65 ಶಾಸಕರನ್ನ ಹಿಡಿದಿಟ್ಟುಕೊಳ್ಳಿ; ಬಿಜೆಪಿಯಲ್ಲಿ ಬಾಂಬ್ ಸ್ಟೋಟ: ಜಮೀರ್ ಹೀಗೆ ಹೇಳಿದ್ಯಾಕೆ!?
ಬೆಂಗಳೂರು, ನವೆಂಬರ್ 01: ರಾಜ್ಯ ರಾಜಕೀಯದಲ್ಲಿ ಆಪರೇಶನ್ ಹಸ್ತ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ಹೊತ್ತಲ್ಲೇ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇನ್ನೊಂದು ವಾರ ಅಥವಾ ಹತ್ತು ದಿನ ಕಾಯಿರಿ ರಾಜ್ಯದಲ್ಲಿ ದೊಡ್ಡ ಬಾಂಬ್ ಬ್ಲಾಸ್ಟ್ ಆಗಲಿದೆ. ಬಿಜೆಪಿಯವರು ಅವರ 65 ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಜಮೀರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಏನಾಗಲಿದೆ ನವೆಂಬರ್ 10 ರವರೆಗೂ ಕಾದು ನೋಡಿ. ಬಿಜೆಪಿ ಅವರು ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಸರ್ಕಾರಕ್ಕೆ ಏನೂ ಆಗದು. 65 ಶಾಸಕರನ್ನು ಇಟ್ಟುಕೊಂಡು ಹಗಲು ಕನಸು ಕಾಣುತ್ತಿದ್ದಾರೆ ಎಂದು ವಸತಿ ಲೇವಡಿ ಮಾಡಿದರು.
ಇನ್ನೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲು ಬಿಜೆಪಿ ಶಾಸಕರನ್ನು ಹಿಡಿದು ಇಟ್ಟುಕೊಳ್ಳಲಿ. ಕಾಂಗ್ರೆಸ್ ನ ಒಬ್ಬ ಶಾಸಕ ಸಹ ಹೋಗಲ್ಲ. ಇನ್ನೊಂದು ವಾರ ಹತ್ತು ದಿನ ನೋಡಿ ಹೇಗೆ ಸ್ಫೋಟ ಆಗುತ್ತೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ. ನಮ್ಮದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದು ತಿಳಿಸಿದರು.












Click it and Unblock the Notifications