Water Crisis: ನೀರಿನ ಬಿಕ್ಕಟ್ಟಿನಿಂದ ಬಾಳೆ ಎಲೆಗೆ ಹೆಚ್ಚಾಯ್ತು ಡಿಮ್ಯಾಂಡ್

ಬೆಂಗಳೂರು, ಏಪ್ರಿಲ್.05: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿನಿಂದ ನೀರಿನ ಕೊರತೆ ಎದ್ದು ಕಾಣುತ್ತಿದೆ. ನಿರಿಗಾಗಿ ಜನ ಪರದಾಡುತ್ತಿದ್ದಾರೆ. ಟ್ಯಾಂಕರ್‌ಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ನೀರಿನ ಬಳಕೆ ಕಡಿಮೆ ಮಾಡಲು ಜನ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ.

ಇದಕ್ಕಾಗಿಯೇ ಜನ ಬಳಸಿ ಬಿಸಾಡುವ ತಟ್ಟೆ, ಲೋಟಗಳನ್ನು ಬಳಸುತ್ತಿದ್ದರು. ಇದರ ನಡುವೆ ಹೊಸ ವರದಿಯಂತೆ ಬಾಲೆ ಎಲೆಗಳಿಗೆ ಬೇಡಿಕೆ ಹೆಚ್ಚಾಗುದೆ. ನಗರದಲ್ಲಿ ನೀರಿನ ಅಭಾವದ ತೀವ್ರ ಬಿಕ್ಕಟ್ಟಿನ ನಡುವೆ, ಬಾಳೆ ಎಲೆಗಳ ಬೆಲೆ 3, 5 ರೂಪಾಯಿಯಿಂದ 13 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಮಾರಾಟಗಾರರ ಮುಖದಲ್ಲಿ ಸಂತಸ ತುಂಬಿದೆ.

Water Crisis Bengaluru residents depends on banana leaves

ನಗರದ ಮಲ್ಲೇಶ್ವರಂ ಮಾರುಕಟ್ಟೆಯಲ್ಲಿನ ಮಾರಾಟಗಾರರು ಬಾಳೆ ಎಲೆ ಮತ್ತು ಬಳಸಿ ಬಿಸಾಡುವ ಪ್ಲೇಟ್‌ಗಳ ಮಾರಾಟದಲ್ಲಿ 30% ಕ್ಕಿಂತ ಹೆಚ್ಚಿನ ಹೆಚ್ಚಳ ಕಂಡಿದೆ ಎಂದು ಹೇಳಿದ್ದಾರೆ. ಮಲ್ಲೇಶ್ವರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಜನರು ನೀರಿನ ಬಳಕೆಯನ್ನು ಕಡಿಮೆ ಮಾಡಲು ಬಾಳೆ ಎಲೆಗಳು ಮತ್ತು ಬಿಸಾಡಬಹುದಾದ ಪ್ಲೇಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಲ್ಲೇಶ್ವರಂ ಮತ್ತು ಕುರುಬರಹಳ್ಳಿ ಮಾರುಕಟ್ಟೆಯಲ್ಲಿ ಬಾಳೆ ಎಲೆ ಮಾರಾಟ ಮಾಡುವ ಮಾರಾಟಗಾರರು ಹಿಂದೆ ಎಂದೂ ಕಂಡಿರದ ಬೇಡಿಕೆಯನ್ನು ಕಂಡಿದ್ದಾರೆ. ತುಂಬಾ ವರ್ಷಗಳ ಬಳಿಕ ಬಾಳೆ ಎಲೆಗಳಿಗೆ ಇಷ್ಟು ಡಿಮ್ಯಾಂಡ್ ಬಂದಿದೆ ಎಂದಿದ್ದಾರೆ. ಕೆಲವೊಂದು ಹಬ್ಬದ ಸಮಯದಲ್ಲಿ ಮಾತ್ರ ಇಂತಹ ಬೇಡಿಕೆ ಇರುತ್ತಿತ್ತು. ಈಗ ಜಾಸ್ತಿ ಬೇಡಿಕೆಯಿದೆ ಎನ್ನುತ್ತಾರೆ.

Water Crisis Bengaluru residents depends on banana leaves

ಬೇಡಿಕೆ ಜೊತೆ ಹೆಚ್ಚಾಯ್ತು ಬಾಳೆ ಎಲೆಗಳ ಬೆಲೆ!

ಬಾಳೆ ಎಲೆಗಳು ಪ್ರತಿ ಎಲೆಗೆ 3 ರೂಪಾಯಿ, 6 ರೂಪಾಯಿ, ದೊಡ್ಡ ಎಲೆಗಳಿಗೆ 8 ರೂಪಾಯಿಗಳ ವರಗೆ ಮಾರಾಟ ಕಾಣುತ್ತಿದ್ದವು. ಅದು ಎಲೆಗಳ ಗಾತ್ರದ ಮೇಲೆ ಬೆಲೆ ನಿಗದಿಯಾಗುತ್ತಿತ್ತು. ಆದರೆ, ಕಳೆದೊಂದು ತಿಂಗಳಿಂದ ಒಂದು ಎಲೆಯನ್ನು 9 ರಿಂದ 13 ರೂಪಾಯಿಯವರೆಗೆ ಮಾರಾಟ ಮಾಡಲಾಗುತ್ತಿದೆ. ಆರು ಎಲೆಗಳ ಸೆಟ್‌ಗೆ 70 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ.

ಕಳೆದ ಆರು ತಿಂಗಳುಗಳಲ್ಲಿ, ಬಾಳೆ ಎಲೆ ಮಾರಾಟಗಳು ಸೀಮಿತವಾಗಿತ್ತು. ಹಬ್ಬ ಹರಿದಿನಗಳ ಸಮಯದಲ್ಲಿ ಮಾತ್ರ ಬಾಳೆ ಎಲೆಗಳಿಗೆ ಭೇಡಿಕೆ ಹೆಚ್ಚಾಗುತ್ತದೆ. ಇಲ್ಲ ಸಮಾರಂಭಗಳು ಅಥವಾ ಮದುವೆಯ ಸಮಯದಲ್ಲಿ ಹೆಚ್ಚು ಹೆಚ್ಚು ಖರೀದಿ ಮಾಆಡುತ್ತಾರೆ. ಆದರೆ, ಈಗ ಜನರು ತಮ್ಮ ದಿನನಿತ್ಯದ ಭಾಗವಾಗಿ ಎಲೆಗಳನ್ನು ಊಟದ ತಟ್ಟೆಗಳಾಗಿ ಬಳಸುತ್ತಿದ್ದಾರೆ ಎಂದು ಮಾರಾಟಗಾರರು ಹೇಳುತ್ತಾರೆ.

ಫೆಬ್ರವರಿ ಮಧ್ಯದಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಆಗಿನಿಂದಲೇ ಅಡಿಕೆ ಎಲೆಗಳ ತಟ್ಟೆಗಳು ಮತ್ತು ಬಾಳೆ ಎಲೆಗಳ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ. ಬೆಲೆ ಏರಿಕೆಯ ಹೊರತಾಗಿಯೂ, ಗ್ರಾಹಕರು ಬಾಲೆ ಎಲೆಗಳನ್ನು ಖರೀದಿಸುತ್ತಿದ್ದಾರೆ. ಇದಿರಂದ ದಿನ ಪಾತ್ರೆಗಳನ್ನು ತೊಳೆಯುವ ನೀರಿನ ಉಳಿತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+