ರಸ್ತೆ ರಿಪೇರಿ ಆದ್ರೆ ಸೆಕ್ಸ್, ವಿಚಿತ್ರ ಚಳವಳಿಗೆ ಭರ್ಜರಿ ಜಯ

ಸುಮಾರು 300ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ತನ್ನ ಗಂಡ ಮತ್ತು ಗೆಳೆಯರನ್ನು ಸೆಕ್ಸ್ ನಿಂದ ದೂರವಿಟ್ಟು ಪ್ರತಿಭಟನೆ ಆರಂಭಿಸಿದ್ದರು. ನಮ್ಮ ಗಂಡಸರ ಹಿಂಜರಿಕೆಯನ್ನು ದೂರ ಮಾಡಲು ಮತ್ತು ಅವರು ಮೇಯರ್ ಮತ್ತು ರಾಜ್ಯಪಾಲರ ಮುಖಾಂತರ ಹಳ್ಳಿಗೆ ಸುಸಜ್ಜಿತ ರಸ್ತೆ ನಿರ್ಮಿಸುವಂತೆ ಮಾಡಿಸಲು ಈ ರೀತಿ ಪ್ರತಿಭಟನೆಗೆ ಮುಂದಾಗಿದೆವು ಎಂದು ಮಾರಿಬೆಲ್ ಸಿಲ್ವ ಎಂಬ ಮಹಿಳೆ ಹೇಳುತ್ತಾರೆ.
ಆರು ದಿನಗಳ ಕಾಲ ನಡೆಯಬೇಕಿದ್ದ ಈ ಕಾಲು ಮೇಲೆ ಕಾಲು ಹಾಕಿ ಕೂರುವ ಪ್ರತಿಭಟನೆ ಕೇವಲ ಐದೇ ದಿನಗಳಲ್ಲಿ ನಿಲ್ಲಿಸಲಾಯಿತು ಹಾಗೂ ಪರಿಹಾರವಾಗಿ ರಸ್ತೆ ಕಾಮಗಾರಿ ಆರಂಭವಾಗಿದೆ. ಸೆಕ್ಸ್ ಸ್ಟೈಕ್ ಬದಲು ಹಂಗರ್ ಸ್ಟೈಕ್ ಆದರೂ ಮಾಡಿದ್ರೆ ಇನ್ನಷ್ಟು ಸ್ಲಿಮ್ ಆಗ್ತಾ ಇದ್ರು ಎಂದು ಬಾರ್ಬಕೋಸದ ಪುರುಷ ಸಿಂಹಗಳು ಹೇಳಿದ್ದು ಅವರ ಹೆಂಗಸರಿಗೆ ಕೇಳಿಸಿಲ್ಲ.
ಎಲ್ಲಾ ರೋಗಿಗಳಿಗಾಗಿ: ಸಣ್ಣ ಕಾಯಿಲೆ ಕಸಾಲೆ ಬಂದರೆ ಔಷಧಿ ಬೇಕು ಎಂದರೆ ಸುಮಾರು 35 ಮೈಲಿ ದೂರದ ನಗರಕ್ಕೆ ಓಡಿ ಹೋಗಬೇಕು. ಸರಿಯಾದ ರಸ್ತೆ, ಸಂಪರ್ಕವಿಲ್ಲದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ. ರೋಗಿಗಳ ಶುಶ್ರೂಷೆ ಮಾಡುತ್ತಾ 12 ರಿಂದ 14 ಗಂಟೆಗಳ ಕಾಲ ಪಯಣಿಸಿ ಆಸ್ಪತ್ರೆ ಸೇರುವಷ್ಟರಲ್ಲಿ ಹೆಣ ಬೀಳುತ್ತದೆ ಎಂದು ಮಹಿಳೆಯರು ನೊಂದು ನುಡಿದ್ದಾರೆ.
ಸೆಕ್ಸ್ ಪ್ರತಿಭಟನೆ ಇತಿಹಾಸ: ಕೊಲಂಬಿಯಾದಲ್ಲಿ ಸೆಕ್ಸ್ ಪ್ರತಿಭಟನೆಯ ದೊಡ್ಡ ಇತಿಹಾಸವೇ ಇದೆ. 1997ರಲ್ಲಿ ಶಾಂತಿ ಸ್ಥಾಪನೆಗಾಗಿ ಸೈನಿಕರ ಪತ್ನಿಯರು ಈ ರೀತಿ ಪ್ರತಿಭಟನೆ ಹಮ್ಮಿಕೊಂಡಿದ್ದರು. 2006 ರಲ್ಲಿ ಪೆರೈರಾ ಎಂಬಲ್ಲಿ ಗ್ಯಾಂಗ್ ಸ್ಟರ್ ಗಳ ಕಾಮದಾಹಕ್ಕೆ ಬಲಿಯಾಗುತ್ತಿದ್ದ ಮಹಿಳೆಯರ ರಕ್ಷಣೆಗಾಗಿ ಮತ್ತೆ ಸೆಕ್ಸ್ ಸ್ಟ್ರೈಕ್ ಆರಂಭವಾಯಿತು. ಯುದ್ಧಗಳನ್ನು ನಿಲ್ಲಿಸಲು ಕೂಡಾ ಮಹಿಳೆಯರು ಈ ರೀತಿ ಪ್ರತಿಭಟನೆ ಬಳಸಿ ಯಶಸ್ವಿಯಾದ ಉದಾಹರಣೆಗಳು ಇಲ್ಲಿವೆ. ಹೂಂ... ನಮ್ಮ ರಾಜ್ಯದಲ್ಲಿ ಈ ರೀತಿ ಪ್ರತಿಭಟನೆ ಎಂದಿಗೆ ಶುರುವಾಗುತ್ತೋ ಮನ್ಮಥನ ಅಪ್ಪನೇ ಬಲ್ಲ.












Click it and Unblock the Notifications