ಐಯ್ಯಯ್ಯೋ.. ಶುರುವಾಯ್ತು ಗುರೂ ಮತ್ತೊಂದು ಮಹಾಯುದ್ಧ!

ಭಾರತದ ಮಿತ್ರ ದೇಶಗಳ ನಡುವೆ ಯುದ್ಧ ಶುರುವಾಗಲು ಕೌಂಟ್‌ಡೌನ್ ಸ್ಟಾರ್ಟ್ ಆಗಿದ್ದು, ಇಸ್ರೇಲ್ & ಇರಾನ್ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಈ ಮೂಲಕ ಎಲ್ಲಾ ಅಂದುಕೊಂಡ ರೀತಿಯಲ್ಲೇ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಯ ಶುರುವಾಗಿದೆ. ಇದೇ ಹೊತ್ತಲ್ಲೇ, ಇಸ್ರೇಲ್ ನಡೆಸಬಹುದಾದ ದಾಳಿ ಎದುರಿಸಲು ಇರಾನ್ ಏನು ಮಾಡುತ್ತಿದೆ ಗೊತ್ತಾ? ಈಗ ಇರಾನ್ ಕೈಗೊಂಡಿರುವ ನಿರ್ಧಾರ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ಇರಾನ್ ಒಂದು ಅಣ್ವಸ್ತ್ರ ಹೊಂದಿರುವ ದೇಶವಾಗಿದೆ. ಪ್ರಪಂಚದಲ್ಲಿ ಕೆಲವೇ ಕೆಲವು ದೇಶ ಈ ರೀತಿ ಅಣ್ವಸ್ತ್ರ ಅಂದರೆ ನ್ಯೂಕ್ಲಿಯರ್ ವೆಪನ್ಸ್ ಹೊಂದಿವೆ. ಭಾರತ ಕೂಡ ಇದೇ ರೀತಿ, ಅಣ್ವಸ್ತ್ರ ಹೊಂದಿರುವ ದೇಶವಾಗಿದೆ. ಆದರೆ ಇಲ್ಲಿ ಅಣ್ವಸ್ತ್ರ ಹೊಂದಿರುವ ದೇಶ ಇರಾನ್, ಮತ್ತು ಪುಟಾಣಿ ದೇಶವಾದ ಇಸ್ರೇಲ್ ನಡುವೆ ದೊಡ್ಡ ಗಲಾಟೆ ಶುರುವಾಗಿರುವುದು ಭಯ ಹುಟ್ಟುಹಾಕಿದೆ. ಹೀಗಾಗಿ ಈಗ ಇರಾನ್ ಮಹತ್ವದ ಕ್ರಮ ಕೈಗೊಂಡಿದೆ. ಅದು ಏನೆಂದರೆ ತನ್ನ ಹಡಗುಗಳ ರಕ್ಷಣೆ ಮಾಡಲು ಮಹತ್ವದ ನಿರ್ಧಾರ ಜಾರಿಗೊಳಿಸಿದೆ ಇರಾನ್ ಸೇನೆ.

Israel And Iran Conflict Is Taking Much Critical Way

ಎಲ್ಲೆಲ್ಲೂ ಯುದ್ಧದ ಭಯ!

ಅಷ್ಟಕ್ಕೂ ಇತ್ತೀಚೆಗಷ್ಟೇ ಇರಾನ್ ತನ್ನ ಸೇನಾ ಪಡೆಗಳ ಮೂಲಕ ಇಸ್ರೇಲ್ ಹಡಗು ವಶಕ್ಕೆ ಪಡೆದಿತ್ತು. ಈ ಘಟನೆಯಲ್ಲಿ ಭಾರತೀಯರು ಕೂಡ ಸಿಲುಕಿದ್ದರು. ಆ ನಂತರ ಪರಿಸ್ಥಿತಿಯ ಹಿಡಿತಕ್ಕೆ ಸಿಲುಕಿ ಭೀಕರವಾಗಿ ದಾಳಿ ಮಾಡಿತ್ತು ಇರಾನ್. ಇಸ್ರೇಲ್ ವಿರುದ್ಧ ಒಟ್ಟು 200ಕ್ಕೂ ಹೆಚ್ಚು ಕ್ಷಿಪಣಿ ಹಾಗೂ ಮಿಸೈಲ್ ಮೂಲಕ ದಾಳಿ ಮಾಡಿತ್ತು ಇರಾನ್. ಆ ನಂತರ ಪರಿಸ್ಥಿತಿ ಕೈಮೀರಿ ಹೋಗಿದ್ದು, ಇಸ್ರೇಲ್ ಕೂಡ ಇರಾನ್ ವಿರುದ್ಧ ಭೀಕರ ದಾಳಿ ನಡೆಸಲು ಸಿದ್ಧತೆ ಆರಂಭ ಮಾಡಿದೆ. ಈ ಕಾರಣಕ್ಕೆ ಅಲರ್ಟ್ ಆಗಿರುವ ಇರಾನ್ ಈಗ ಏನು ಮಾಡಿದೆ ಗೊತ್ತಾ? ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ಮಾಡಿದೆ ಅಂತಾ ಆರೋಪಿಸಿ, ಇರಾನ್ ಸೇಡು ತೀರಿಸಿಕೊಂಡಿದ್ದರೂ ಈಗ ಭಯ ಕಾಡುತ್ತಿರುವುದು ಏಕೆ? ಮುಂದೆ ಓದಿ.

ಹಡಗುಗಳಿಗೆ ಭರ್ಜರಿ ಭದ್ರತೆ!

ಹೌದು, ಇರಾನ್‌ ನೌಕಾಪಡೆ ಕೆಂಪು ಸಮುದ್ರದಲ್ಲಿ ತನ್ನ ವಾಣಿಜ್ಯ ಹಡಗುಗಳಿಗೆ ಬೆಂಗಾವಲಾಗಿ ನಿಂತಿದೆ ಎಂದು ನೌಕಾಪಡೆಯ ಕಮಾಂಡರ್ ಶಹರಮ್ ಇರಾನಿ ಮಾಹಿತಿ ನೀಡಿದ್ದಾರೆ. ಹೀಗೆ, ಇಸ್ರೇಲ್ ಸೇನೆಯಿಂದ ಸಂಭಾವ್ಯ ದಾಳಿಯನ್ನು ಎದುರಿಸಲು ರಣತಂತ್ರ ರೂಪಿಸಿದೆ ಇರಾನ್. ಅದ್ರಲ್ಲೂ ಸಮುದ್ರ ಮಾರ್ಗದಲ್ಲಿ ಇಸ್ರೇಲ್ ಸೇನೆ ತನ್ನ ಹಡಗುಗಳ ಮೇಲೆ ದಾಳಿ ನಡೆಸುತ್ತೆ ಎಂಬ ಭಯ ಇರಾನ್‌ಗೆ ಕಾಡುತ್ತಿದೆ. ಯುದ್ಧ ಸಾಧ್ಯತೆ ಕುರಿತು ಚರ್ಚೆ ಮಾಡಲು ಇಸ್ರೇಲ್‌ನ ಪ್ರಮುಖರಿಂದ ಸಚಿವ ಸಂಪುಟ ಸಭೆಯೂ ನಡೆದಿದೆ. ಆ ನಂತರ ಕೆಂಪು ಸಮುದ್ರದಲ್ಲಿ ಇರಾನ್ ವಾಣಿಜ್ಯ ಹಡಗುಗಳಿಗೆ ಬೆಂಗಾವಲಾಗಿ ನಿಂತು, ತಮ್ಮ ಹಡಗು ರಕ್ಷಿಸಲು ಸಜ್ಜಾಗಿದೆ ಇರಾನ್‌ ಸೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+