ಯುದ್ಧದ ಬೆಂಕಿಗೆ ಕರಗಿದ ಲಕ್ಷ, ಲಕ್ಷ ಕೋಟಿ ಸಂಪತ್ತು!

ಯುದ್ಧ ಯಾರಿಗೆ ಬೇಕು ಹೇಳಿ? ಯುದ್ಧ ಅನ್ನೋದನ್ನ ಪ್ರತಿಯೊಬ್ಬರು ಕೂಡ ದ್ವೇಷಿಸುತ್ತಾರೆ. ಆದರೆ ಕೆಲವರಿಗೆ ಮಾತ್ರ ಯುದ್ಧ ಬೇಕೆ ಬೇಕು. ಯುದ್ಧದ ಮೂಲಕವೇ ಲಾಭ ಮಾಡಿಕೊಂಡು ಬೇರೆಯವರ ಜೀವ & ಜೀವನ ಹಾಳು ಮಾಡುವವರು ಕೂಡ ಇದ್ದಾರೆ. ಈಗ ಪ್ರಪಂಚದಲ್ಲಿ ಒಟ್ಟು 2 ಭೀಕರ ಯುದ್ಧಗಳು ನಡೆಯುತ್ತಿದ್ದು, ಇದೇ ಹೊತ್ತಲ್ಲೇ ಮತ್ತೊಂದು ಯುದ್ಧವೂ ಜಗತ್ತನ್ನು ಸರ್ವನಾಶ ಮಾಡುವ ಪಟ್ಟಿಗೆ ಸೇರ್ಪಡೆ ಆಗುತ್ತಿದೆ.

ಇಸ್ರೇಲ್ & ಇರಾನ್ ನಡುವೆ ಕಿಚ್ಚು ಹೊತ್ತಿಕೊಂಡಿದ್ದು, ಯಾವ ಸಮಯದಲ್ಲಿ ಬೇಕಾದರೂ ಯುದ್ಧ ಘೋಷಣೆ ಆಗಿ 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಹೀಗೆ ಯುದ್ಧದ ಕಾರ್ಮೋಡ ಆವರಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ಕೂಡ ಅಲ್ಲಾಡಿ ಹೋಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಜನರಿಗೆ ಭಯ ಶುರುವಾಗಿದ್ದು, ಅಲ್ಲೋಲ ಕಲ್ಲೋಲ ಶುರುವಾಗಿದೆ. ಹೂಡಿಕೆದಾರರ ಸಂಪತ್ತು ಕರಗಿ ಹೋಗುತ್ತಿದ್ದು, ಭಾರತದಲ್ಲಿಯು ಷೇರು ಪೇಟೆಯಲ್ಲಿ ಆತಂಕ ಶುರುವಾಗಿದೆ. ಹೀಗೆ ಷೇರು ಮಾರುಕಟ್ಟೆ ಇಂದು ಕೂಡ ಕುಸಿತ ಕಂಡಿದೆ.

Iran And Israel Clash Created Fear In Share Market

ಯುದ್ಧದ ನಡುವೆ ಹೂಡಿಕೆಗೆ ಭಯ?

ಯುದ್ಧದ ಭೀತಿ ಹಿನ್ನೆಲೆ, ಷೇರು ಪೇಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲವೇ ಎದುರಾಗಿದೆ. ಒಂದು ಕಡೆ ಅಮೆರಿಕದಲ್ಲಿ ಷೇರು ಪೇಟೆ ಮಹಾ ಕುಸಿತ ಕಂಡಿದ್ದು. ಇದೇ ವೇಳೆ, ಭಾರತದಲ್ಲಿ ಕೂಡ ಷೇರು ಮಾರುಕಟ್ಟೆ, ಸತತವಾಗಿ ಕುಸಿತ ಕಾಣುತ್ತಿದೆ. ನಿನ್ನೆಯಂತೆ ಇಂದು ಕೂಡ ಷೇರು ಪೇಟೆಯಲ್ಲಿ ಕುಸಿತ ದಾಖಲಾಗಿದೆ. ಷೇರು ಸೂಚ್ಯಂಕ ಸೆನ್‌ಸೆಕ್ಸ್ 456 ಹಾಗೂ ನಿಫ್ಟಿ-50 ಕೂಡ ಬರೋಬ್ಬರಿ 124 ಅಂಕ ಕುಸಿತ ಕಂಡಿದೆ. ಈ ಮೂಲಕ ಯುದ್ಧದ ಭೀತಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಹೂಡಿಕೆ ಮಾಡಿದ್ದವರ ಸಂಪತ್ತು ಕರಗುತ್ತಿದೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಮೊನ್ನೆಯಿಂದಲೇ ಅಲ್ಲೋಲ ಕಲ್ಲೋಲ ಶುರುವಾಗಿ, ಹೂಡಿಕೆ ಮಾಡಿದವರು ಪರದಾಡುತ್ತಿದ್ದಾರೆ. ಇದರ ಎಫೆಕ್ಟ್ ಭಾರತದ ಷೇರು ಮಾರುಕಟ್ಟೆಗೆ ಆಗಿದ್ದು ನಿನ್ನೆ ಅಂದ್ರೆ ಸೋಮವಾರ. ನಿನ್ನೆ ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ ಭೂಕಂಪ ಎದುರಾಗಿತ್ತು. ಯುದ್ಧ ಭಯಕ್ಕೆ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆದ ಹಿನ್ನೆಲೆ ನಿನ್ನೆ ಷೇರು ಪೇಟೆ ಭಾರಿ ದೊಡ್ಡ ನಷ್ಟ ಅನುಭವಿಸಿತ್ತು. 5.18 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು ಷೇರು ಮಾರುಕಟ್ಟೆ. ಆದರೆ ಇಂದು ಕೂಡ ಇದೇ ರೀತಿ ನಷ್ಟದ ಹಾದಿಯನ್ನ ಹಿಡಿದಿದೆ ಷೇರು ಪೇಟೆ.

ಅಸಲಿ ಆಟ ಈಗ ಶುರು!

ರಷ್ಯಾ ಅಧ್ಯಕ್ಷ ಪುಟಿನ್ ಅವರು ಇರಾನ್‌ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಇಸ್ರೇಲ್ ವಿರುದ್ಧದ ದಾಳಿಗೆ ಕೂಡ ಅಸ್ತ್ರಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ಸಂಚಲನ ಸೃಷ್ಟಿ ಮಾಡುವ ಅಂಶವೊಂದು ಬೆಳಕಿಗೆ ಬಂದಿದ್ದು, ಅದು ಏನಂದ್ರೆ ಉಕ್ರೇನ್ ವಿರುದ್ಧ ಹೋರಾಟ ನಡೆಸಲು ರಷ್ಯಾಗೆ ಇರಾನ್ ಸಹಾಯ ಮಾಡಿತ್ತು. ಇದೀಗ ಇಸ್ರೇಲ್‌ನ ವಿರುದ್ಧ ಹೋರಾಟ ನಡೆಸಲು ರಷ್ಯಾ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ, ಅಮೆರಿಕ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಬೇರೆಯದ್ದೇ ತಂತ್ರ ಹೂಡಿರುವ ರೀತಿ ತೋರುತ್ತಿದೆ. ಆದರೆ ಮತ್ತೊಂದು ಕಡೆ ಷೇರು ಪೇಟೆ ಮಾತ್ರ ನಲುಗಿ ಹೋಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+