ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬಿಯಾದಲ್ಲಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಎಡಪಂಥೀಯ ಗುಸ್ಟಾವೊ ಪೆಟ್ರೋ ಪ್ರಮಾಣ ವಚನ

|
Google Oneindia Kannada News

ಎಂ-19 ಸಶಸ್ತ್ರ ಗುಂಪಿನ ಮಾಜಿ ಸದಸ್ಯ, ಮಾಜಿ ಬಂಡಾಯ ಹೋರಾಟಗಾರ ಗುಸ್ಟಾವೊ ಪೆಟ್ರೋ ಕೊಲಂಬಿಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೊಗೋಟಾದ ಬೊಲಿವರ್ ಪ್ಲಾಜಾದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕೊಲಂಬಿಯಾದ ಮೊದಲ ಎಡಪಂಥೀಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ.

ಅಸಮಾನತೆ ಮತ್ತು ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ದೇಶವನ್ನು ಒಂದುಗೂಡಿಸುವುದು, ಬಂಡಾಯ ಗುಂಪುಗಳು ಮತ್ತು ಅಪರಾಧ ಗುಂಪುಗಳೊಂದಿಗೆ ಶಾಂತಿ ಸಾಧಿಸುವ ಪ್ರತಿಜ್ಞೆ ಮಾಡಿದ್ದಾರೆ.

ಕೊಲಂಬಿಯಾದಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ ಆಡಳಿತ; ಗುಸ್ಟಾವೊ ಪೆಟ್ರೋ- ಪರಿಚಯಕೊಲಂಬಿಯಾದಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ ಆಡಳಿತ; ಗುಸ್ಟಾವೊ ಪೆಟ್ರೋ- ಪರಿಚಯ

ಸ್ಪ್ಯಾನಿಷ್ ರಾಜ ಫೆಲಿಪ್ VI ಸೇರಿದಂತೆ ಸುಮಾರು 100,000 ಆಹ್ವಾನಿತರು, ಕನಿಷ್ಠ ಒಂಬತ್ತು ಲ್ಯಾಟಿನ್ ಅಮೇರಿಕನ್ ಅಧ್ಯಕ್ಷರು ಮತ್ತು ಪೆಟ್ರೋ ಆಹ್ವಾನಿಸಿದ ಇತರ ಕೊಲಂಬಿಯನ್ನರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದರು.

"ನನಗೆ ಎರಡು ದೇಶಗಳು ಬೇಡ, ಹಾಗೆಯೇ ನನಗೆ ಎರಡು ಸಮಾಜಗಳು ಬೇಡ. ಬಲವಾದ, ನ್ಯಾಯಯುತ ಮತ್ತು ಏಕೀಕೃತ ಕೊಲಂಬಿಯಾವನ್ನು ನಾನು ಬಯಸುತ್ತೇನೆ" ಎಂದು ಪೆಟ್ರೋ ಉದ್ಘಾಟನಾ ಭಾಷಣದಲ್ಲಿ ಭಾವನಾತ್ಮಕವಾಗಿ ಹೇಳಿದರು. "ಒಂದು ರಾಷ್ಟ್ರವಾಗಿ ನಾವು ಹೊಂದಿರುವ ಸವಾಲುಗಳು ಮತ್ತು ಪರೀಕ್ಷೆಗಳು ಏಕತೆ ಮತ್ತು ಮೂಲಭೂತ ಏಕತೆಯನ್ನು ಬಯಸುತ್ತವೆ." ಎಂದು ಹೇಳಿದ್ದಾರೆ.

 ಶಾಂತಿ ಸ್ಥಾಪನೆಗೆ ಮುಂದಾದ ಗುಸ್ಟಾವೊ ಪೆಟ್ರೋ

ಶಾಂತಿ ಸ್ಥಾಪನೆಗೆ ಮುಂದಾದ ಗುಸ್ಟಾವೊ ಪೆಟ್ರೋ

62 ವರ್ಷದ ಗುಸ್ಟಾವೊ ಪೆಟ್ರೋ, ನ್ಯಾಷನಲ್ ಲಿಬರೇಶನ್ ಆರ್ಮಿ (ELN) ಬಂಡುಕೋರರೊಂದಿಗಿನ ಶಾಂತಿ ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅದನ್ನು ತಿರಸ್ಕರಿಸುವ ಶಸ್ತ್ರಸಜ್ಜಿತ ಕೊಲಂಬಿಯಾ ಪಡೆಗಳ (FARC) ಹೋರಾಟಗಾರರ ಮಾಜಿ ಸದಸ್ಯರಿಗೆ 2016 ರ ಶಾಂತಿ ಒಪ್ಪಂದವನ್ನು ಜಾರಿಮಾಡುವ ಭರವಸೆ ನೀಡಿದ್ದಾರೆ.

ಅವರ ವಿದೇಶಾಂಗ ಸಚಿವರು ಸರ್ಕಾರವು ಗುಂಪುಗಳೊಂದಿಗೆ ಮಾತುಕತೆ ನಡೆಸುತ್ತದೆ ಮತ್ತು ಮಾದಕವಸ್ತು ಕಳ್ಳಸಾಗಣೆಯ ಬಗ್ಗೆ ಮಾಹಿತಿಗಾಗಿ ಸದಸ್ಯರಿಗೆ ಕಡಿಮೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ. ಸಶಸ್ತ್ರ ಗುಂಪುಗಳು ಒಪ್ಪಂದವನ್ನು ಒಪ್ಪಿಕೊಳ್ಳಬೇಕು ಎಂದು ಪೆಟ್ರೋ ಒತ್ತಾಯಿಸಿದ್ದಾರೆ.
"ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ನಾವು ಹೋರಾಟಗಾರರಿಗೆ ಕರೆ ನೀಡುತ್ತೇವೆ. ಹಿಂಸೆಯನ್ನು ತ್ಯಜಿಸಿ ಶಾಂತಿಯನ್ನು ಒಪ್ಪಿಕೊಳ್ಳುವ ಮೂಲಕ ಕಾನೂನು ಪ್ರಯೋಜನಗಳನ್ನು ಸ್ವೀಕರಿಸಲು ಕರೆ ನೀಡುತ್ತೇನೆ" ಎಂದು ಹೇಳಿದರು. ಪೆಟ್ರೋ ಮಾತಿಗೆ ಕಾರ್ಯಕ್ರಮದಲ್ಲಿ ನರೆದಿದ್ದ ಜನ ಹರ್ಷೋದ್ಗಾರ ಮಾಡಿದರು.

 ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಟ

ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಟ

ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡಲು ಹೊಸ ಅಂತರರಾಷ್ಟ್ರೀಯ ಕಾರ್ಯತಂತ್ರ ಬಳಸಲು ಅವರು ಕರೆ ನೀಡಿದರು. ಡ್ರಗ್ಸ್ ವಿರುದ್ಧ ಯುನೈಟೈಡ್‌ ಸ್ಟೇಟ್ಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಯುದ್ಧ ವಿಫಲವಾಗಿದೆ ಎಂದು ಅವರು ಹೇಳಿದರು.

"ಮಾದಕ ವಸ್ತುಗಳ ವಿರುದ್ಧ ಮಾಡುತ್ತಿರುವ ಯುದ್ಧದ ವಿಫಲವಾಗಿದೆ ಎಂದು ಒಪ್ಪಿಕೊಳ್ಳಲು ಹೊಸ ಅಂತರರಾಷ್ಟ್ರೀಯ ಸಮಾವೇಶಕ್ಕೆ ಇದು ಸೂಕ್ತ ಸಮಯವಾಗಿದೆ. ಕಳೆದ 40 ವರ್ಷಗಳಲ್ಲಿ ಒಂದು ಮಿಲಿಯನ್ ಜನ ಮಾದಕ ವಸ್ತುವಿನ ಚಟಕ್ಕೆ ಬಲಿಯಾಗಿದ್ದಾರೆ. ಉತ್ತರ ಅಮೆರಿಕದಲ್ಲಿ ಪ್ರತಿ ವರ್ಷ 70,000 ಜನ ಮಿತಿ ಮೀರಿದ ಡ್ರಗ್ಸ್ ಸೇವನೆಗೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ವಿರುದ್ಧದ ಯುದ್ಧವು ಮಾಫಿಯಾಗಳನ್ನು ಬಲಪಡಿಸಿದೆ ಮತ್ತು ರಾಜ್ಯಗಳನ್ನು ದುರ್ಬಲಗೊಳಿಸಿದೆ" ಎಂದು ಪೆಟ್ರೋ ಹೇಳಿದರು.

ಹವಾಮಾನ ಬದಲಾವಣೆಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋರಾಡಬೇಕು, ಅದರಲ್ಲೂ ವಿಶೇಷವಾಗಿ ಹೆಚ್ಚು ಹಸಿರುಮನೆ ಅನಿಲಗಳನ್ನು ಹೊರಸೂಸುವ ದೇಶಗಳ ಕುರಿತಂತೆ ಎಂದು ಪೆಟ್ರೋ ಹೇಳಿದರು, ಕೊಲಂಬಿಯಾ ಕಲ್ಲಿದ್ದಲು ಅಥವಾ ತೈಲದ ಮೇಲೆ ಅವಲಂಬನೆಯಿಲ್ಲದ ಆರ್ಥಿಕತೆಗೆ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.

 ಹಸಿವಿನ ವಿರುದ್ಧ ಹೋರಾಟಕ್ಕೆ ಆದ್ಯತೆ

ಹಸಿವಿನ ವಿರುದ್ಧ ಹೋರಾಟಕ್ಕೆ ಆದ್ಯತೆ

ಕೊಲಂಬಿಯಾದಲ್ಲಿ ತೈಲಗಳನ್ನು ಹೊರತೆಗೆಯಲು ಹೊಸ ಪರವಾನಗಿಗಳನ್ನು ನೀಡುವುದನ್ನು ನಿಲ್ಲಿಸುತ್ತದೆ. ತೈಲ ಉದ್ಯಮವು ರಾಷ್ಟ್ರದ ರಫ್ತಿನ ಪ್ರಮಾಣದಲ್ಲಿ ಶೇಕಡ 50ರಷ್ಟನ್ನು ಹೊಂದಿದ್ದರೂ ಸಹ, ತೈಲ ಹೊರತೆಗೆಯುವ ಯೋಜನೆಗಳನ್ನು ನಿಷೇಧಿಸುತ್ತದೆ ಎಂದು ಪೆಟ್ರೋ ಹೇಳಿದರು. ಶ್ರೀಮಂತರ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಮತ್ತು ಕಾರ್ಪೊರೇಟ್‌ ತೆರಿಗೆ ವಿನಾಯಿತಿಗಳಿಂದ ದೂರವಿಡುವ ವರ್ಷದ ತೆರಿಗೆ ಸುಧಾರಣೆಯೊಂದಿಗೆ 10 ಬಿಲಿಯನ್ ಡಾಲರ್ ಗಳನ್ನು ಸಾಮಾಜಿಕ ವೆಚ್ಚಕ್ಕೆ ಬಳಸಲು ಒದಗಿಸಲು ಯೋಜಿಸಿದ್ದಾರೆ.

ಕೊಲಂಬಿಯಾದ ಒಟ್ಟು ಜನಸಂಖ್ಯೆ 5 ಕೋಟಿಯಷ್ಟಿದ್ದು, ಇದರಲ್ಲಿ ಅರ್ಧದಷ್ಟು ಜನ ಬಡತನದಿಂದ ನರಳುತ್ತಿದ್ದಾರೆ. ಅವರ ಹಸಿವಿನ ವಿರುದ್ಧ ಹೋರಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದು ಪೆಟ್ರೋ ಹೇಳಿದ್ದಾರೆ. ದೇಶದ ಜನತೆಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಒದಗಿಸಿಕೊಡುವ ಪ್ರತಿಜ್ಞೆ ಮಾಡಿದ್ದಾರೆ. ತಮ್ಮ ಯೋಜನೆಗಳನ್ನು ಜಾರಿ ಮಾಡಲು ಎಡಪಂಥೀಯ ಮತ್ತು ಕೇಂದ್ರೀಯ ಪಕ್ಷಗಳ ವಿಶಾಲವಾದ ಕಾಂಗ್ರೆಸ್ ಒಕ್ಕೂಟವನ್ನು ನಿರ್ಮಿಸಿದ್ದಾರೆ.

"ಇತ್ತೀಚಿನ ವರ್ಷದಲ್ಲಿ ಯಾವ ಸರ್ಕಾರಕ್ಕೂ ಈ ಮಟ್ಟದ ಬೆಂಬಲ ಸಿಕ್ಕಿರಲಿಲ್ಲ, ಪೆಟ್ರೋ ಹೆಚ್ಚಿನ ಬಹುಮತ ಪಡೆದು ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಪ್ರಾರಂಭಿಸುತ್ತಾರೆ" ಎಂದು ಸಂಘರ್ಷ ವಿಶ್ಲೇಷಣೆಯ ಸಂಪನ್ಮೂಲ ಕೇಂದ್ರದ ವಿಶ್ಲೇಷಕ ಜಾರ್ಜ್ ರೆಸ್ಟ್ರೆಪೋ ತಿಳಿಸಿದ್ದಾರೆ.

"ಪೆಟ್ರೋ ಬಹಳ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಹೊಂದಿದ್ದಾರೆ" ಎಂದು ಬೊಗೋಟಾದ ರೊಸಾರಿಯೊ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಯಾನ್ ಬಾಸೆಟ್ ಹೇಳಿದರು. "ಒಂದೇ ಬಾರಿಗೆ ಹಲವು ಸುಧಾರಣೆಗಳನ್ನು ಮಾಡಲಾಗದು, ಅದು ಅಪಾಯಕಾರಿಯಾಗುತ್ತದೆ, ಪೆಟ್ರೋ ತನ್ನ ಆದ್ಯತೆ ಮೇಲೆ ಸುಧಾರಣೆಗಳನ್ನು ಜಾರಿ ಮಾಡಬೇಕು" ಎಂದು ಹೇಳಿದ್ದಾರೆ.

 ಉಪಾಧ್ಯಕ್ಷೆಯಾಗಿ ಫ್ರಾನ್ಸಿಯಾ ಮಾರ್ಕ್ವೆಜ್ ಆಯ್ಕೆ

ಉಪಾಧ್ಯಕ್ಷೆಯಾಗಿ ಫ್ರಾನ್ಸಿಯಾ ಮಾರ್ಕ್ವೆಜ್ ಆಯ್ಕೆ

ಹೊಸ ಉಪಾಧ್ಯಕ್ಷ ಫ್ರಾನ್ಸಿಯಾ ಮಾರ್ಕ್ವೆಜ್, ಪರಿಸರ ಕಾರ್ಯಕರ್ತೆ ಮತ್ತು ಮಾಜಿ ಹೌಸ್‌ಕೀಪರ್, ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಮೊದಲ ಆಫ್ರೋ-ಕೊಲಂಬಿಯನ್ ಮಹಿಳೆಯಾಗಿದ್ದಾರೆ. ಅವರ ಕ್ಯಾಬಿನೆಟ್‌ನಲ್ಲಿ ಅಂತರಾಷ್ಟ್ರೀಯವಾಗಿ ಹೆಸರಾಂತ ಪ್ರೊಫೆಸರ್, ಜೋಸ್ ಆಂಟೋನಿಯೊ ಒಕಾಂಪೊ, ಹಣಕಾಸು ಮಂತ್ರಿಯಾಗಿ ಮತ್ತು ಕೈಗಾರಿಕೆಗಳ ಋಣಾತ್ಮಕ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸುವ ಗಣಿಗಾರಿಕೆಯ ಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ. ಕಾರ್ಮಿಕ ಸಚಿವಾಲಯವನ್ನು ಕೊಲಂಬಿಯಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರು ಮುನ್ನಡೆಸುತ್ತಾರೆ.

ಸಾವಿರಾರು ಬೆಂಬಲಿಗರು ಬೊಗೋಟಾದಲ್ಲಿ ಮತ್ತು ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ದೊಡ್ಡ ಪರದೆಗಳಲ್ಲಿ ಪೆಟ್ರೋ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

"ಈ ರೀತಿ ಆಗುವುದನ್ನು ನೋಡಲು ನಾನು ಬದುಕಿದ್ದೇನೆ ಎಂದು ನಂಬಲಾಗುತ್ತಿಲ್ಲ" ಎಂದು ಪೆಟ್ರೋ ಭಾವಚಿತ್ರದ ಹೊಂದಿದ ಟೀಶರ್ಟ್ ಮತ್ತು ಟೋಪಿ ಧರಿಸಿದ್ದ ಅವರ ಬೆಂಬಲಿಗ ಪ್ಲಂಬರ್ ನೆಲ್ಸನ್ ಮೊಲಿನಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. "ಒಂದೇ ದಿನಕ್ಕೆ ಎಲ್ಲವೂ ಬದಲಾಗುವುದಿಲ್ಲ ಎಂದು ನನಗೆ ಗೊತ್ತಿದೆ, ಆದರೆ ಅದರ ಪ್ರಾರಂಭ" ಎಂದು ಹೇಳಿದ್ದಾರೆ.

 ವೆನೆಜುವೆಲಾ ಜೊತೆ ವ್ಯಾಪಾರ, ರಾಯಭಾರ ಸೇವೆ ಪುನರಾರರಂಭ

ವೆನೆಜುವೆಲಾ ಜೊತೆ ವ್ಯಾಪಾರ, ರಾಯಭಾರ ಸೇವೆ ಪುನರಾರರಂಭ

ಕೊಲಂಬಿಯಾ-ವೆನೆಜುವೆಲಾ ಗಡಿಯ ಎರಡೂ ಬದಿಗಳಲ್ಲಿ ಜನರ ಗುಂಪುಗಳು ಸಂಭ್ರಮ ಆಚರಿಸಿದವು, ಕೊಲಂಬಿಯಾದ ನಗರವಾದ ಕುಕುಟಾದ ಹೊರಗಿನ ಸೈಮನ್ ಬೊಲಿವರ್ ಸೇತುವೆಯ ಎರಡೂ ಬದಿಯಲ್ಲಿ ನೂರಾರು ಜನರು ಸೇರಿದ್ದರು.

ಬೊಗೋಟಾದ ಮಾಜಿ ಮೇಯರ್ ಆಗಿರುವ ಪೆಟ್ರೋ, ವೆನೆಜುವೆಲಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಯುವುದಾಗಿ ಭರವಸೆ ನೀಡಿದ್ದಾರೆ, ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ರಾಯಭಾರ ಸೇವೆಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ.

ಅಧಿಕಾರ ವಹಿಸಿಕೊಂಡ ನಂತರ, 1974 ರಲ್ಲಿ ಪೆಟ್ರೋ ಅವರ ಹಿಂದಿನ ಎಂ-19 ಒಡನಾಡಿಗಳಿಂದ ಕಳವು ಮಾಡಿದ್ದ ಲ್ಯಾಟಿನ್ ಅಮೇರಿಕನ್ ವಿಮೋಚನಾ ವೀರ ಸೈಮನ್ ಬೊಲಿವರ್ ಅವರ ಕತ್ತಿಯನ್ನು ತರಲು ಸೈನ್ಯಕ್ಕೆ ಪೆಟ್ರೋ ಮೊದಲ ಆದೇಶ ನೀಡಿದರು. ಅವರ ಪೂರ್ವವರ್ತಿ ಇವಾನ್ ಡ್ಯೂಕ್ ಸಮಾರಂಭದಲ್ಲಿ ಅದರ ಬಳಕೆಯನ್ನು ಅಧಿಕೃತಗೊಳಿಸದ ನಂತರ ಪ್ಲಾಜಾದಲ್ಲಿ ಪ್ರದರ್ಶಿಸಲಾಯಿತು.

Recommended Video

ಈ ಥರಾ ಬೌಂಡರಿ ಹೊಡಿಯೋಕೆ ಯಾರಿಂದಾನು ಸಾಧ್ಯ ಇಲ್ಲಾ !! | OneIndia Kannada

English summary
A former rebel fighter and former member of the M-19 armed group took oath as Colombia’s first left-wing president."I do not want two countries, just as I do not want two societies. I want a strong, just and united Colombia," an emotional Petro said in his inaugural speech. Thousands of supporters celebrated in Bogota and at large screens set up in public places around the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X