Helicopters Crash: ಸೇನೆಯ ಎರಡು ಹೆಲುಕಾಪ್ಟರ್‌ ಡಿಕ್ಕಿ: 10 ಜನರ ಸಾವು

ಮಲೇಷ್ಯಾದ ಲುಮುಟ್ ನಗರದಲ್ಲಿ ಕಸರತ್ತು ನಡೆಸುತ್ತಿದ್ದಾಗ ಸೇನೆಯ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ.

ಸೆನೆಯ ಹೆಲೆಕಾಪ್ಟರ್‌ ಪರಸ್ಪರ ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ, ಅಪಘಾತದಲ್ಲಿ ಯಾರೊಬ್ಬರು ಬದುಕಿರುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ತಿಳಿಸಿದ್ದಾರೆ. ಎರಡೂ ಹೆಲಿಕಾಪ್ಟರ್‌ಗಳಲ್ಲಿ ಒಟ್ಟು 10 ನೌಕಾಪಡೆ ಸಿಬ್ಬಂದಿಗಳಿದ್ದು, ಅವರಲ್ಲಿ ಯಾರೂ ಬದುಕುಳಿದಿಲ್ಲ.

Two Military Helicopters Collide Mid-Air in Malaysia Resulting in 10 Fatalities

ಎರಡೂ ಹೆಲಿಕಾಪ್ಟರ್‌ಗಳು ಟೇಕ್ ಆಫ್ ಆಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಎರಡರ ರೋಟರ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಇದಾದ ನಂತರ, ಆ ಎರಡೂ ಹೆಲಿಕಾಪ್ಟರ್‌ಗಳು ತುಂಡುಗಳಾಗಿ ನೆಲದ ಮೇಲೆ ಬೀಳುತ್ತಿರುವುದು ಕಂಡು ಬಂದಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ಗಳು ಆಗಸ್ಟಾ ವೆಸ್ಟ್‌ ಲ್ಯಾಂಡ್ AW139 ಮತ್ತು ಯುರೋಕಾಪ್ಟರ್ ಫೆನೆಕ್ ಎಂದು ತಿಳಿದು ಬಂದಿವೆ.

ಎರಡೂ ಹೆಲಿಕಾಪ್ಟರ್‌ಗಳು ಮುಂದಿನ ತಿಂಗಳು ನಡೆಯಲಿರುವ ನೌಕಾಪಡೆಯ ಫ್ಲೀಟ್ ಓಪನ್ ಡೇ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಭ್ಯಾಸ ಮಾಡುತ್ತಿದ್ದವು. ಇದೇ ವೇಳೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದವು. ಮಲೇಷಿಯಾದ ಸಶಸ್ತ್ರ ಪಡೆಗಳ ಹೆಲಿಕಾಪ್ಟರ್‌ಗಳು ಇಂದು ಬೆಳಿಗ್ಗೆ ಪೆರಾಕ್‌ನ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ ನೆಲೆಯಲ್ಲಿ ವ್ಯಾಯಾಮ ನಡೆಸುತ್ತಿದ್ದಾಗ ಅಪಘಾತವಾಗಿದೆ ಎಂದು ಮಾಧ್ಯಮ ವರದಿಗಳ ಪ್ರಕಾರ ತಿಳಿದು ಬಂದಿದೆ.

ಅಪಘಾತದ ನಂತರ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ತಮ್ಮ ಸಾಮಾಜಿಕ ತಾಣದಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಹೋರಾಡುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಜಪಾನ್‌ನಲ್ಲೂ ನಡೆದಿತ್ತು ಅಪಘಾತ

ಶನಿವಾರ ಜಪಾನ್ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಟೋಕಿಯೊದ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಅಪಘಾತಕ್ಕೀಡಾಗಿದ್ದವು. ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಶನಿವಾರ ರಾತ್ರಿ ತರಬೇತಿ ವೇಳೆ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿದ್ದವು ಎಂದು ಜಪಾನ್‌ನ ರಕ್ಷಣಾ ಸಚಿವಾಲಯ ತಿಳಿಸಿತ್ತು. ಎರಡೂ ಹೆಲಿಕಾಪ್ಟರ್‌ಗಳಲ್ಲಿ 8 ಸಿಬ್ಬಂದಿ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+