ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಅಗತ್ಯಗಳನ್ನು ಪೂರೈಸಬಲ್ಲ ತ್ಯಾಜ್ಯ- ಬಾಳೆ ದಿಂಡು

By ಪರಶುರಾಮ. ಮಾ. ಪಾಟೀಲ
|
Google Oneindia Kannada News

ಬಾಳೆಯು ಭಾರತದಲ್ಲಿಯೇ ಹೆಚ್ಚಾಗಿ ಉತ್ಪಾದಿಸುವ ಮತ್ತು ಸೇವಿಸುವ ಹಣ್ಣಿನ ಬೆಳೆಯಾಗಿದ್ದು, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತುಂಬಾ ಮಹತ್ವದ ಪಾತ್ರವಹಿಸುವುದಲ್ಲದೆ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಹಣೆದುಕೊಂಡಿದೆ. ಆದ್ದರಿಂದ ಇದನ್ನು ಸಾಮಾನ್ಯ ಮನುಷ್ಯರ ಹಣ್ಣು ಎಂದು ಕರೆಯಲಾಗುತ್ತದೆ.

ಜಾಗತಿಕವಾಗಿ ಬಾಳೆಯು ಆಹಾರ ಬೆಳೆಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ವಿಶ್ವದಾದ್ಯಂತ 150 ದೇಶಗಳಲ್ಲಿ ಪ್ರತಿ ವರ್ಷ 105 ಮಿಲಿಯನ್ ಟನ್ ಬಾಳೆ ಹಣ್ಣನ್ನು ಉತ್ಪಾದಿಸಲಾಗುತ್ತಿದ್ದು ಅದರಲ್ಲಿ 33% ರಷ್ಟು ಉತ್ಪಾದನೆ ಮತ್ತು 13% ರಷ್ಟು ಒಟ್ಟು ವಿಸ್ತೀರ್ಣವನ್ನು ಭಾರತ ಹೊಂದಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಬಾಳೆ ಹಣ್ಣು ಉತ್ಪಾದಿಸುವ ದೇಶವಾಗಿದೆ.

ಗಾಂಧಿ ಮಾರ್ಗದಲ್ಲಿ ಮುಂದುವರೆದು ತೀವ್ರಗೊಂಡ ರೈತ ಚಳುವಳಿಗಾಂಧಿ ಮಾರ್ಗದಲ್ಲಿ ಮುಂದುವರೆದು ತೀವ್ರಗೊಂಡ ರೈತ ಚಳುವಳಿ

ಭಾರತದಲ್ಲಿ ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಇವು ಬಾಳೆ ಬೆಳೆಯುವ ಪ್ರಮುಖ 5 ರಾಜ್ಯಗಳಾಗಿವೆ. ಬಾಳೆಹಣ್ಣಿನಲ್ಲಿ ಅಗತ್ಯ ಪೋಷಕಾಂಶಗಳಾದ ಶರ್ಕರ ಪಿಷ್ಟ, ಖಾದ್ಯ ನಾರು, ಜೀವಸತ್ವಗಳು, ಪೋಟ್ಯಾಷಿಯಂ, ರಂಜಕ ಮತ್ತು ಇತರೆ ಖನಿಜಾಂಶಗಳನ್ನು ಹೊಂದಿದೆ. ಬಾಳೆಯು ರುಚಿಕರ ಹಣ್ಣುಗಳನ್ನು ಕೊಡುವುದಲ್ಲದೆ ತನ್ನ ಇತರ ಇಲ್ಲಾ ಭಾಗಗಳನ್ನು ಸಹ ಉಪಯೋಗಿಸಬಹುದಾಗಿದ್ದು ಆದ್ದರಿಂದ ಬಾಳೆಯನ್ನು ಕಲ್ಪತರು ಎಂದು ಕರೆಲಾಗುತ್ತದೆ.

ಬಹು ಉಪಯೋಗಿ ವಸ್ತುಗಳನ್ನು ತಯಾರಿಸಬಹುದು

ಬಹು ಉಪಯೋಗಿ ವಸ್ತುಗಳನ್ನು ತಯಾರಿಸಬಹುದು

ಬಾಳೆಹಣ್ಣಿನ ಉಪಯೋಗ, ಸಂಸ್ಕರಣೆ ಮತ್ತು ಉತ್ಪನ್ನಗಳ ತಯಾರಿಕೆ ಮೇಲೆ ಸಾಕಷ್ಟು ಪ್ರಯೋಗಗಳಾಗಿದ್ದು, ಬಾಳೆಯ ಇತರ ಭಾಗಗಳಾದ ದಿಂಡು, ಮರಿಗಳು, ಎಲೆಗಳು ತಾಜ್ಯವಾಗಿ ಪರಿಗಣಿಸಿ ಅದರ ನಿರ್ವಹಣೆಗೆ ಬೆಳೆಗಾರರು ಒಂದು ಎಕರೆಗೆ 8000/- ರೂ. ವರೆಗೆ ಖರ್ಚು ಮಾಡಿ ರಸ್ತೆ ಬದಿಗೆ ಎಸೆಯುವುದು, ಜಮೀನಿನ ಬದುಗಳ ಮೇಲೆ ಇಟ್ಟು ಒಣಗಿಸಿ ಬೆಂಕಿ ಹಚ್ಚುವುದು ಮತ್ತು ಅಲ್ಲೆ ಜಮೀನನಲ್ಲಿ ಬಿಡುವುದು ವಾತಾವರಣದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ. ಈ ತಾಜ್ಯಗಳಿಂದ ಬಹುಮುಖ್ಯವಾದ ಬಾಳೆ ದಿಂಡಿನ ನಾರನ್ನು ಬೇರ್ಪಡಿಸಿ ಆ ನಾರಿನಿಂದ ಸಾಕಷ್ಟು ಬಹು ಉಪಯೋಗಿ ವಸ್ತುಗಳನ್ನು ತಯಾರಿಸಬಹುದಾಗಿದೆ.

ಯಾವುದೇ ಕಾರ್ಖಾನೆ ಸ್ಥಾಪಿತವಾಗಿಲ್ಲ

ಯಾವುದೇ ಕಾರ್ಖಾನೆ ಸ್ಥಾಪಿತವಾಗಿಲ್ಲ

1) ಬಾಳೆ ದಿಂಡು ತುಂಬಾ ತೂಕವುಳ್ಳದ್ದಾಗಿರುವುದರಿಂದ ಅದರ ಸಾಗಾಣಿಕೆ ಖರ್ಚುದಾಯಕ ಮತ್ತು ಕಷ್ಟದಾಯಕವಾಗಿದ್ದು, ಆದ್ದರಿಂದ ಮೊಬೈಲ್ ಘಟಕ ಮಾಡುವುದರಿಂದ ಈ ಸಮಸ್ಯೆ ಕಡಿವಾಣ ಹಾಕಬಹುದಾಗಿದೆ.


2) ಬಾಳೆಯ ದಿಂಡು ಏಕಕಾಲಕ್ಕೆ ಸಿಗುವುದಿಲ್ಲ ಆದಕಾರಣ ಹಣ್ಣಿನ ಗೊನೆ ತೆಗೆದ ಬಾಳೆ ಗಿಡವನ್ನು ಕತ್ತರಿಸಿದ ಹಾಗೆ ಬಿಟ್ಟು ಸಾಕಷ್ಟು ದಿಂಡಿಗಳು ದೊರೆತಾಗ ಕತ್ತರಿಸಿರಿ ಸಾಗಿಸಬಹುದಾಗಿದೆ ಏಕೆಂದರೆ ಬಾಳೆ ದಿಂಡನ್ನು ಕತ್ತರಿಸಿದ 24 ರಿಂದ 48 ಗಂಟೆಯೊಳಗೆ ನಾರು ತೆಗೆಯಬೇಕು.


3) ತಂತ್ರಜ್ಞಾನ ಕುರಿತು ಸಾಕಷ್ಟು ಮಾಹಿತಿ ಇಲ್ಲದೆ ಇರುವುದು ಮತ್ತು ಸಂಪೂರ್ಣ ತಂತ್ರಜ್ಞಾನವನ್ನು ನವಸಾರಿ ಕೃಷಿ ವಿಶ್ವವಿದ್ಯಾಲಯ ಗುಜರಾತನಿಂದ ಪಡೆದು ಘಟಕ ನಿರ್ಮಾಣಿಸಬೇಕು.

ಬಟ್ಟೆ ನೆಯ್ಗೆಯ ಉದ್ಯಮದಲ್ಲಿ ಸಾಕಷ್ಟು ಬೇಡಿಕೆ

ಬಟ್ಟೆ ನೆಯ್ಗೆಯ ಉದ್ಯಮದಲ್ಲಿ ಸಾಕಷ್ಟು ಬೇಡಿಕೆ

ಈ ನಿಟ್ಟಿನಲ್ಲಿ ತುಂಬಾ ಅವಕಾಶಗಳಿವೆ ಆದ್ದರಿಂದ ಬಾಳೆ ದಿಂಡಿನಿಂದ ನಾರನ್ನು ತೆಗೆಯಲು ಸಾಕಷ್ಟು ಕಚ್ಚಾವಸ್ತು ಲಭ್ಯವಿದ್ದು, ಒಂದು ಬಾಳೆ ದಿಂಡಿನಿಂದ 200 ಗ್ರಾಂ ನಾರು ಮತ್ತು 6 ಲೀಟರ್ ಜೀವರಸ ದೊರೆಯುತ್ತದೆ. ಬಾಳೆಯ ಪ್ರತಿಯೊಂದು ತಳಿಗಳು ಬೇರೆ ಬೇರೆ ಗುಣಮಟ್ಟದ ಮತ್ತು ಪ್ರಮಾಣದ ನಾರನ್ನು ಹೊಂದಿವೆ ಆದಕಾರಣ ನಾರಿನ ಪೈನೇಸ್ (ಹಸ್ತ ಕೌಶಲ್ಯ) ಶ್ರೇಣಿ 6.1 ರಿಂದ 11.4 ಟೆಕ್ಸ ಮತ್ತು ಬಲದ ಶ್ರೇಣಿ 22.4 ರಿಂದ 62 ಗ್ರಾಂ/ಟೆಕ್ಸ ರವರೆಗೆ ಬದಲಾಗುತ್ತದೆ ಈ ಶ್ರೇಣಿಯಲ್ಲಿ ಬರುವ ಎಲ್ಲ ನಾರು ಕಾಗದ ಕಾರ್ಖಾನೆ ಮತ್ತು ಬಟ್ಟೆ ನೆಯ್ಗೆಯ ಉದ್ಯಮದಲ್ಲಿ ಸಾಕಷ್ಟು ಬೇಡಿಕೆ ಇದೆ.

ಕಾಗದದ ಉತ್ಪನ್ನಗಳು

ಕಾಗದದ ಉತ್ಪನ್ನಗಳು

ಇದಲ್ಲದೇ ಕೃಷಿಗೆ ಬೇಕಾದ ಗೊಬ್ಬರ ಮತ್ತು ಸಸ್ಯ ಪ್ರಚೋದಕ ದ್ರಾವಣವನ್ನು ಸಾವಯವವಾಗಿ ತಯಾರಿಸಿಕೊಳ್ಳಬಹುದು. ಈ ಮೇಲೆ ತಿಳಿಸಿದ ಹಾಗೆ ಬಾಳೆಯ ದಿಂಡಿನ ಸಂಸ್ಕರಣೆಯಿಂದ ದೊರೆತ ನಾರಿನಿಂದ ತಯಾರಿಸಬಹುದಾದ ಉತ್ಪನ್ನಗಳು (ದಾರ, ಬಟ್ಟೆ, ಮ್ಯಾಟ, ಗೃಹ ಅಲಂಕರಣ, ಇನ್ನು ಮುಂತಾದವುಗಳು). ಕಾಗದದ ಉತ್ಪನ್ನಗಳು (ಆರ್ಟ ಪೇಪರ್, ಟಿಸ್ಸು ಪೇಪರ್, ನೋಟಿನ ಕಾಗದ, ಇನ್ನು ಇತ್ಯಾದಿ) ದಿಂಡಿನ ಒಳ ತಿರುಳು ಅಡುಗೆಗೆ ಸೂಕ್ತವಾಗಿದ್ದು, ಇದನ್ನು ಒಂದು ತರಕಾರಿಯಾಗಿ ಬಳಕೆ ಮಾಡಬಹುದಾಗಿದೆ, ಉಪ್ಪಿನ ಕಾಯಿ, ಚಟ್ನಿ, ಜ್ಯೂಸ್ ಇನ್ನು ಮುಂತಾದವುಗಳ ಜೊತೆಗೆ ಇದನ್ನು ಸಂಸ್ಕರಿಸಿ ಚಾಕಲೇಟ್ ಮತ್ತು ಪೌಡರ್ ಕೂಡಾ ತಯಾರಿಸಿ, ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ. ಬಾಳೆ ದಿಂಡಿನ ಒಳ ತಿರುಳು ಕಿಡ್ನಿ ಹರಳಿನ ಸಮಸ್ಯೆಗೆ ಮನೆ ಮದ್ದಾಗಿದೆ.

ನಾರಿನ ಉಪಯೋಗಗಳು ಮತ್ತು ಉತ್ಪನ್ನಗಳು

ನಾರಿನ ಉಪಯೋಗಗಳು ಮತ್ತು ಉತ್ಪನ್ನಗಳು

ಬಾಳೆಯ ದಿಂಡಿನ ನಾರು ಬಟ್ಟೆ (ನೇಯ್ದ ಮತ್ತು ನೇಯದ) ಉದ್ಯಮ ಜವಳಿ ಕಾರ್ಖಾನೆಗೆ ನೂಲು ಮತ್ತು ಬಟ್ಟೆ ತಯಾರಿಸಲು ಮುಖ್ಯ ಖಚ್ಚಾ ವಸ್ತುವಾಗಿದೆ. ಉತ್ತಮ ಗುಣಮಟ್ಟದ ಕೈಯಿಂದ ತಯಾರಿಸುವ ಕಾಗದ ಮೈಕ್ರೋಕೈಸ್ಟಲೈನ ಸೇಲುಲೋಜ (ಎಮ್.ಸಿ.ಸಿ - ಪಾರ್ಮಾಸಿಟಿಕ್ ಗ್ರೇಡ್ ಕರಕುಶಲ ವಸ್ತುಗಳ ತಯಾರಿಕೆಗೆ ಮತ್ತು ಹಗ್ಗ ತಯಾರಿಕೆ ತುಂಬಾ ಉಪಯೋಗ. ಬಾಳೆಯ ನಾರು ಪರಿಸರ ಸ್ನೇಹಿಯಾಗಿದ್ದು, ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಜೊತೆಗೆ ಇದು ನವೀಕರಿಸಬಹುದಾದ ಹೇರಳವಾಗಿ ದೊರೆಯುವ ಹೆಚ್ಚುವರಿ ಉತ್ಪನ್ನವಾಗಿದ್ದು ಹಾಗೂ ಇದರ ಸಂಸ್ಕರಣೆಯನ್ನು ಸ್ವಂತದ ರೈತರೆ ಮಾಡಬಹುದಾಗಿದೆ.

ಬಾಳೆಯ ನಾರು ಕೃತಕ ನಾರಿಗೆ ಉತ್ತಮ ಪರ್ಯಾಯ

ಬಾಳೆಯ ನಾರು ಕೃತಕ ನಾರಿಗೆ ಉತ್ತಮ ಪರ್ಯಾಯ

ಕಿಟಕಿಯ ಕರ್ಟ್ ಗಳು, ಮೊಬೈಲ್ ಕವರ್, ಪರ್ಸ್, ಮ್ಯಾಟ್, ಬ್ಯಾಗ್, ನ್ಯಾಪಕೀನ, ನೇಯ್ದ ಬಟ್ಟೆಗಳು, ನೇಯದ ಬಟ್ಟೆಯ ವಸ್ತುಗಳು, ಟೇಬಲ ಕ್ಲಾಥ್ಸ, ನೇಕಟೈಯ್ಸ, ನರ್ಸರಿ ಪೌಂಚಿಸ ಪಲೋನ್ ಇನ್ನು ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸಬಹುದಾಗಿದೆ.

ಬಾಳೆಯ ನಾರು ಕೃತಕ ನಾರಿಗೆ ಉತ್ತಮ ಪರ್ಯಾಯವಾಗಿದೆ ಮತ್ತು ಹತ್ತಿ ಮತ್ತು ಲೇನಿನ ಬಟ್ಟೆಗಿಂತಲೂ ಉತ್ತಮ ಹೊಳಪು ಹೊಂದಿದ್ದು, ತೇವಾಂಶವನ್ನು ಅತಿ ಬೇಗವಾಗಿ ಹೀರಿಕೊಳ್ಳುವ ಗುಣಧರ್ಮ ಕಡಿಮೆ. ತೂಕದ ಮತ್ತು ಕಡಿಮೆ ಬೆಲೆಯಲ್ಲಿ ದೊರಕುವ ಬಹಳ ದಿನಗಳವರೆಗೂ ಬಾಳಿಕೆ ಬರುವ ಉತ್ತಮ ಗುಣಮಟ್ಟದ ನಾರು ಇದಾಗಿದೆ. ಬಾಳೆಯ ದಿಂಡಿನ ನಾರನ್ನು ಕಾಗದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದನ್ನು ಬಹುಮುಖ್ಯವಾಗಿ ಆರ್ಟ್ ಪೇಪರ್ಸ್, ಡೇಕೋರೇಟೀವ್ ಟಿಸ್ಸು ಪೇಪರ್, ಪಿಲ್ಟರ್ ಪೇಪರ್, ಬಾಂಡ ಪೇಪರ್, ಪೇಪರ ಬ್ಯಾಗ್ಸ್, ಕ್ರಾಪ್ಟ ಪೇಪರ್ಸ ಮತ್ತು ಇನ್ನಿತರ ಕಾಗದದ ಉತ್ಪನ್ನಗಳಾದ ಗ್ರೀಟಿಂಗ್ ಕಾರ್ಡ್ ಇತ್ಯಾದಿಗಳು.

ಸಾವಯವ ದ್ರವ ಗೊಬ್ಬರ

ಸಾವಯವ ದ್ರವ ಗೊಬ್ಬರ

ಬಾಳೆಯ ದಿಂಡಿನಿಂದ ದೊರೆಯುವ ಜೀವರಸ (ಸಾಪ) ದಿಂದ ಈ ದ್ರವ ಗೊಬ್ಬರವನ್ನು ತಯಾರಿಸಿ ಸಾವಯವ ಕೃಷಿಯಲ್ಲಿ ಉಪಯೋಗ ಮಾಡಬಹುದಾಗಿದೆ. ಈ ತಂತ್ರಜ್ಞಾನವು (ಎನ್.ಎ.ಯು) ನವಸಾರಿ ಕೃಷಿ ವಿಶ್ವವಿದ್ಯಾಲಯ, ಗುಜರಾತ ಸಿದ್ಧಪಡಿಸಿದ್ದು, ಇದರ ಮೇಲೆ ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಈ ದ್ರವ ಗೊಬ್ಬರವನ್ನು ಮಾವು, ಚಿಕ್ಕು, ಬಾಳೆ, ತರಕಾರಿ ಬೆಳೆಗಳು, ಹೂವಿನ ಬೆಳೆಗಳು, ಕಬ್ಬು, ಭತ್ತ, ಹತ್ತಿ ಬೆಳೆಗಳ ಮೇಲೆ ಪ್ರಯೋಗ ಮಾಡಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ 10-15% ಅಧಿಕ ಇಳುವರಿಯನ್ನು ಸಾವಯವ ಕೃಷಿಯಲ್ಲಿ ಈ ಮೇಲಿನ ಬೆಳೆಗಳಲ್ಲಿ ಪಡೆದಿದ್ದಾರೆ.

ನವಸಾರಿ ಕೃಷಿ ವಿಶ್ವವಿದ್ಯಾಲಯ

ನವಸಾರಿ ಕೃಷಿ ವಿಶ್ವವಿದ್ಯಾಲಯ

ಕಾರಣ ಈ ದ್ರವ ಗೊಬ್ಬರವು ಬಾಳೆಯ ಜೀವರಸವನ್ನು (ಸಾಪ್) ಬೇಕಾದ ಎನ್.ಪಿ.ಕೆ ಮತ್ತು ಇತರೆ ಎಲ್ಲಾ ಲಘು ಹಾಗೂ ಸಣ್ಣ ಪೋಷಕಾಂಶಗಳು ಲಭ್ಯವಿದ್ದು, ಇದರ ಜೊತೆಗೆ ಸಸ್ಯ ಪ್ರಚೋದಕಗಳಾದ ಜಿಬ್ಬರಲಿಕ್ ಆಮ್ಲ ಮತ್ತು ಸೈಟೋಕೈನಿನ್ ಸಹಜವಾಗಿ ಲಬ್ಯವಿರುವುದರಿಂದ ಇದನ್ನು ಎಲ್ಲಾ ಬೆಳೆಗಳಿಗೂ ಸರಿಯಾದ ಹಂತದಲ್ಲಿ ಪರಿಷ್ಕೃತ ಪ್ರಮಾಣದಲ್ಲಿ ಬಳಸುವುದರಿಂದ ಸಾವಯವ ಕೃಷಿಯಲ್ಲಿ ಉಂಟಾಗುವ ಪೋಷಕಾಂಶಗಳ ಕೊರತೆಯನ್ನು ನೀಗಿಸುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ತಂತ್ರಜ್ಞಾನವು ನವಸಾರಿ ಕೃಷಿ ವಿಶ್ವವಿದ್ಯಾಲಯದ ಪೇಟೆಂಟ್ ಆಗಿದ್ದು, ಘಟಕ ನಿರ್ಮಾಣಿಸುವವರು ಅವರನ್ನು ಸಂಪರ್ಕಿಸಿ ತರಬೇತಿ ಪಡೆದುಕೊಂಡು ಈ ತಂತ್ರಜ್ಞಾನವು ಅಳವಡಿಸಿಕೊಳ್ಳಬಹುದಾಗಿದೆ.

ಗೊಬ್ಬರವನ್ನು ತಯಾರಿಸುವ ಕಂಪನಿಯ ಬ್ರ್ಯಾಂಡ್ ಗಳು

ಗೊಬ್ಬರವನ್ನು ತಯಾರಿಸುವ ಕಂಪನಿಯ ಬ್ರ್ಯಾಂಡ್ ಗಳು

ಒಂದು ಎಕರೆಗೆ 20 ರಿಂದ 25 ಟನ್ ವರೆಗೆ ಬಾಳೆಯ ದಿಂಡು ದೊರೆಯುತ್ತಿದ್ದು, ಅದರ ನಿರ್ವಹಣೆಗಾಗಿ ಬೆಳೆಗಾರರು 6000 ರಿಂದ 8000 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದು, ಜೊತೆಗೆ ಅದನ್ನು ಸುಟ್ಟು ಹಾಕುವುದರಿಂದ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೊರೆಯುವ ಕಚ್ಚಾ ವಸ್ತು ತ್ಯಾಜ್ಯವಾಗುತ್ತಿದ್ದು, ತುಂಬಾ ವಿಷಾದನೀಯ ಸಂಗತಿ.

ನಾರು ತೆಗೆಯುವ ಯಂತ್ರ ಒಂದೇ ಸಾಕು

ನಾರು ತೆಗೆಯುವ ಯಂತ್ರ ಒಂದೇ ಸಾಕು

ಈ ಮೇಲೆ ತಿಳಿಸಿದ ಹಾಗೆ ಬಾಳೆಯ ದಿಂಡಿನ ಸರಿಯಾದ ಸಂಸ್ಕರಣೆಯಿಂದ ಸಾಕಷ್ಟು ದಿನೋಪಯೋಗಿ ಅಗತ್ಯ ವಸ್ತುಗಳನ್ನು ತಯಾರಿಸಬಹುದ್ದಾಗಿದ್ದು, ಇವುಗಳಲ್ಲಿ ಸಾಕಷ್ಟು ವಸ್ತುಗಳು ಬೆಳೆಗಾರರು ಸಣ್ಣ ಸಂಸ್ಕರಣಾ ಘಟಕ ನಿರ್ಮಾಣ ಮಾಡಿಕೊಂಡು ತಮ್ಮ ಜಮೀನಲ್ಲೆ ತಯಾರಿಸಬಹುದವು ಬಾಳೆ ದಿಂಡಿನ ನಾರು, ಜೀವರಸ, ದಿಂಡಿ ಹೊಟ್ಟನ್ನು ಗೊಬ್ಬರವಾಗಿ ಉಪಯೋಗಿಸುವುದು ಇವೆಲ್ಲವನ್ನು ತಯಾರಿಸಲು ಬರೀ ಬಾಳೆ ದಿಂಡಿನಿಂದ ನಾರು ತೆಗೆಯುವ ಯಂತ್ರ ಒಂದೇ ಸಾಕು.

ಎಕರೆಗೆ 8000 ರಿಂದ 10000 ರೂ. ಪಡೆಯಬಹುದು

ಎಕರೆಗೆ 8000 ರಿಂದ 10000 ರೂ. ಪಡೆಯಬಹುದು

ಒಂದು ಯಂತ್ರದ ಬೆಲೆ 60,000 ರೂ. ದಿಂದ 1,30,000 ರೂ. ವರೆಗೂ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಆಸಕ್ತರು ಘಟಕ ಪ್ರಾರಂಭಿಸಲು ನವಸಾರಿ ಕೃಷಿ ವಿಶ್ವವಿದ್ಯಾಲಯದಿಂದ ತರಬೇತಿ ಪಡೆದು ಸ್ವಯಂಚಾಲಿತ (ಮೊಬೈಲ್) ಘಟಕ ನಿರ್ಮಾಣ ಮಾಡಿಕೊಳ್ಳುವುದು ತುಂಬಾ ಸೂಕ್ತ. ಇದರಿಂದ ಬಾಳೆ ಬೆಳೆಗಾರರು ದಿಂಡನ್ನು ಘಟಕಕ್ಕೆ ಮಾರಿ 8000 ರಿಂದ 10000 ರೂ. ವರೆಗೂ ಪ್ರತಿ ಎಕರೆಗೆ ಪಡೆಯಬಹುದಾಗಿದೆ. ತ್ಯಾಜ್ಯವಾಗುತ್ತಿದ್ದ ದಿಂಡಿನಿಂದ ವಿಘಟನೆಯಾಗಬಲ್ಲ ಮರುಬಳಕೆ ಮಾಡಬಹುದಾದ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಿ ಬಳಸುವದರಿಂದ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸಬಹುದಾಗಿದೆ.


ಲೇಖಕರು: ಪರಶುರಾಮ ಮಾ ಪಾಟೀಲ. ವಿಜ್ಞಾನಿ ತೋಟಗಾರಿಕೆ, ಐ.ಸಿ.ಏ.ಆರ್-ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿ, ಬೆಳಗಾವಿ-1,

English summary
Banana is the most frequently produced and consumed fruit crop in India, playing an important role in social and economic activities, and in our cultural heritage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X