Gold building in Dubai: ದುಬೈನಲ್ಲಿ ಬಂಗಾರದ ಬಿಲ್ಡಿಂಗ್: ಒಣಗಿದ ಹೂವಿಗೆ ಭಾರೀ ಡಿಮ್ಯಾಂಡ್
ದುಬೈ ಅಂದರೆ ಸಾಕು ದುಬಾರಿ ದುನಿಯಾ ಕಣ್ಣು ಮುಂದೆ ಬರುತ್ತದೆ. ಯಾಕೆಂದರೆ ಇಲ್ಲಿ ಎಲ್ಲವೂ ದುಬಾರಿಯೇ. ಇಲ್ಲಿ ಕಸ ಗುಡಿಸುವ ಕಾರ್ಮಿಕರೂ ಕೂಡ ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುತ್ತಾರೆ. ಅಷ್ಟೇ ಕ್ಲೀನ್ ಆಂಡ್ ಗುಡ್ ಲುಕ್‌ನ ಪ್ರದೇಶ ಕೂಡ ಹೌದು. ಇಲ್ಲಿ ಹಲವಾರು ಆಕರ್ಷಿಣೀಯ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ದುಬೈನ ಬಂಗಾರದ ಬಿಲ್ಡಿಂಗ್ ಕೂಡ ಒಂದು. ಅಲ್ಲದೆ ದುಬೈನಲ್ಲಿರುವ ಮಾರುಕಟ್ಟೆಗಳಲ್ಲಿ ಒಣಗಿದ ಹೂವುಗಳಿಗೆ ಭಾರೀ ಬೇಡಿಕೆ ಇದೆ. ಈ ಎರಡು ವಿಷಯದ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಪಂಚದಲ್ಲೇ ಅತೀ ದೊಡ್ಡ ಫೋಟೋ ಫ್ರೇಮ್ ದುಬೈನಲ್ಲಿದೆ. ಈ ಫ್ರೇಮ್‌ನ ಔಟರ್ ಲೇಯರ್ ಅನ್ನು ಗೋಲ್ಡ್‌ನ್ ಪ್ಲೇಟ್ಸ್‌ನಿಂದ ಮಾಡಲಾಗಿದೆ. ಅದಕ್ಕಾಗಿ ಇದು ಪಳ ಪಳ ಹೊಳೆಯುತ್ತದೆ. ಈ ಬಿಲ್ಡಿಂಗ್‌ನಲ್ಲಿ ಒಟ್ಟು 160 ಫ್ಲೋರ್‌ಗಳು ಇವೆ. ಇದರ ಟಾಪ್ ಫ್ಲೋರ್ ಅನ್ನು ಗ್ಲಾಸ್ ವಾಕ್ ವೇಯಿಂದ ಡಿಸೈನ್ ಮಾಡಲಾಗಿದೆ.

ಇದರ ಅನುಭವ ಪಡೆಯಲೆಂದು ಇಲ್ಲಿಗೆ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಫ್ರೇಮ್‌ನ ಟಾಫ್ ಫ್ಲೋರ್‌ನಲ್ಲಿ ನಿಂತು ನೋಡಿದರೆ ಒಂದು ಕಡೆ ಹಳೆ ದುಬೈ ಮತ್ತೊಂದು ಕಡೆ ನ್ಯೂ ದುಬೈ ಕಾಣುತ್ತೆ. ಕಂಪ್ಲೀಟ್ 360 ಡಿಗ್ರಿ ವೀವ್ ಅನ್ನು ಇಲ್ಲಿ ಎಂಜಾಯ್ ಮಾಡಬಹುದು.
ಇದಕ್ಕೆ ಎಂಟ್ರಿ ಫೀಸ್ ದುಬೈ ಬೆಲೆ ಪ್ರಕಾರ 50 dirhams ಇದೆ. ಅಂದರೆ ಭಾರತದ ರೂಪಾಯಿಯಲ್ಲಿ 1,135 ಆಗುತ್ತದೆ. ಈ ಬಿಲ್ಡಿಂಗ್ ಕಟ್ಟಲು ನಾಲ್ಕು ವರ್ಷ ಸಮಯ ತೆಗೆದುಕೊಳ್ಳಲಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಈ ಬಿಲ್ಡಿಂಗ್ ಕಟ್ಟಲು ಕೆಲಸ ಮಾಡಿದ್ದಾರೆ. ನೀವೇನಾದ್ರೂ ಇಲ್ಲಿಗೆ ಹೋಗಬೇಕು ಅಂದುಕೊಂಡರೆ ಹಣ ಹೊಂದಿಸಿಕೊಂಡು ರೆಡಿಯಾಗಿ. ವಿಮಾನವನ್ನು ಮುಂಚಿತವಾಗಿ ಬುಕ್ ಮಾಡಿಕೊಳ್ಳಿ. ಮಾತ್ರವಲ್ಲದೆ ಸರಿಯಾಗಿ ಪ್ಲ್ಯಾನ್ ಮಾಡಿಕೊಂಡರೆ ಕಡಿಮೆ ದುಡ್ಡಲ್ಲಿ ದುಬೈ ನೋಡಿಕೊಂಡು ಬರಬಹುದು. ಇನ್ನೂ ದುಬೈನಲ್ಲಿ ಒಣಗಿದ ಹೂವಿಗೆ ಭಾರೀ ಡಿಮ್ಯಾಂಡ್ ಇದೆ. ಯಾಕೆ ಅನ್ನೋದನ್ನು ನೋಡೋಣ.

ದುಬೈನಲ್ಲಿ ಒಣಗಿದ ಹೂವಿಗೆ ಭಾರೀ ಡಿಮ್ಯಾಂಡ್
ನಮ್ಮ ಭಾರತ ದೇಶದಲ್ಲಿ ನಾವು ಒಣಗಿದ ಹೂವುಗಳನ್ನು ಕಸವೆಂದು ಬೀಸಾಡುತ್ತೇವೆ. ಆದರೆ ದುಬೈನಲ್ಲಿ ಹಾಗಲ್ಲ. ಅಲ್ಲಿ ಒಣಗಿದ ಹೂವುಗಳಿಗೆ ಭಾರೀ ಬೇಡಿಕೆ ಇದೆ. ಭಾರತದಲ್ಲಿ ಹೂವಿನ ಮಾರುಕಟ್ಟೆಗಳು ಇರುವಂತೆ ದುಬೈನಲ್ಲಿ ಒಣಗಿದ ಹೂವುಗಳ ಮಾರುಕಟ್ಟೆಗಳಿವೆ. ಆ ಬಗ್ಗೆ ಕೊಂಚ ತಿಳಿಯೋಣ.
ದುಬೈನಲ್ಲಿ ಮೀನಾ ಬಜಾರ್ ಎಂಬ ಸ್ಥಳವಿದೆ. ಇಲ್ಲಿನ ಸ್ಪೈಸ್ ಸೂಪ್‌ಗೆ ಹೋದರೆ ಅಲ್ಲಿ ಒಣಗಿದ ಹೂವುಗಳನ್ನು ಮಾರಾಟ ಮಾಡುತ್ತಾರೆ. ಈ ಒಣಗಿದ ಹೂವುಗಳಲ್ಲಿ ಹೆಚ್ಚಿನವು ಗುಲಾಬಿ ಹೂವುಗಳಾಗಿವೆ. ಅಷ್ಟಕ್ಕೂ ಇಲ್ಲಿ ಒಣಗಿದ ಹೂವುಗಳಿಗೆ ಯಾಕೆ ಬೇಡಿಕೆ ಇದೆ ಗೊತ್ತಾ? ಅದನ್ನು ಹೇಳ್ತೀವಿ ಕೇಳಿ.

ಒಣಗಿದ ಹೂವುಗಳನ್ನು ಇಲ್ಲಿ ಟೀ ಮಾಡಲು, ರೋಸ್ ವಾಟರ್, ಗುಲ್ಕನ್ ಗೂ ಯೂಸ್ ಮಾಡಲಾಗುತ್ತದೆ. ಮುಖ್ಯವಾಗಿ ಬೇಕರಿ ತಿಂಡಿಗಳಿಗೆ ಬಳಕೆ ಮಾಡುತ್ತಾರೆ. ಪೇಸ್ಟ್ರಿ ಹಾಗೂ ಕುಕ್ಕೀಸ್ಗಳನ್ನು ಡೆಕೊರೇಟ್ ಮಾಡಲು ಬಳಸಲಾಗುತ್ತದೆ. ಬೇಕರಿಗಳಲ್ಲಿ ಇನ್‌ಗ್ರೀಡಿಯಂಟ್ ಆಗಿ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲದೆ ಗ್ಲಾಸ್ ಬಾಟಲ್ ಅಲ್ಲಿ ಶೋಗಾಗಿ ಕೂಡ ಇಡಲಾಗುತ್ತದೆ. ದುಬೈನಲ್ಲಿ ಈ ಒಣಗಿದ ಹೂವುಗಳ ಒಂದು ಕೇಜಿ ಬೆಲೆ 560 ರೂಪಾಯಿ ಇದೆ.

ಒಟ್ಟಿನಲ್ಲಿ ದುಬೈ ಒಂದು ಸುಂದರವಾದ ದೇಶವಾಗಿದ್ದು ಇಲ್ಲಿ ಬಹುತೇಕ ಅದ್ಬುತ ಅನುಭವ ನೀಡುವ ಪ್ರೇಕ್ಷಣೀಯ ಸ್ಥಳಗಳು ಇವೆ. ಜೊತೆಗೆ ಸಾಕಷ್ಟು ತಿಳಿಯಬೇಕಾದ ಅಚ್ಚರಿ ಮೂಡಿಸುವ ವಿಷಯಗಳು ಇವೆ.












Click it and Unblock the Notifications