Karnataka Rain: ಬರಕ್ಕೆ ತತ್ತರಿಸಿದ್ದ ರೈತರಿಗೆ ಬಿರುಗಾಳಿ ಸಹಿತ ಬಂದ ಮಳೆಯ ಬರೆ
ಹುಬ್ಬಳ್ಳಿ, ಏಪ್ರಿಲ್ 14: ರಾಜ್ಯದಲ್ಲಿ ಅಲ್ಲಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಸಿಡಿಲಿಗೆ ಒಂದೆರಡು ಸಾವುಗಳು ಸಂಭವಿಸಿವೆ. ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 5 ಗಂಟೆಗೆ ವಿವಿಧೆಡೆ ಧಾರಾಕಾರವಾಗಿ ಜೋರು ಮಳೆ ಸುರಿಯಿತು.
ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿಯಿಡಿ ಮಳೆ ಮುಂದುವರೆಯಿತು. ಜೋರು ಗಾಳಿ ಮತ್ತು ಮಳೆ ರಭಸಕ್ಕೆ ತೋಟಗಾರಿಕೆ ಬೆಳಯಾದ ಮಾವು, ಬಾಳೆಗೆ ಹಾನಿ ಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಈ ಮಳೆ ಬರಗಾಲದಿಂದ ಕಂಗೆಟ್ಟ ರೈತರಿಗೆ ಮತ್ತೆ ಬರೆ ಎಳೆದಿದೆ.

ಪ್ರತಿ ಹಂತದಲ್ಲೂ ರೈತರ ಬೆಳೆದ ಮಾವು ಬಾಳೆಗಿಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಿದೆ. ಸತತ ನಾಲ್ಕು ವರ್ಷದಿಂದ ತಾಲೂಕಿನ ರೈತ ವರ್ಗ ನಿರಾಶೆ ಭಾವನೆ ಕಾಡುತ್ತಿದೆ. ಇದರಿಂದ ಎಷ್ಟೋ ರೈತ ವರ್ಗಕ್ಕೆ ಸಮಯಕ್ಕೆ ಸರಿಯಾಗಿ ಬರಗಾಲದಿಂದ ಯಾವುದೇ ರೀತಿಯ ಪರಿಹಾರವನ್ನು ಸರ್ಕಾರ ನೀಡಿಲ್ಲ.
ಪ್ರತಿ ಹಂತದಲ್ಲಿ ರೈತರಿಗೆ ನಷ್ಟ, ಸರ್ಕಾರದಿಂದ ಅನ್ಯಾಯ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಧೋರಣೆಯ ನೀತಿಯಿಂದ ಪ್ರತಿ ಹಂತದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ರೈತ ವರ್ಗದವರ ಏಳಿಗೆಗೆ ಸರ್ಕಾರ ಮುಂದಾಗ ಬೇಕಾಗಿದೆ. ರೈತರ ಬೆಳೆದ ಬೆಳಗೆ ಮಾರುಕಟ್ಟೆಯಲೆ ನಿಗದಿತ ದರವು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬರ ಪರಿಹಾರ ನೀಡಲು ರೈತರು ಆಗ್ರಹ
ಮಾರುಕಟ್ಟೆಯ ಏಜೆಂಟರ ಹಾವಳಿಯು ಹೆಚ್ಚಾಗಿದ್ದು ರಣಬಿಸಿಲಿಗೆ ಕೊಳವೆಬಾವಿ ನೀರು ಇಲ್ಲದೆ ಬೆಳೆಯು ಇಲ್ಲದೆ ಹಾಗೂ ಅತಿವೃಷ್ಟಿ ಹೀಗೆ ಹತ್ತು ಹಲವು ಸಮಸ್ಯೆಗಳು ರೈತ ವರ್ಗದವರಿಗೆ ಕಾಡುತ್ತಿದೆ. ಆದರೂ ರೈತ ವರ್ಗದವರು ಧೃತಿಗೆಡಬಾರದು ಧಾರವಾಡ ಜಿಲ್ಲೆಯಾದ್ಯಂತ ರೈತರಿಗೋಸ್ಕರ ಬರಗಾಲದ ಪ್ಯಾಕೇಜ್ ಗಳ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಲು ಮುಂದಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಭಾರಿ ಉತ್ತಮ ಮಳೆ ಬರದೆ, ಬಿತ್ತಿದ್ದ ಅಲ್ಪಸ್ವಲ್ಪ ಬೆಳೆಯೂ ಬಾರದೇ ಬರಗಾಲ ಎದುರಿಸಿದ್ದ ರೈತ ಸಾಲದ ಶೂಲಕ್ಕೆ ಸಿಲುಕಿದ್ದಾನೆ. ಜಿಲ್ಲೆಯಾದ್ಯಂತ ಎಷ್ಟು ರೈತರು ಆತ್ಮಹತ್ಯೆಗೆ ಮುಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಬರುತ್ತಿರುವ ಮಳೆಯಿಂದ ತೋಟಗಾರಿಕೆ ಬೆಳೆಗೆ ಸಂಕಷ್ಟ ಎದುರಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಕಾನೂನು ಜಾರಿಗೆ ಸರ್ಕಾರ ಮನಸ್ಸು ಮಾಡಲಿ
ರೈತರಿಗಾಗಿ ಸ್ವಾಮಿನಾಥನ್ ವರದಿ, ಎಂಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧರಿಸುತ್ತವಾ ಎಂದು ಕಾದು ನೋಡಬೇಕಾಗಿದೆ. ರೈತರ ಸಂಕಷ್ಟಕ್ಕೆ ವಿಶೇಷ ಒತ್ತು ನೀಡಬೇಕು ಕಲಘಟಗಿ ತಾಲೂಕು ಮಲೆನಾಡಿನ ಅಂಚಿನಲ್ಲಿ ಇದ್ದರೂ ರಣಬಿಸಲಿನ ಬರಗಾಲದ ತಾಪ ಒಂದು ಕಡೆಯಾದರೆ ಮತ್ತೊಂದೆಡೆ ರಬಸದ ಗಾಳಿ ಮಳೆಗೆ ಮಾವು, ಬಾಳೆ ಗಿಡಗಳಿಗೆ ಹಾನಿ ಯಾಗಿದೆ.

ಮಾವು, ಬಾಳೆ ಸೀಸನ್ ಆಗಿರುವ ಕಾರಣ ಈಗಷ್ಟೇ ಈ ಬೆಳೆಗಳಿಗೆ ಬೆಲೆ ಇದೆ. ಹೀಗೆ ಮಳೆ ಬಂದು ಅದು ಕೈಗೆ ಸಿಗದೇ ಹೋದರೆ ರೈತರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ತಾಲೂಕಿನ ಮಾವಿನ ತೋಟಗಳಲ್ಲಿ ಕಡಿಮೆ ಮಾವಿನ ಫಸಲು ಬಂದಿದ್ದು. ಬೆಳಗಿನ ಜಾವದ ಇಬ್ಬನಿಗೆ ಮಾವಿನ ಗಿಡದ ಹೂಗಳೆಲ್ಲ ಉದುರಿದವು ಮತ್ತೆ ನಿನ್ನೆ ಸುರಿದ ರಭಸದ ಗಾಳಿ ಮಳೆಗೆ ಮಾವಿನ ಗಿಡದಲ್ಲಿ ಇರುವಂತ ಮಾವುಗಳು ಗಾಳಿಯ ಹೊಡುತಕ್ಕೆ ಸಂಪೂರ್ಣ ನೆಲಕ್ಕೆ ಬಿದ್ದಿವೆ.
ಬೆಳವಣಿಗೆ ಹಂತದ ಬಾಳೆ ಬೆಳೆಗೆ ಹಾನಿ
ಜಿಲ್ಲೆಯ ಮಾವು ಬೆಳೆಗಾರರಾದ (ರೈತ) ಪರಶುರಾಮ ಎತ್ತಿನಗುಡ್ ಅವರು ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಅಡಿಕೆ ಮತ್ತು ಬಾಳೆ ಗಿಡಗಳನ್ನು ಬೆಳೆದದ್ದು ಒಳ್ಳೆಯ ಬೆಳವಣಿಗೆ ಹಂತದಲ್ಲಿತ್ತು. ನಿನ್ನೆ ಸುರಿದ ಧಾರಾಕಾರ ಗಾಳಿ ಮಳೆಯಿಂದ ಬಾಳೆ ಬೆಳೆ ಸಂಪೂರ್ಣ ಹಾಳಾಗಿದೆ.
ಈ ಬಾಳೆಯನ್ನೇ ನೆಚ್ಚಿಕುಂತಿದ್ದ ರೈತರಿಗೆ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತಾಗಿದೆ. ಪರಿಹಾರ ಒದಗಿಸಲು ತಾಲೂಕಿನ ಅಧಿಕಾರಿ ವರ್ಗ ಮುಂದಾಗ ಬೇಕಾಗಿದೆ ಎಂದುಅವರು ಆಗ್ರಹಿಸಿದರು.
ಗಿಡ ಮರ ಬೆಳೆಸಲು ಕರೆ
ಈ ಭಾಗದಲ್ಲಿ ಬರಗಾಲದ ಬೇಸಿಗೆ ಹೆಚ್ಚಾಗಿತ್ತು. ಬೆಳೆಯಿಲ್ಲದೆ ರೈತರಿಗೆ ಜಾನುವಾರುಗಳಿಗೆ ವನ್ಯ ಜೀವಿಗಳಿಗೆ ನೀರಿನ ಬಿಸಿತಟ್ಟಿದೆ. ಆದರೆ ರಬಸದ ಗಾಳಿ ಮಳೆಯಿಂದ ತಾಲೂಕಿನ ಮಾವಿನ ತೋಟಗಳ ಮಾವುಗಳು ಗಾಳಿಯ ಹೊಡದಕ್ಕೆ ನೆಲಕ್ಕೆ ಉದಿರಿ ಬಿದ್ದಿರುವ ದೃಶ್ಯ ಹಾಗೂ ಬಾಳಿಯ ತೋಟಗಳು ಗಾಳಿಯ ರಭಸಕ್ಕೆ ಹಾನಿಯಾಗಿವೆ. ಬೆಳೆ ನೆಲಕಚ್ಚಿವೆ.
ಮತ್ತೊಂದೆಡೆ ಪ್ರತಿ ವರ್ಷ ಒಂದರಿಂದ ಎರಡು ಎಕ್ಕರೆ ಸರ್ಕಾರದ ರಸ್ತೆ ಉದ್ದಕ್ಕೂ ಮರಗಿಡಗಳು ಪರಿಸರ ನಾಶವಾಗುತ್ತಿದೆ. ಬರಗಾಲ ತಪ್ಪಿಸಲು ಪರಿಸರವನ್ನು ರಕ್ಷಿಸಲು ಹಿರಿಯರು ಯುವಕ ಯುವತಿಯರು ಶಾಲೆಯ ವಿದ್ಯಾರ್ಥಿಗಳ ಮಕ್ಕಳು ಮರ ಗಿಡಗಳನ್ನು ಬೆಳೆಸಲು ಮುಂದಾಗಬೇಕಾಗಿದೆ ಎಂದು ರೈತ ಮಹಿಳೆ ಮಾಲಾಶ್ರೀ ಶಿವಕುಮಾರ್ ಹಿರೇಮಠ್ ಕರೆ ನೀಡಿದರು.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications