Good News: ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ ಅಥವಾ ಬಾಳೆಹಣ್ಣು ಭಾಗ್ಯ, ಅಧಿಕೃತ ಆದೇಶ
ಕರ್ನಾಟಕ, ಆಗಸ್ಟ್, 10: ರಾಜ್ಯದಲ್ಲಿನ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಮಾಡಲಾಗವುದು ಎಂದು ಇತ್ತೀಚೆಗಷ್ಟೇ ಆದೇಶ ಹೊರಡಿಸಲಾಗಿದ್ದು, ಇಂದು ಇದನ್ನು ಅಧಿಕೃತವಾಗಿ ಜಾರಿ ಮಾಡಲಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ ಅಥವಾ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ, 280 ಕೋಟಿ ರೂಪಾಯಿ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಕ (2)ರ 2023-24ನೇ ಸಾಲಿನ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಗೆ (ಮಧ್ಯಾಹ್ನ ಉಪಹಾರ ಯೋಜನೆ) ಸಂಬಂಧಿಸಿದ ವಾರ್ಷಿಕ ಕ್ರಿಯಾ ಯೋಜನೆ ಅನುಮೋದನೆ ನೀಡಲಾದ ದಿನಾಂಕ: 15.05.2023 ಕೇಂದ್ರ ಸರ್ಕಾರದ ಪಿ.ಎ.ಬಿ. ಸಭಾ ನಡವಳಿಯಲ್ಲಿ Flexibility for New Intervention ಚಟುವಟಿಕೆಗಳಡಿ ಇದನ್ನು ಜಾರಿ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಬಳ್ಳಾರಿ, ವಿಜಯನಗರ ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1-8ನೇ ತರಗತಿಯ ಫಲಾನುಭವಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ 54 ದಿನಗಳಿಗೆ ಮೊಟ್ಟೆ ಅಥವಾ ಶೇಂಗಾ ಚಿಕ್ಕಿ ಅಥವಾ ಬಾಳೆ ಹಣ್ಣನ್ನು ವಿತರಿಸಲಾಗುವುದು. ಒಟ್ಟಾರೆ 4426.72 ಲಕ್ಷಗಳಿಗೆ (ಕೇಂದ್ರದ ಪಾಲಿನ ಅನುದಾನ ರೂ 2656.03 ಲಕ್ಷಗಳು ಮತ್ತು ರಾಜ್ಯದ ಪಾಲಿನ ಅನುದಾನ 1770.69 ಲಕ್ಷ ರೂಪಾಯಿ) ಅನುಮೋದನೆ ನೀಡಲಾಗಿರುತ್ತದೆ.
ಪ್ರಧಾನ ಮಂತ್ರಿ ಘೋಷಣ ಶಕ್ತಿ ನಿರ್ಮಾಣ ಯೋಜನೆ ಇವರ ಪ್ರಸ್ತಾವನೆಯಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿ ಘೋಷಿಸಿರುವಂತೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ 58,28,564 ವಿದ್ಯಾರ್ಥಿಗಳಿಗೆ, ಒಬ್ಬ ವಿದ್ಯಾರ್ಥಿಗೆ ಒಂದು ದಿನದ ಘಟಕ ವೆಚ್ಚ 6 ರೂ.ನಂತೆ, ವಾರದಲ್ಲಿ ಎರಡು ದಿವಸದಂತೆ ಒಟ್ಟು 80 ದಿನಗಳಿಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ ಅನುಮೋದನೆ ನೀಡಲು ಕೋರಲಾಗಿದೆ.
ಮೊಟ್ಟೆ/ಶೇಂಗಾ ಚಿಕ್ಕಿ/ಬಾಳೆಹಣ್ಣನ್ನು ವಿತರಿಸಲು ಅಗತ್ಯವಿರುವ 28000.00 ಲಕ್ಷ ರೂಪಾಯಿ ಅನುದಾನವನ್ನು ಭರಿಸಲು ಅನುಮೋದನೆ ನೀಡುವಂತೆ ಕೋರಲಾಗಿದೆ. ಕ್ರಮಾಂಕ(4)ರ ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ನೀಡಲಾಗಿರುವ Budget Adviceನಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿನ ಘೋಷಣೆಯನ್ನು ಅನುಷ್ಠಾನ ಮಾಡಲು ಅಗತ್ಯವಿರುವ 28000.00 ಲಕ್ಷ ರೂ. ಅನುದಾನವನ್ನು ಒದಗಿಸಿಕೊಳ್ಳುವಂತೆ ತಿಳಿಸಲಾಗಿದೆ.












Click it and Unblock the Notifications