‘ತಾಲಿಬಾನ್‌ನಂತಹ ಕ್ರೂರ ಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆಗಳು ಈಗ ಕರ್ನಾಟಕದಲ್ಲಿ ನಡೆಯುತ್ತಿವೆ’
ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತಿಕ್ಕಾಟ ತೀವ್ರಗೊಂಡಿರುವ ಬೆನ್ನಲ್ಲೇ, ಈಗ ಬೆಳಗಾವಿ ಘಟನೆ ಕೂಡ ಇಬ್ಬರ ನಡುವೆ ರಾಜಕೀಯ ಯುದ್ಧಕ್ಕೆ ವೇದಿಕೆ ಒದಗಿಸಿದೆ. ಬಿಜೆಪಿ ಈ ಬಗ್ಗೆ ಟ್ವೀಟ್ ಮಾಡಿ, ಬೆಳಗಾವಿ ವಿಚಾರವನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಹಾಗಾದರೆ ಬಿಜೆಪಿ ಹೇಳಿದ್ದೇನು? ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆರೋಪವೇನು?
ಹೌದು, ಬೆಳಗಾವಿ ಜಿಲ್ಲೆ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರನ್ನ ವಸ್ತ್ರ ರಹಿತರಾಗಿ ಮೆರವಣಿಗೆ ಮಾಡಿದ ಘಟನೆ ಕಿಚ್ಚು ಹೊತ್ತಿಸಿದೆ. ಇಡೀ ಮನುಷ್ಯರ ಕುಲವೇ ಈ ಘಟನೆ ಬಳಿಕ ತಲೆಯ ತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಶಾಂತಿಗೆ ಹೆಸರಾಗಿರುವ ಕನ್ನಡಿಗರ ನಾಡಲ್ಲಿ ಇಂತಹ ಘಟನೆ ನಡೆದಿದ್ದು ಇಡೀ ದೇಶದ ಗಮನ ಸೆಳೆದಿದೆ. ಹೀಗಿದ್ದಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫುಲ್ ಫೈಟಿಂಗ್ ಶುರುವಾಗಿದೆ. ಇದೇ ವಿಚಾರ ಇಟ್ಟುಕೊಂಡು ಈಗ ಬಿಜೆಪಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಅಲ್ಲದೆ 'ತಾಲಿಬಾನ್' ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದೆ.

ಕರ್ನಾಟಕ ಬಿಜೆಪಿ ಹೇಳಿದ್ದು ಏನು?
ಬೆಳಗಾವಿಯ ಘಟನೆ ಪ್ರಸ್ತಾಪಿಸಿ ಕರ್ನಾಟಕ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ 'ಕೇವಲ ತಾಲಿಬಾನ್‌ನಂತಹ ಕ್ರೂರ ಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆಗಳು ಈಗ ಕರ್ನಾಟಕದಲ್ಲಿ ನಡೆಯುತ್ತಿವೆ. ಇದು ಆರೂವರೆ ಕೋಟಿ ಕನ್ನಡಿಗರಿಗೆ @INCKarnataka ಸರ್ಕಾರ ನೀಡಿದ ಗಿಫ್ಟ್. ಕಾಂಗ್ರೆಸ್ ಸರ್ಕಾರವು ಈ ಆರು ತಿಂಗಳ ಆಡಳಿತದಲ್ಲಿ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಜೊತೆ ಅಪರಾಧ ಪ್ರಕರಣಗಳನ್ನೂ ಏರಿಸಿದೆ. ಕಾನೂನಿನ ಭಯವಿಲ್ಲದೆ ಹಾಡುಹಗಲೇ ಪುಂಡರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ದಯನೀಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ರಾಜ್ಯ ಉಚ್ಛ ನ್ಯಾಯಾಲಯದಿಂದ ಪದೇ ಪದೆ ಛೀಮಾರಿ ಹಾಕಿಸಿಕೊಳ್ಳುತ್ತಿದ್ದರೂ, ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಬರದಿರುವುದು ರಾಜ್ಯದ ದುರ್ದೈವ.' ಎಂದು ಆರೋಪ ಮಾಡಿದೆ ಬಿಜೆಪಿ.

ಕೇವಲ ತಾಲಿಬಾನ್‌ನಂತಹ ಕ್ರೂರ ಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆಗಳು ಈಗ ಕರ್ನಾಟಕದಲ್ಲಿ ನಡೆಯುತ್ತಿವೆ. ಇದು ಆರೂವರೆ ಕೋಟಿ ಕನ್ನಡಿಗರಿಗೆ @INCKarnataka ಸರ್ಕಾರ ನೀಡಿದ ಗಿಫ್ಟ್.
— BJP Karnataka (@BJP4Karnataka) December 15, 2023
ಕಾಂಗ್ರೆಸ್ ಸರ್ಕಾರವು ಈ ಆರು ತಿಂಗಳ ಆಡಳಿತದಲ್ಲಿ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಜೊತೆ ಅಪರಾಧ ಪ್ರಕರಣಗಳನ್ನೂ ಏರಿಸಿದೆ.
ಕಾನೂನಿನ ಭಯವಿಲ್ಲದೆ… pic.twitter.com/avJSdgJ43V
ಹೀಗೆ ಬೆಳಗಾವಿ ಘಟನೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಅದ್ರಲ್ಲೂ ಈ ಘಟನೆಯ ಬಗ್ಗೆ ನಿನ್ನೆ ಹೈಕೋರ್ಟ್ ಕೂಡ ಗರಂ ಆಗಿತ್ತು. ಅಲ್ಲದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಹೀಗಾಗಿ ಗಡಿ ಜಿಲ್ಲೆಯಾದ ಬೆಳಗಾವಿ ಘಟನೆ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications