• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಇಡಿ ದಾಳಿಯ ಸೀಕ್ರೇಟ್ ಏನು?

|
Google Oneindia Kannada News

ಬೆಂಗಳೂರು, ಆ. 05: ಮಾಜಿ ಸಚಿವ, ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಬಂಬೂ ಬಜಾರ್ ಬಳಿ ನಿರ್ಮಿಸಿದ್ದ ಐಷಾರಾಮಿ ಬಂಗಲೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯಲ್ಲಿರುವ ಫ್ಲಾಟ್ ಮೇಲೆ ದಾಳಿ ನಡೆದಿದೆ. ವಿಚಾರಣೆಗಾಗಿ ಜಮೀರ್‌ರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

   ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada

   ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರತ್ಯೇಕ ತಂಡಗಳು ಬೆಳಗಿನ ಜಾವ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ದಾಖಲೆ ಕೈ ಸೇರುತ್ತಿದ್ದ ಜಮೀರ್ ಮೊಬೈಲ್ ಸಹ ವಶಕ್ಕೆ ಪಡೆದಿದ್ದಾರೆ.

   Breaking News: ರೋಷನ್ ಬೇಗ್ ಮನೆ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ Breaking News: ರೋಷನ್ ಬೇಗ್ ಮನೆ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ

   ಜಮೀರ್ ಅಹಮದ್ ಬೇನಾಮಿ ವಹಿವಾಟು ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರ ಒಡೆತನದ ಬಂಗಲೆ, ಜಮೀರ್ ಟ್ರಾವೆಲ್ಸ್ ಹಾಗೂ ಶ್ರೀಲಂಕಾದಲ್ಲಿ ಹೊಂದಿರುವ ಕ್ಯಾಸಿನೋ ವಹಿವಾಟು, ಜಮೀರ್ ಮಗಳ ಮದುವೆ ವೆಚ್ಚ ಹಾಗೂ ಮಗನ ಸಿನಿಮಾ ನಿರ್ಮಾಣದ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

   ಐಎಂಎ ಹಗರಣದಲ್ಲಿ ಜಮೀರ್ ಹೆಸರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಹೆಸರು ಕೇಳಿಬಂದಿತ್ತು. ಹೂಡಿಕೆ ಮಾಡಿದವರಿಗೆ ನಾಮ ಹಾಕಿ ಪರಾರಿಯಾಗಿದ್ದ ಮನ್ಸೂರ್ ಆಲಿಖಾನ್ ಮಾಜಿ ಶಾಸಕ ರೋಷನ್ ಬೇಗ್ ಹಾಗೂ ಜಮೀರ್ ಅಹಮದ್ ಖಾನ್ ಹೆಸರು ಪ್ರಸ್ತಾಪಿಸಿದ್ದರು. ಆಸ್ತಿಯೊಂದನ್ನು ಬಹುಕೋಟಿಗೆ ಜಮೀರ್ ಅಹಮದ್ ಖಾನ್ ಐಎಎಂ ಸಂಸ್ಥೆಗೆ ಪರಭಾರೆ ಮಾಡಿದ್ದ ದಾಖಲೆಗಳು ಬೆಳಕಿಗೆ ಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಜಮೀರ್, ನಂದು ಕಾನೂನು ಬದ್ಧ ವಹಿವಾಟು ನಡೆದಿದೆ. ಆಸ್ತಿಯೊಂದರ ಪರಭಾರೆ ನಡೆದಿರುವುದು ನಿಜ. ಆದರೆ ಅದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮತ್ತೊಬ್ಬ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಳಿಕ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಐಎಂಎ ವಂಚನೆ ಪ್ರಕರಣವೇಳ ಜಮೀರ್ ಮೇಲೆ ಇಡಿ ಕಣ್ಣು ಇಟ್ಟಿತ್ತು.

   ಜಮೀರ್‌ಗೆ ನೋಟಿಸ್ ನೀಡಿದ್ದ ಇಡಿ : ಜು. 28, 2019 ರಲ್ಲಿಯೇ ಇಡಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್‌ಗೆ ನೋಟಿಸ್ ನೀಡಿದ್ದರು. ನೋಟಿಸ್ ಪಡೆಯಲು ಜಮೀರ್ ಎರಡು ತಾಸು ಇಡಿ ಅಧಿಕಾರಿಗಳನ್ನು ಕಾಯಿಸಿದ್ದರಂತೆ. ಸ್ಥಳೀಯ ಪೊಲೀಸರು ಬಂದ ಬಳಿಕ ನೋಟಿಸ್ ಪಡೆದಿದ್ದರು. ಎರಡು ಬಾರಿ ಇಡಿ ವಿಚಾರಣೆ ಎದುರಿಸಿದ್ದ ಜಮೀರ್ ಮನೆ ಮೇಲೆ ಇದೀಗ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

   Inside Information About MLA Zameer Ahmed khan ED Raid in Bengaluru

   ಬೆಂಬಲಿಗರ ಆಗಮನ: ಬಂಬೂ ಬಜಾರ್ ಸಮೀಪ ಇರುವ ಶಾಸಕ ಜಮೀರ್ ಅಹಮದ್ ಮನೆ ಸಮೀಪ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಹೀಗಾಗಿ ಕಂಟೋನ್ಮೆಂಟ್ ಸಮೀಪದ ಜಮೀರ್ ಅರಮನೆ ಮುಂದಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜಕೀಯ ಪ್ರೇರಿತ ದಾಳಿ ನಡೆದಿದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಇಡಿ ದಾಳಿ ಮಾಡಿಸಿದ್ದಾರೆ. ಬಿಜೆಪಿ ರಾಜಕೀಯ ಪ್ರೇರಿತ ದಾಳಿ ಎಂದು ಜಮೀರ್ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಇಡಿ ಅಧಿಕಾರಿಗಳ ದಾಳಿ ಖಂಡಿಸಿ ಜಮೀರ್ ಬೆಂಬಲಿಗರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.

   ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಪೊಲೀಸರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

   ಆಪ್ತರ ಮನೆ ಮೇಲೂ ಶೋಧ : ಮಾಜಿ ಸಚಿವ ಜಮೀರ್ ಅಹಮದ್ ಅವರ ಆಪ್ತರ ಮನೆ ಮೇಲೂ ಸಹ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಮೀರ್ ಸಿಗರೇಟು ವಹಿವಾಟು, ಕ್ಯಾಸಿನೋ ಸೇರಿದಂತೆ ಅನೇಕ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದು, ಅವರು ಸಲ್ಲಿಸಿರುವ ಆದಾಯ ತೆರಿಗೆ ಹಾಗೂ ಹೊಂದಿರುವ ಆಸ್ತಿಗಳ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಬೇನಾಮಿ ವಹಿವಾಟು ನಡೆಸಿರುವ ಸಂಬಂಧ ಹಲವು ಸಾಕ್ಷ್ಯಾಧಾರಗಳು ಸಿಕ್ಕಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಐಎಂಎ ಸಂಸ್ಥೆ ಜತೆಗಿನ ವಹಿವಾಟೇ ಜಮೀರ್ ಇಡಿ ಬಲೆಗೆ ಬೀಳಲು ಕಾರಣವಾಯಿತೇ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

   ಬಿ.ಝಡ್. ಜಮೀರ್ ಅಹಮದ್ ಖಾನ್
   Know all about
   ಬಿ.ಝಡ್. ಜಮೀರ್ ಅಹಮದ್ ಖಾನ್
   English summary
   Did the transaction with the IMA is Reason for ED raid on MLA Zameer Ahmed khan? Zameer Ahmed Khan's Illegal transactions documents has been seized by ED officials. Zamir Ahmed Khan detained by ED
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X