• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದ ಎಲ್ಲಾ ತಾಯಂದಿರ ಆಶೀರ್ವಾದ ದರ್ಶನ್ ಮೇಲಿದೆ: ಬುಲೆಟ್ ಪ್ರಕಾಶ್‍

|

ಮೈಸೂರು, ಸೆಪ್ಟೆಂಬರ್ 26: ನಟ ಬುಲೆಟ್ ಪ್ರಕಾಶ್‍ ಇಂದು ಬುಧವಾರ ಬೆಳಗ್ಗೆ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬುಲೆಟ್ ಪ್ರಕಾಶ್‍ ದರ್ಶನ್ ಚೆನ್ನಾಗಿದ್ದಾರೆ. ಅವರಿಗೇನೂ ಆಗಿಲ್ಲ. ಕರ್ನಾಟಕದ ಎಲ್ಲಾ ತಾಯಂದಿರ ಆಶೀರ್ವಾದ ಅವರ ಮೇಲಿದೆ. ನಿನ್ನೆಯಷ್ಟೇ ಶಿವಣ್ಣ ಕೂಡ ದರ್ಶನ್ ಆರೋಗ್ಯ ವಿಚಾರಿಸಿ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ನಡೆಯುತ್ತಿದೆ. ಎಲ್ಲರು ಒಟ್ಟಾಗಿ ಇದ್ದೀವಿ, ಮುಂದೆಯೂ ಇರುತ್ತೀವಿ ಎಂದರು.

ಚಾಲೆಂಜಿಂಗ್ ಸ್ಟಾರ್ ಕಾರು ಅಪಘಾತ ಪ್ರಕರಣ:ಕಾರಿನಲ್ಲಿದ್ದವರು ನಾಲ್ವರಲ್ಲ!

ಇತ್ತ ಸ್ಯಾಂಡಲ್ ವುಡ್ ದಾಸ ದರ್ಶನ್ ಅವರಿಗೆ ಇಂದು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಗಳಿವೆ. ಅಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಟಾಲಿವುಡ್ ನಿಂದಲೂ ಹಾರೈಕೆ

ದರ್ಶನ್ ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದರ್ಶನ್ ಗುಣಮುಖವಾಗುವಂತೆ ಚಂದನವನದ ನಟರಷ್ಟೇ ಅಲ್ಲ, ಟಾಲಿವುಡ್ ನಿಂದಲೂ ಹಾರೈಕೆಯ ಮಹಾಪೂರ ಹರಿದು ಬರುತ್ತಿದೆ.

ದರ್ಶನ್ ಗನ್ ಮ್ಯಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ತಮಿಳುನಾಡಿನ ರಾಜಶೇಖರ್, ನಟ ದರ್ಶನ್ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿ, ನಟ ದರ್ಶನ್ ಆದಷ್ಟು ಬೇಗ ಗುಣಮುಖರಾಗಲಿ. ಬೇಗ ಆರೋಗ್ಯವಂತರಾಗಿ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿ ಎಂದು ಶುಭ ಹಾರೈಸಿದ್ದಾರೆ.

ಕಾರು ಅಪಘಾತ ಪ್ರಕರಣ: ಕೇಸ್ ನಿಂದ ಬಚಾವ್ ಆಗಲು ಮುಂದಾದ್ರಾ ದರ್ಶನ್ ?

ರಾಜಶೇಖರ್ ತಮಿಳು ನಟ ವಿಜಯಕಾಂತ್ ಅವರ ಅಭಿಮಾನಿಯಾಗಿದ್ದು, ಡಿಎಂಡಿಕೆ ಪಾರ್ಟಿಯ ಮುಖಂಡ. ವಿಜಯಕಾಂತ್ ಜತೆ ನಟ ದರ್ಶನ್ ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದು, ಅಲ್ಲಿನ ಚಿತ್ರಪ್ರೇಮಿಗಳಿಗೂ ದರ್ಶನ್ ಚಿರಪರಿಚಿತ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

English summary
Actor Bullet Prakash met Darshan today at the Columbia Hospital in Mysore and asked actor Darshan's health. After that he talked with media, Darshan is fine.Nothing happened to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X