ಅಸಲಿ ಆಟ ಈಗ ಶುರು: ಬೆಂಕಿ ಹಚ್ಚಿದ್ದು ಯಾರು ಗುರು?

ಇಸ್ರೇಲ್ & ಇರಾನ್ ಯುದ್ಧ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆಯುತ್ತಿದೆ. ಅಧಿಕೃತವಾಗಿ ಯುದ್ಧ ಘೋಷಣೆ ಆಗದೇ ಇದ್ದರೂ, ಇಬ್ಬರ ನಡುವಿನ ಫೈಟ್ ಮಾತ್ರ ಮತ್ತೊಂದು ಘೋರ ಕಿತ್ತಾಟ ಶುರುವಾಗುವ ಮುನ್ಸೂಚನೆ ನೀಡುತ್ತಿದೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷ ಪುಟಿನ್ & ಭಾರತ ಮಾತ್ರ ಹೊಸ ಗೇಮ್ ಪ್ಲಾನ್ ರೆಡಿ ಮಾಡಿ, ರಣತಂತ್ರ ರೂಪಿಸಿದಂತೆ ಕಾಣುತ್ತಿದೆ.

ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿಯ ಮೇಲೆ ಏಪ್ರಿಲ್ 1ಕ್ಕೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್‌ನ ದಾಳಿಯ ವೇಳೆ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಡಮಾಸ್ಕಸ್ ದಾಳಿಗೆ ನೇರವಾಗಿ ಪ್ರತಿಕ್ರಿಯೆ ನೀಡಲು ಇರಾನ್ ಸಿದ್ಧತೆ ಆರಂಭಿಸಿದೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿದೆ. ಇರಾನ್ ಮೊದಲು 200ಕ್ಕೂ ಹೆಚ್ಚು ಮಿಸೈಲ್ & ಡ್ರೋನ್ ಮೂಲಕ ದಾಳಿ ಆರಂಭ ಮಾಡಿತ್ತು. ಈ ಘಟನೆ ಬೆನ್ನಲ್ಲೇ ಜಾಗತಿಕವಾಗಿ ಸಂಚಲನ ಸೃಷ್ಟಿಯಾಗಿದೆ, ಆದರೆ ಭಾರತ ಮಾತ್ರ ಯುದ್ಧದ ಬಗ್ಗೆ ಸ್ಪಷ್ಟ ನಡೆ ಅನುಸರಿಸಿದೆ. ಇದೇ ಭಾರತಕ್ಕೆ ಸಹಾಯ ಆಗುತ್ತಿದೆ.

Iran And Israel War May Creates Storm In International Politics

ಭಾರತಕ್ಕೆ ಲಾಭ ಅಥವಾ ನಷ್ಟ?

ಪ್ರಪಂಚಕ್ಕೆ ಭಾರತವೇ ಮುಖ್ಯ, ಭಾರತವೇ ಮೊದಲು. ಯಾಕಂದ್ರೆ ಭಾರತದ ಜೊತೆ ಇಡೀ ಜಗತ್ತಿನ ಹಲವು ದೇಶಗಳು ವ್ಯಾಪಾರ & ವ್ಯವಹಾರ ಹೊಂದಿವೆ. ಹೀಗಿದ್ದಾಗ ಕೂಡ ಭಾರತ ಯುದ್ಧಗಳಿಂದ ದೂರವೇ ಉಳಿದಿದೆ. ಅದ್ರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಶುರುವಾದಾಗ ಕೂಡ ಭಾರತ ಸ್ಪಷ್ಟ ನಡೆ ಮುಂದಿಟ್ಟು, ರಷ್ಯಾದ ಸ್ನೇಹ ಉಳಿಸಿಕೊಳ್ಳುವ ಜೊತೆ ಉಕ್ರೇನ್ ಸಂಬಂಧವನ್ನ ಹಾಳು ಮಾಡಿಕೊಳ್ಳದೆ ಭಾರತ ಸರಿಯಾದ ಹೆಜ್ಜೆ ಇಟ್ಟಿತ್ತು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧ ಶುರುವಾದಾಗ ಕೂಡ ಭಾರತ ಯುದ್ಧವನ್ನು ಬೆಂಬಲಿಸದೆ ಅತ್ಯುತ್ತಮ ಹೆಜ್ಜೆ ಇಟ್ಟಿದೆ. ಹೀಗಿದ್ದಾಗಲೇ ಇರಾನ್ & ಇಸ್ರೇಲ್ ಯುದ್ಧ ಕೂಡ ಶುರುವಾಗಿದೆ.

ಭಾರತ ತನ್ನ ತಟಸ್ಥ ನಡೆಯಿಂದ ಭರ್ಜರಿಯಾಗಿ ಅಭಿವೃದ್ಧಿ ಕಾಣುತ್ತಿದೆ, ಆ ಕಡೆ ಯಾವ ದೇಶದ ವಿರೋಧವನ್ನೂ ಕಟ್ಟಿಕೊಳ್ಳದೆ. ಮತ್ತೊಂದು ಕಡೆ ಯಾವುದೇ ದೇಶದ ಪರ ನಿಲ್ಲದೆ ತನ್ನ ಅಭಿವೃದ್ಧಿಯನ್ನ ಭಾರತ ತಾನು ನೋಡಿಕೊಳ್ಳುತ್ತಿದೆ. ಹೀಗಿದ್ದಾಗ ಇರಾನ್ & ಇಸ್ರೇಲ್ ಯುದ್ಧದಲ್ಲೂ ಸಂಚಲನ ಸೃಷ್ಟಿಯಾಗಿದೆ. ಭಾರತ ಈಗ ಇಸ್ರೇಲ್ ಜೊತೆಗೂ ಉತ್ತಮವಾಗಿ ಸಂಬಂಧ ಹೊಂದಿದೆ, ಹಾಗೇ ಇರಾನ್ ಜೊತೆಗೂ ಸ್ನೇಹ ಉಳಿಸಿಕೊಂಡಿದೆ. ಹೀಗಾಗಿ ಈಗ, ಅಕಸ್ಮಾತ್ ಇಸ್ರೇಲ್ VS ಇರಾನ್ ಯುದ್ಧ ಜೋರಾದರೆ ಭಾರತ ತಟಸ್ಥವಾಗಿ ಉಳಿದುಕೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಆದರೆ ರಷ್ಯಾ ಕಥೆ ಏನು?

ಅಸಲಿ ಆಟ ಈಗ ಶುರು!

ರಷ್ಯಾ ಅಧ್ಯಕ್ಷ ಪುಟಿನ್ ಅವರು ಇರಾನ್‌ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಇಸ್ರೇಲ್ ವಿರುದ್ಧದ ದಾಳಿಗೆ ಕೂಡ ಅಸ್ತ್ರಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ಸಂಚಲನ ಸೃಷ್ಟಿ ಮಾಡುವ ಅಂಶವೊಂದು ಬೆಳಕಿಗೆ ಬಂದಿದ್ದು, ಅದು ಏನಂದ್ರೆ ಉಕ್ರೇನ್ ವಿರುದ್ಧ ಹೋರಾಟ ನಡೆಸಲು ರಷ್ಯಾಗೆ ಇರಾನ್ ಸಹಾಯ ಮಾಡಿತ್ತು. ಇದೀಗ ಇಸ್ರೇಲ್‌ನ ವಿರುದ್ಧ ಹೋರಾಟ ನಡೆಸಲು ರಷ್ಯಾ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ, ಅಮೆರಿಕ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಬೇರೆಯದ್ದೇ ತಂತ್ರ ಹೂಡಿರುವ ರೀತಿ ತೋರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+