಾವುದ್ ಇಬ್ರಾಹಿಂ ಕೂಡ ನಮ್ಮವನು ಎಂದು ಹೇಳಿದರೂ ಅಚ್ಚರಿ ಇಲ್ಲ.
ಕಾಂಗ್ರೆಸ್ ವೋಟ್ ಬ್ಯಾಂಕ್… pic.twitter.com/4uFfJ5TT2S
'ಈಗಾಗಲೇ ವರ್ಗಾವಣೆ ದಂಧೆಯಲ್ಲಿ..'
ಹಾಗೇ ಇನ್ನೊಂದು ಟ್ವೀಟ್ ಮೂಲಕವೂ ಕಾಂಗ್ರೆಸ್ ವಿರುದ್ಧ ಇದೇ ರೀತಿ ವಾಗ್ದಾಳಿ ನಡೆಸಿರುವ ಬಿಜೆಪಿ, 'ಈಗಾಗಲೇ ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಕಮಾಯಿ ಮಾಡಿರುವ @INCKarnataka ಸರ್ಕಾರ ಇದೀಗ ಪ್ರತಿ ನೇಮಕಾತಿಯನ್ನೂ ದಂಧೆ ಮಾಡಿಕೊಂಡಿದೆ. ಲಕ್ಷ ಲಕ್ಷ ಕೊಟ್ಟವರಿಗಷ್ಟೇ ಕೆಲಸ ಕೊಡಲಾಗುತ್ತಿರುವ ಕೆಎಂಎಫ್‌ನಲ್ಲಿ ಮುಖ್ಯಮಂತ್ರಿ @siddaramaiah ಅವರಿಂದ ಹಿಡಿದು ಉಪಮುಖ್ಯಮಂತ್ರಿ @DKShivakumar ಆದಿಯಾಗಿ ಸಚಿವರವರೆಗೆ ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಕೋಟಾ ಬೇರೆ ಮಾಡಿಕೊಳ್ಳಲಾಗಿದೆ.' ಎಂದಿದೆ. ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಫೈಟ್ ತಾರಕಕ್ಕೆ ಏರಿದ್ದು, ಕರ್ನಾಟಕ ರಾಜಕೀಯ ಅಖಾಡ ಮತ್ತಷ್ಟು ಕಾವು ಪಡೆದಿದೆ.












Click it and Unblock the Notifications