Heavy rains in Dubai: ದುಬೈನಲ್ಲಿ ವರುಣನ ಅರ್ಭಟ: ವಿಮಾನ ನಿಲ್ದಾಣ ಮುಳುಗಡೆ- ವಿಡಿಯೋ ವೈರಲ್

ದುಬೈ ಏಪ್ರಿಲ್ 17: ಕಳೆದ ಕೆಲ ದಿನಗಳಿಂದ ದುಬೈನಲ್ಲಿ ದಾರಾಕಾರ ಮಳೆಯಾಗುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ತೀವ್ರತೆಗೆ ರಸ್ತೆಗಳಿಂದ ಹಿಡಿದು ವಿಮಾನ ನಿಲ್ದಾಣಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಮೆಟ್ರೋ ನಿಲ್ದಾಣ, ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹೌದು... ಮಂಗಳವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಅಬುಧಾಬಿ) ಭಾರೀ ಮಳೆಯಾಗಿದ್ದು ಪ್ರವಾಹದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಅಬುಧಾಬಿ, ದುಬೈ ಮತ್ತು ಅಲ್ ಐನ್‌ನಂತಹ ನಗರಗಳಲ್ಲಿ ಅಧಿಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಕಣ್ಣಾಯಿಸಿದಲೆಲ್ಲ ಪ್ರವಾಹದಂತಹ ಪರಿಸ್ಥಿತಿಗಳು ಕಾಣಿಸುತ್ತಿವೆ. ಹಲವು ಪ್ರಮುಖ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದು ವಾಹನ ಹಾಗೂ ವಿಮಾನಗಳ ಸಂಚಾರಕ್ಕೂ ತೊಂದರೆಯಾಗಿದೆ.

Heavy rains in Dubai Dubai Airport Flooded Flights Diverted After Heavy Rain in kannada

ಯುಎಇಯ ನೆರೆಯ ಒಮಾನ್ ಕೂಡ ಭಾರೀ ಮಳೆಯಿಂದಾಗಿ ಪ್ರವಾಹವನ್ನು ಅನುಭವಿಸುತ್ತಿದೆ. ವರುಣನ ಮುನಿಸಿಗೆ 18 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ದುಬೈನಲ್ಲಿ ಸೋಮವಾರ ಮತ್ತು ಮಂಗಳವಾರ ರಾತ್ರಿಯಿಂದ ಜೋರು ಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ದುಬೈ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ವಿಮಾನಗಳ ಮಾರ್ಗದಲ್ಲಿ ಬದಲಾವಣೆ

ಮಂಗಳವಾರದವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 120 ಮಿಮೀ.ಗೂ ಹೆಚ್ಚು ಮಳೆ ದಾಖಲಾಗಿದೆ. ನಗರದ ರಸ್ತೆಗಳೆಲ್ಲವೂ ನದಿಗಳಂತಾಗಿವೆ. ಮಾಹಿತಿಯ ಪ್ರಕಾರ, ದುಬೈ ವಿಮಾನ ನಿಲ್ದಾಣದಲ್ಲಿ ನೀರು ನಿಂತಿದ್ದರಿಂದ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಸುಮಾರು 45 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 3 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ.

Heavy rains in Dubai Dubai Airport Flooded Flights Diverted After Heavy Rain in kannada

ಮಾತ್ರವಲ್ಲದೆ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಶಾಲೆಗಳು ಹಾಗೂ ಬಹುತೇಕ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಲಾಗಿದೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಹಲವು ವಾಹನಗಳು ಜಖಂಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಗಿವೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಜಾಗೃತರಾಗಿರಲು ದುಬೈ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬೆಳಗಿನ ಜಾವದವರೆಗೂ ಮಳೆ

ಹವಾಮಾನ ಇಲಾಖೆಯ ಸಲಹೆಯ ಪ್ರಕಾರ ಮಳೆ ಮತ್ತು ಚಂಡಮಾರುತದ ಪರಿಸ್ಥಿತಿ ಬುಧವಾರ ಬೆಳಗಿನವರೆಗೂ ಮುಂದುವರಿಯಲಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಹವಾಮಾನ ಇಲಾಖೆ ಮನವಿ ಮಾಡಿದೆ. ಮಳೆಯಿಂದಾಗಿ ವಿಮಾನ ನಿಲ್ದಾಣದ ಜೊತೆಗೆ ಅನೇಕ ಮಾಲ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಸಂಪೂರ್ಣವಾಗಿ ಮುಳುಗಿವೆ.

ಕಳೆದ ವರ್ಷವೂ ಭಾರೀ ಮಳೆ

ಕಳೆದ ವರ್ಷ ಮಳೆ ಮತ್ತು ಚಂಡಮಾರುತದಿಂದಾಗಿ ಕತಾರ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಸಾಕಷ್ಟು ಹಾನಿಯಾಗಿತ್ತು. ಹಲವಾರು ಜನ ಪ್ರಾಣ ಕಳೆದುಕೊಂಡಿದ್ದರು. ಈಗ ಬೆಂಬಿಡದೆ ಮಳೆಯಾಗುತ್ತಿದ್ದು ಜನರನ್ನು ಆತಂಕಕ್ಕೆ ತಳ್ಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+