ಗರ್ಭಿಣಿ ವೇಷಧಾರಿ ಐನಾತಿ ಸ್ಮಗ್ಲರ್ ಸೆರೆ
ಕೊಲಂಬಿಯಾ, ಸೆ.12: ಸ್ಮಗ್ಲಿಂಗ್ ಮಾಡುವವರು ಬಗೆ ಬಗೆ ವೇಷ ಧರಿಸಿ, ಮಾದಕ ವಸ್ತುಗಳನ್ನು ದೇಶದಿಂದ ದೇಶಕ್ಕೆ ಸಾಗಿಸುವುದು ಸಿಕ್ಕಿಬೀಳುವುದು ಮಾಮೂಲಿ. ಆದರೆ, ಇಲ್ಲೊಬ್ಬಳು ಐನಾತಿ ಕಳ್ಳಿ ತಾನು ಗರ್ಭಿಣಿ ಎಂದು ಹೇಳಿ ಹುಸಿ ಹೊಟ್ಟೆಯನ್ನು ತೋರಿಸಿ ಚಳ್ಳೆ ಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ.
ಐನಾತಿ ಐಡಿಯಾ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಅಚ್ಚರಿಯ ಸಂಗತಿ ಬಯಲಿಗೆ ಬಂದಿದೆ. ಬಟ್ಟೆಗಳಲ್ಲಿ ವಸ್ತುಗಳನ್ನು ಅಡಗಿಸಿಕೊಂಡು ಬರುವುದು ಸಾಮಾನ್ಯವಾಗಿತ್ತು. ಆದರೆ, ಈಗ ಆಧುನಿಕತೆ, ವಿಜ್ಞಾನ ಬೆಳೆದಂತೆ ದೇಹದೊಳಗೂ ಅಡಗಿಸಿಟ್ಟುಕೊಂಡು ಬರುವುದು ಇತ್ತೀಚೆಗೆ ಹೆಚ್ಚಾಗಿದೆ.
ಕೊಲಂಬಿಯಾದಲ್ಲಿ 28 ವರ್ಷದ ಯುವತಿ ತಬಿತಾ ಲಿಯಾ ರಿಚಿ ಎಂಬುವಳು ತನ್ನ ದೇಹದಲ್ಲಿ ರಾಸಾಯನಿಕ ಮಾದರಿಯ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದಾಳೆ ಎಂಬ ಸುದ್ದಿ ಬಂದ ಮೇಲೆ ಕಸ್ಟಮ್ ಅಧಿಕಾರಿಗಳು ಎಲ್ಲರನ್ನು ತಪಾಸಣೆಗೆ ಒಳಪಡಿಸಿದರು.
ಕೊಲಂಬಿಯಾದ ಬೋಗೋಟಾ ವಿಮಾನ ನಿಲ್ದಾಣದಲ್ಲಿ ನಡೆದ ಈ ತಪಾಸಣೆ ವೇಳೆ ಸುಳ್ಳು ಸುಳ್ಳೆ ಗರ್ಭಿಣಿಯಂತೆ ನಾಟಕವಾಡಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಇದರ ಹಿಂದೆ ದೊಡ್ಡ ಮಾದಕವಸ್ತು ಕಳ್ಳಸಾಗಣಿಕೆ ಜಾಲ ಇರುವುದು ಪತ್ತೆಯಾಗಿದೆ.
ಸುಮಾರು ಏಳು ತಿಂಗಳ ತುಂಬು ಗರ್ಭಿಣಿಯೊಬ್ಬಳು ಇಲ್ಲಿನ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಆಕೆಗೆ ನೆರವಾಗಿ ಚೆಕ್ ಇನ್ ಆಗುವವರೆಗೂ ಕರೆತಂದಿದ್ದರು. ಅದನ್ನು ನೋಡಿದವರು ಛೇ ಕಸ್ಟಮ್ಸ್ ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ ಎಂದು ಗೊಣಗಾಡಿದರು. ಆದರೆ, ಕೆಲ ಹೊತ್ತಿನ ನಂತರ ತುಂಬು ಹೊಟ್ಟೆ ಕರಗಿಸಿಕೊಂಡು ಬಂದು ಯುವತಿ ನೋಡಿದ ಜನ ಬೆರಗಾದರು.. ಐನಾತಿ ಕಳ್ಳಿ ಚಿತ್ರಗಳನ್ನು ಕೊಲಂಬಿಯಾ ಪೊಲೀಸರು ಬಿಡುಗಡೆ ಮಾಡಿದ್ದಾರೆ.. ನೀವೇ ನೋಡಿ

2 ಕೆಜಿ ಕೊಕೆನ್ ವಶ
ಸ್ಮಗ್ಲಿಂಗ್ ದಂಧೆಗಿಳಿದಿದ್ದ ಈ ಮಹಿಳೆ ಸುಮಾರು 2 ಕೆಜಿ ಕೊಕೇನ್(ಏನಿದು ಇಲ್ಲಿ ಓದಿ) ಅನ್ನು ಟೊರೆಂಟೋಗೆ ಸಾಗಿಸುತ್ತಿದ್ದಳು.
ಈ ವಿಮಾನ ನಿಲ್ದಾಣದಿಂದ ಸಾಕಷ್ಟು ಕಳ್ಳಸಾಗಣಿಕೆ ಮೂಲಕ ಮಾದಕ ವಸ್ತುಗಳು ಅಮೆರಿಕ, ಕೆನಡಾ ಸೇರಿದಂತೆ ಐರೋಪ್ಯ ರಾಷ್ಟ್ರಗಳಿಗೆ ಸಾಗಣೆಯಾಗುತ್ತವೆ ಎಂಬ ಕುಖ್ಯಾತಿ ಕೂಡ ಇದ್ದು, ಅದರಂತೆ ಭದ್ರತೆ ಕೂಡ ಹೆಚ್ಚಿರುತ್ತದೆ. ಪರಿಸ್ಥಿತಿ ಹೀಗಿದ್ದರೂ ಮಹಿಳೆ ಧೈರ್ಯ ಮೆಚ್ಚಬೇಕು
ಹೊಟ್ಟೆ ಪರಿಶೀಲನೆ
28ರ ಹರೆಯದ ತರುಣಿ ಉಸ್ಸೆನ್ನುತ್ತಾ ಬಂದ ಆಕೆಯ ಕೈ ಹಿಡಿದು ಕರೆದೊಯ್ಯುವಾಗ ಸಿಬ್ಬಂದಿಯೊಬ್ಬನಿಗೆ ಏನೋ ಬಿಸಿಯಾದ ಅನುಭವವಾಯಿತು. ತುಂಬು ಗರ್ಭಿಣಿಯಲ್ಲವೆ ಎಂದುಕೊಂಡು ಟರ್ಮಿನಲ್ ಗೆ ಕರೆತಂದರು.
ಅಲ್ಲಿ ಮತ್ತೊಬ್ಬ ವಿಮಾನ ನಿಲ್ದಾಣ ಸಿಬ್ಬಂದಿಗೆ ಆಕೆಯನ್ನು ಕರೆದೊಯ್ಯುವಾಗ ತಣ್ಣನೆಯ ಅನುಭವವಾಯಿತಂತೆ. ಇದೇನಿದು ಎಂದು ಅಚ್ಚರಿ ವ್ಯಕ್ತಪಡಿಸಿ ತನ್ನ ಹಿರಿಯ ಅಧಿಕಾರಿಗಳಿಗೆ ಈ ಮಹಿಳೆ ಬಗ್ಗೆ ಅನುಮಾನ ಇದೆ ಎಂದು ತನ್ನ ವಾಕಿಟಾಕಿ ಮೂಲಕ ಸಂದೇಶ ರವಾನಿಸಿದ್ದಾನೆ.
ಸೊಂಟದ ಬಳಿ ಕ್ಲಿಪ್
ಅಧಿಕಾರಿಗಳು ಹೊಟ್ಟೆಯನ್ನು ಪರಿಶೀಲಿಸಲು ಸೊಂಟದ ಬಳಿ ಕ್ಲಿಪ್ ಕಾಣಿಸಿಕೊಂಡಿತಂತೆ.
ಅರೇ! ಏನಿದು ಎಂದು ಮಹಿಳೆಯನ್ನು ಕೇಳಿದರೆ, ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾಳೆ. ಆದರೆ, ಹೊಟ್ಟೆಯನ್ನು ಅದುಮಿ ನೋಡಿದಾಗಲೂ ಆ ಅಧಿಕಾರಿಗಳಿಗೆ ಇದು ಕೃತಕ ಎಂದು ತಿಳಿಯಲೇ ಇಲ್ಲವಂತೆ.ಕೊನೆಗೆ ಆಕೆ ವಸ್ತ್ರ ಸರಿಮಾಡಿಕೊಳ್ಳಲು ಹೋದಾಗ ಸರ್ರನೆ ಆ ಕೃತಕ ಹೊಟ್ಟೆಯೇ ಕಳಚಿ ಬಿತ್ತಂತೆ. ಹೊಟ್ಟೆ ಕೈಗೆ ಬಂದಿದ್ದು ನೋಡಿ ಅಧಿಕಾರಿ ದಂಗಾಗಿ ಹೋದರಂತೆ
ಈಕೆ ಸಾಮಾಜಿಕ ಕಾರ್ಯಕರ್ತೆ
ಈ ಮಾದಕ ವಸ್ತುವಿನ ಬೆಲೆ ಮಾರುಕಟ್ಟೆಯಲ್ಲಿ ಸುಮಾರು 60 ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ. ಕಳ್ಳಸಾಗಣೆ ಅಪರಾಧದ ಹಿನ್ನೆಲೆಯಲ್ಲಿ ಈಕೆ ಈಗ 5 ರಿಂದ 8 ವರ್ಷ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
ಇತ್ತೀಚಿನ ವರ್ಷಗಳಲ್ಲಿ ಸುಮಾರು 874 ವಿದೇಶಿಯರು ಮಾದಕವಸ್ತು ಅಥವಾ ಇತರೆ ವಸ್ತುಗಳ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದು ಜೈಲು ಸೇರಿದ್ದಾರಂತೆ.
ತಪಾಸಣೆ ವಿಡಿಯೋ
ಬೋಗೋಟಾ ವಿಮಾನ ನಿಲ್ದಾಣದಲ್ಲಿ 28ರ ಹರೆಯದ ತರುಣಿ ತಬಿತಾ ಲಿಯಾ ರಿಚಿ ತಪಾಸಣೆ ವಿಡಿಯೋ












Click it and Unblock the Notifications