Konkan Railway: ಬೆಂಗಳೂರು-ಕಾರವಾರ ಸೇರಿ ವಿವಿಧ ರೈಲುಗಳ ಪರಿಷ್ಕೃತ ಮುಂಗಾರು ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮುಂಗಾರು ಮಳೆಗಾಲ ಆರಂಭವಾಗಲಿದೆ. ಪಶ್ಚಿಮ ಘಟ್ಟಗಳು ಸೇರಿದಂತೆ ಕರಾವಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತದೆ. ಈ ಕಾರಣದಿಂದ ಕೊಂಕಣ ರೈಲು ಮಾರ್ಗದಲ್ಲಿ ಚಲಿಸುವ ರೈಲುಗಳ ಮುಂಗಾರು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ವೇಳಾಪಟ್ಟಿಯು ಇದೇ ಜೂನ್ ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಂಕಣ ರೈಲು ಮಾರ್ಗದಲ್ಲಿ ಮುಂಗಾರು ಅವಧಿಯಲ್ಲಿ ರೈಲುಗಳ ಸುರಕ್ಷಿತ ಕಾರ್ಯಾಚರಣೆ ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಸಂಬಂಧ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಜೂನ್ 15 ರಿಂದ 20ರವರೆಗೆ ನೂತನ ವೇಳಾಪಟ್ಟಿ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಿದೆ.

Konkan Railway

ಈ ಮಾರ್ಗದಲ್ಲಿ ಜೂನ್ 15 ರಂದು ಅಥವಾ ಈ ದಿನಾಂಕದ ನಂತರ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಅನ್ವಯಿಸುವಂತೆ ಪರಿಷ್ಕೃತ ವೇಳಾಪಟ್ಟಿ ಬದಲಾಯಿಸಲಾಗಿದೆ. ಮುಂಗಾರು ಅವಧಿಯಲ್ಲಿ ಕೊಂಕಣ ರೈಲ್ವೆ ವಿಭಾಗದಲ್ಲಿ ವಿಧಿಸಲಾಗುವ ವೇಗದ ನಿರ್ಬಂಧಗಳಿಗೆ ಅನುಗುಣವಾಗಿ, ಸುರಕ್ಷಿತ ಪ್ರಯಾಣಕ್ಕಾಗಿ ವಿವಿಧ ನಿಲ್ದಾಣಗಳಲ್ಲಿ ರೈಲುಗಳ ಸಮಯವನ್ನು ಬದಲಾಯಿಸುವುದು ವಾಡಿಕೆ. ಅದು ಈ ವರ್ಷವು ಮುಂದುವರಿದಿದೆ. ಈ ಪರಿಷ್ಕೃತ ವೇಳಾಪಟ್ಟಿ ಎಷ್ಟು ರೈಲುಗಳಿಗೆ ಅನ್ವಯಿಸುತ್ತದೆ, ಆ ರೈಲುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

Karnataka Rains: ಹವಾಮಾನ ವೈಪರೀತ್ಯ, ಉತ್ತರ ಕರ್ನಾಟಕಕ್ಕೆ ಮುಂದಿನ 5ದಿನ ಭಾರೀ ಮಳೆ: ಐಎಂಡಿ
Karnataka Rains: ಹವಾಮಾನ ವೈಪರೀತ್ಯ, ಉತ್ತರ ಕರ್ನಾಟಕಕ್ಕೆ ಮುಂದಿನ 5ದಿನ ಭಾರೀ ಮಳೆ: ಐಎಂಡಿ

ರೈಲುಗಳ ಪಟ್ಟಿ ಇಲ್ಲಿದೆ

* ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ರೈಲು (16595/16596)

* ಎಸ್ಎಂವಿಟಿ ಬೆಂಗಳೂರು-ಮುರಡೇಶ್ವರ-ಎಸ್ಎಂವಿಟಿ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (16585/16586)

* ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು (16515/16516)

* ವಾಸ್ಕೋ ಡ ಗ್ಲಾಮಾ-ಪಾಟ್ನಾ-ವಾಸ್ಕೋ ಡ ಗ್ಲಾಮಾ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12741/12742)

* ಪುಣೆ-ಎರ್ನಾಕುಲಂ-ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (11097/11098)

ಈ ಮೇಲಿನ ರೈಲುಗಳು ಹೊಸ ವೇಳಾಪಟ್ಟಿಯಂತೆ ಕಾರ್ಯಾಚರಣೆ ನಡೆಸಲಿವೆ. ಈ ಮಾರ್ಗದ ಪ್ರಯಾಣಿಕರು ಗಮನಿಸಬೇಕು, ಸರಿಹೊಂದುವಂತೆ ಪ್ರಯಾಣವನ್ನು ಪ್ಲ್ಯಾನ್ ಮಾಡಿಕೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲು ಸಮಯ ಬದಲು

ರಾಜಧಾನಿ ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲು (12864) ಸಂಚಾರ ಸಮಯ ಬದಲಾವಣೆ ಮಾಡಲಾಗಿದೆ. ಜೂನ್ 3ರಿಂದ ಈ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 11.45ಗಂಟೆಗೆ ಹೊರಡಲಿದೆ. ಈ ಮೊದಲು ಬೆಳಗ್ಗೆ 10.40ಕ್ಕೆ ಸಂಚಾರ ಆರಂಭಿಸುತ್ತಿತ್ತು. ಪ್ರಯಾಣಿಕರು ಸದರಿ ಬದಲಾವಣೆ ನೋಡಿಕೊಂಡು ಸಂಚಾರ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+