‘ಹಿಂದೆ ಕರ್ನಾಟಕ ಬರ ಎದುರಿಸುತ್ತಿದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಎಂಬುದಕ್ಕೆ ಈ ಹಳೆಯ ವರದಿ ಒಂದು...’
ಅಬ್ಬಬ್ಬಾ.. ಕಾಂಗ್ರೆಸ್ & ಬಿಜೆಪಿ ಜಗಳ ವಿಪರೀತಕ್ಕೆ ಹೋಗಿದೆ. ಅದು ಯಾವುದೇ ವಿಚಾರ ಇರಲಿ, ಇಬ್ಬರ ನಡುವೆ ಮೊದಲು ಫೈಟಿಂಗ್ ಶುರುವಾಗುತ್ತೆ. ಬರದ ಬಗ್ಗೆಯೇ ಇರಲಿ, ಇಲ್ಲ ಕಾವೇರಿ ನೀರಿನ ವಿಚಾರವೇ ಆಗಿರಲಿ. ಅದರಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುರಿತು ಬಿಜೆಪಿ & ಕಾಂಗ್ರೆಸ್ ಜಂಗಿ ಕುಸ್ತಿ ಶುರು ಮಾಡುತ್ತವೆ. ಈಗ ಬರದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದೊಡ್ಡ ಕಾಡ್ಗಿಚ್ಚೇ ಹೊತ್ತಿಕೊಂಡಿದೆ!
ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರ ಎದುರಾಗಿರುವ ಸಮಯದಲ್ಲಿ, ಮೋಜು & ಮಸ್ತಿ ಮಾಡುತ್ತಿದೆ ಎನ್ನುವ ಆರೋಪವನ್ನ ಬಿಜೆಪಿ ಮಾಡುತ್ತಿತ್ತು. ಹೀಗೆ ಬಿಜೆಪಿ ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್ ಈಗ ಉತ್ತರ ನೀಡಿದೆ. ಅಲ್ಲದೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಏನ್ ಏನ್ ಆಗಿತ್ತು? ಅನ್ನೋದನ್ನ ಕಾಂಗ್ರೆಸ್ ಹೇಳಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಮತ್ತು ಕರ್ನಾಟಕ ಬಿಜೆಪಿ ನಡುವೆ ಮಾತಿನ ಮಹಾಯುದ್ಧ ಆರಂಭವಾಗಿದೆ. ಕಾಂಗ್ರೆಸ್ ಈಗ ತನ್ನ ಎದುರಾಳಿ ಬಿಜೆಪಿ ವಿರುದ್ಧ ಯಾವ ಅಸ್ತ್ರ ಪ್ರಯೋಗ ಮಾಡಿದೆ ಗೊತ್ತಾ?

'ಇದೇ ಬಿಜೆಪಿ ಅದೆಷ್ಟು ಐಷಾರಾಮಿ...'
ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿ, 'ಹಿಂದೆ ಕರ್ನಾಟಕ ಬರ ಎದುರಿಸುತ್ತಿದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಎಂಬುದಕ್ಕೆ ಈ ಹಳೆಯ ವರದಿ ಒಂದು ಉದಾಹರಣೆ. ರಾಜ್ಯ ಭೀಕರ ಬರ ಎದುರಿಸುತ್ತಿತ್ತು, ಅಂದಿನ ಬಿಜೆಪಿ ಅಧ್ಯಕ್ಷ @BSYBJP ಅವರು ಕೋಟಿ ಬೆಲೆಯ ಐಷಾರಾಮಿ ಕಾರನ್ನು ನಿರಾಣಿಯವರಿನ ಗಿಫ್ಟ್ ಪಡೆದು ಮೋಜು ಮಾಡುತ್ತಿದ್ದರು! BSY ಅವರಿಗೆ ಕೋಟಿ ಬೆಲೆಯ ಕಾರು ನೀಡುವ ನಿರಾಣಿ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಆಗ @BJP4Karnataka ಗೆ ರೈತರ ನೆನಪಾಗಲಿಲ್ಲವೇ?' ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ವಿಚಾರವಾಗಿ ಮಾತನಾಡಿ, ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕೆಣಕಿದೆ.
ಹಿಂದೆ ಕರ್ನಾಟಕ ಬರ ಎದುರಿಸುತ್ತಿದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಎಂಬುದಕ್ಕೆ ಈ ಹಳೆಯ ವರದಿ ಒಂದು ಉದಾಹರಣೆ.
— Karnataka Congress (@INCKarnataka) December 23, 2023
ರಾಜ್ಯ ಭೀಕರ ಬರ ಎದುರಿಸುತ್ತಿತ್ತು, ಅಂದಿನ ಬಿಜೆಪಿ ಅಧ್ಯಕ್ಷ @BSYBJP ಅವರು ಕೋಟಿ ಬೆಲೆಯ ಐಷಾರಾಮಿ ಕಾರನ್ನು ನಿರಾಣಿಯವರಿನ ಗಿಫ್ಟ್ ಪಡೆದು ಮೋಜು ಮಾಡುತ್ತಿದ್ದರು!
BSY ಅವರಿಗೆ ಕೋಟಿ ಬೆಲೆಯ ಕಾರು… pic.twitter.com/aIzqKSYEbS
'ಹಣ ಎಲ್ಲಿ ಹೋಯ್ತು ಹೇಳಿ?'
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಒಂದೆಡೆ ದೇಶದ ಸಿರಿವಂತ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಲಾಗುತ್ತಿದೆ. ಇನ್ನೊಂದೆಡೆ ದೇಶದ ಸಾಲ 205 ಲಕ್ಷ ಕೋಟಿಗೆ ಏರಿಕೆಯಾಗಿದೆ. 2014ರ ವರೆಗೆ ಭಾರತದ ಬಾಹ್ಯ ಸಾಲ 50 ಲಕ್ಷ ಕೋಟಿಯ ಆಸುಪಾಸಿನಲ್ಲಿತ್ತು. ಕೇವಲ 9 ವರ್ಷದ ಆಡಳಿತದಲ್ಲಿ ಸಾಲವು 205 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಹೇಗೆ? ಯಾರಿಗಾಗಿ? ಯಾವುದೇ ಜನಪರ ಯೋಜನೆ ನೀಡದೆ, ಅಭಿವೃದ್ಧಿ ಕಾರ್ಯಗಳು ನಡೆಯದೆ ಈ ಹಣ ಎಲ್ಲಿ ಹೋಯ್ತು @BJP4Karnataka?' ಎಂದು ಬಿಜೆಪಿಗೆ ಪ್ರಶ್ನೆ ಮಾಡಿದೆ ಕರ್ನಾಟಕ ಕಾಂಗ್ರೆಸ್.
ಒಂದೆಡೆ
— Karnataka Congress (@INCKarnataka) December 23, 2023
ದೇಶದ ಸಿರಿವಂತ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಲಾಗುತ್ತಿದೆ.
ಇನ್ನೊಂದೆಡೆ
ದೇಶದ ಸಾಲ 205 ಲಕ್ಷ ಕೋಟಿಗೆ ಏರಿಕೆಯಾಗಿದೆ.
2014ರ ವರೆಗೆ ಭಾರತದ ಬಾಹ್ಯ ಸಾಲ 50 ಲಕ್ಷ ಕೋಟಿಯ ಆಸುಪಾಸಿನಲ್ಲಿತ್ತು.
ಕೇವಲ 9 ವರ್ಷದ ಆಡಳಿತದಲ್ಲಿ ಸಾಲವು 205 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಹೇಗೆ? ಯಾರಿಗಾಗಿ?
ಯಾವುದೇ ಜನಪರ ಯೋಜನೆ… pic.twitter.com/qZAfDhWkcy
ಈ ಮೂಲಕ ಬಿಜೆಪಿ & ಕಾಂಗ್ರೆಸ್ ನಡುವೆ ಕಾಡ್ಗಿಚ್ಚೇ ಹೊತ್ತಿಕೊಂಡಿದೆ. ಅದರಲ್ಲೂ ಈಗ ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದು, ಇದೇ ಸಮಯದಲ್ಲಿ ಕಿತ್ತಾಟ ಕೂಡ ಜೋರಾಗಿ ಧಗಧಗಿಸುತ್ತಿದೆ. ಈಗ ಕಾಂಗ್ರೆಸ್ ಹಾಕಿರುವ ಸವಾಲಿಗೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆಯನ್ನ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications