ಕೊಲಂಬಿಯಾದಲ್ಲಿ ಭೂಕುಸಿತಕ್ಕೆ 250ಕ್ಕೂ ಹೆಚ್ಚು ಮಂದಿ ಬಲಿ
ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸುಮಾರು 400 ಜನ ಗಾಯಗೊಂಡಿದ್ದಾರೆ
ಬೆಂಗಳೂರು, ಏಪ್ರಿಲ್ 02: ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಭೀಕರ ಭೂಕುಸಿತ ಉಂಟಾಗಿದ್ದು, 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದು ಸುಮಾರು 400 ಜನ ಗಾಯಗೊಂಡಿದ್ದಾರೆ. 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಾರು ಮಂದಿ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ಭೀಕರ ನೈಸರ್ಗಿಕ ವಿಕೋಪದಲ್ಲಿ ಅನೇಕ ಮನೆಗಳು ನಾಶವಾಗಿವೆ, ಪುಟುಮಯೋ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ದಿಢೀರ್ ಪ್ರವಾಹಕ್ಕೆ ಮನೆಗಳು, ಸೇತುವೆಗಳು, ವಾಹನಗಳು ಮತ್ತು ಮರಗಳು ಕೊಚ್ಚಿಕೊಂಡು ಹೋಗಿವೆ.

ರಾಜ್ಯದ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಕ್ಕೂ ಅಡಚಣೆ ಉಂಟಾಗಿದೆ ಎಂದು ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಕಾರ್ಲೋಸ್ ಇವಾನ್ ಮಾಕ್ರ್ವೆಜ್ ತಿಳಿಸಿದ್ದಾರೆ.

ಅಧ್ಯಕ್ಷ ಯುವಾನ್ ಮ್ಯಾನ್ಯುಯಲ್ ಸಾಂಟೋಸ್ ಅವರು ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದಾರೆ. ಪೆಟು ಹಾಗೂ ಈಕ್ವಡಾರೆ ಜತೆಗೆ ಗಡಿಯನ್ನು ಹಂಚಿಕೊಂಡಿರುವ ಅಮೆಜಾನ್ ಜಲಾನಯನ ಪ್ರದೇಶ ಪುಟುಮಯೋ ರಾಜ್ಯ ಕೆಸರುಮಯವಾಗಿದೆ.
Garantizamos atención médica en Mocoa. @FuerzaAereaCol trasladó 19 pacientes a Neiva, 20 serán evacuados en próximas horas #TodosConMocoa pic.twitter.com/6jxzEXOSCp
— Juan Manuel Santos (@JuanManSantos) April 2, 2017












Click it and Unblock the Notifications