ಸಿನಿಮಾ ಭರ್ಜರಿ ಹಿಟ್‌ ಆಗುತ್ತಿರುವಾಗಲೇ ಆನಂದ ಮಹೀಂದ್ರಾ ಬಳಿ ಕ್ಷಮೆ ಕೇಳಿದ "ಲಿಟಲ್‌ ಹಾರ್ಟ್ಸ್‌" ನಿರ್ದೇಶಕ: ಈ ಸಾರಿಯ ಹಿಂದಿನ ಕ

ಸಿನಿಮಾ ನಿರ್ದೇಶಕ ಸಾಯಿ ಮಾರ್ತಾಂಡ್‌ ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು. ತಮ್ಮ ಚೊಚ್ಚಲ ಸಿನಿಮಾದ ಮೂಲಕವೇ ಕಮಾಲ್‌ ಮಾಡಿ ತೋರಿಸಿದ್ದಾರೆ. ಆದರೆ ಈ ಸಿನಿಮಾ ನಿರ್ದೇಶಕ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರುವ ಆನಂದ್‌ ಮಹೇಂದ್ರ ಅವರಿಗೆ ಸಾರಿ ಕೇಳಿರುವ ಪೋಸ್ಟ್‌ವೊಂದು ಇದೀಗ ಸಂಚಲನ ಮೂಡಿಸುತ್ತಿದೆ. ಇಷ್ಟಕ್ಕೂ ಸಿನಿಮಾ ನಿರ್ದೇಶಕನಿಗೂ ಆನಂದ್‌ ಮಹೇಂದ್ರ ಅವರಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಇಲ್ಲಿ ಬರಬಹುದು.

ನೆಟ್‌ವರ್ಕ್‌ ಎಂಜಿನಿಯರ್‌ ಆಗಿ ಕೆಲಸ:

ಇವರಿಬ್ಬರಿಗೂ ಖಂಡಿತಾ ಸಂಬಂಧವಿದೆ. ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಛಾಪು ಮೂಡಿಸುವ ಮೊದಲು, ಸಾಯಿ ಮಾರ್ತಾಂಡ್ ಟೆಕ್ ಮಹೀಂದ್ರಾದಲ್ಲಿ ನೆಟ್‌ವರ್ಕ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಮಹೀಂದ್ರಾದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದರಂತೆ.

Sai marthand

ಸಾಯಿ ಮಾರ್ತಾಂಡ್ ಸೋಶಿಯಲ್‌ ಮೀಡಿಯಾ ಪೋಸ್ಟ್‌:

ಸಾಯಿ ಮಾರ್ತಾಂಡ್ ನಿರ್ದೇಶನದ "ಲಿಟಲ್ ಹಾರ್ಟ್ಸ್" 2025 ರ ಅತಿದೊಡ್ಡ ಕಮರ್ಶಿಯಲ್‌ ಸಿನಿಮಾವಾಗಿ ಹೊರ ಹೊಮ್ಮಿದೆ. ಇದೀಗ ಇವರ ಕಾರ್ಪೊರೇಟ್ ಜೀವನವನ್ನು ಪ್ರತಿಬಿಂಬಿಸುವ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಸದ್ದು ಮಾಡುತ್ತಿದೆ.

Toxic: ಟಾಕ್ಸಿಕ್ ಚಿತ್ರದ 'ತಬಾಹಿ' ಹಾಡಿನಲ್ಲಿ ಕಥೆ ಲೀಕ್; ಲೇಡಿ ಸೂಪರ್‌ಸ್ಟಾರ್ ನಯನತಾರಾ ಎಂಟ್ರಿ ನೋಡಿ ಫ್ಯಾನ್ಸ್ ಶಾಕ್
Toxic: ಟಾಕ್ಸಿಕ್ ಚಿತ್ರದ 'ತಬಾಹಿ' ಹಾಡಿನಲ್ಲಿ ಕಥೆ ಲೀಕ್; ಲೇಡಿ ಸೂಪರ್‌ಸ್ಟಾರ್ ನಯನತಾರಾ ಎಂಟ್ರಿ ನೋಡಿ ಫ್ಯಾನ್ಸ್ ಶಾಕ್

ಈ ವರ್ಷದ ಏಪ್ರಿಲ್‌ನಲ್ಲಿ ಹಂಚಿಕೊಂಡ ಇನ್‌ಸ್ಟಾಗ್ರಾಮ್ ಪೋಸ್ಟ್‌ ಪ್ರಕಾರ ಏಪ್ರಿಲ್ 12ಕ್ಕೆ ಟೆಕ್ ಮಹೀಂದ್ರಾಕ್ಕೆ ರಾಜೀನಾಮೆ ನೀಡಿ ಮೂರು ವರ್ಷಗಳಾಗಿವೆ. 2021 ಮತ್ತು 2023ರವರೆಗೆ ಟೆಕ್‌ ಮಹೀಂದ್ರಾದಲ್ಲಿ ದುಡಿದಿರುವ ಸಾಯಿ ಮಾರ್ತಾಂಡ್‌ ಏಪ್ರಿಲ್ 12 2023ಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಅವಧಿಯಲ್ಲಿ ತಾವು ಕಂಪನಿಯ ಪುಣೆ ಕಚೇರಿಯಲ್ಲಿ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ.

"ಕೆಲಸದ ವೇಳೆ ಸಿನಿಮಾ ನೋಡುತ್ತಿದ್ದೆ":

ಸಾಯಿ, ಮಹೀಂದ್ರಾ ಟೆಕ್‌ ಕಂಪನಿಯಲ್ಲಿ ನೆಟ್‌ವರ್ಕ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರೂ, ವರ್ಕ್‌ ಫ್ರಂ ಹೋಂಗೆ ಅವಕಾಶವಿದ್ದ ಕಾರಣ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ ವರ್ಕ್‌ ಫ್ರಂ ಹೋಂನಲ್ಲಿ ಕಚೇರಿ ಕೆಲಸ ಮಾಡುವ ಬದಲು ಸಾಯಿ ಕೆಲಸದ ಸಮಯದಲ್ಲಿ ಮಲಗುತ್ತಿದ್ದರು, ತಮ್ಮ ಸೋದರಸಂಬಂಧಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಹಲವಾರು ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಳಗೊಂಡ ಸಂದರ್ಶನಗಳನ್ನು ಕೂಡಾ ನೋಡುತ್ತಿದ್ದರು. ಸಿನಿಮಾ ರಂಗದ ಬಗ್ಗೆ ಅವರಿಗೆ ಎಷ್ಟು ಆಸಕ್ತಿ ಇತ್ತು ಎನ್ನುವುದನ್ನು ಇದು ಸಾಬೀತು ಪಡಿಸುತ್ತದೆ.

ಪ್ರಭಾಸ್ 'ಫೌಜಿ' ಚಿತ್ರದ ಸೆಟ್‌ನಲ್ಲಿ ದುರಂತ: ವಿಷಕಾರಿ ಕೀಟ ಕಚ್ಚಿ ಐಸಿಯು ಸೇರಿದ ಖ್ಯಾತ ನಟ ರಾಜೇಶ್ ಶರ್ಮಾ
ಪ್ರಭಾಸ್ 'ಫೌಜಿ' ಚಿತ್ರದ ಸೆಟ್‌ನಲ್ಲಿ ದುರಂತ: ವಿಷಕಾರಿ ಕೀಟ ಕಚ್ಚಿ ಐಸಿಯು ಸೇರಿದ ಖ್ಯಾತ ನಟ ರಾಜೇಶ್ ಶರ್ಮಾ

ಟೆಕ್‌ ಮಹೀಂದ್ರಾ ದಿನಗಳ ನೆನಪು:

ಕ್ಷಮಿಸಿ ಆನಂದ್ ಮಹೀಂದ್ರಾ ಸರ್. ಎಲ್ಲಾ ನೆನಪುಗಳಿಗೆ ಧನ್ಯವಾದಗಳು ಟೆಕ್ ಮಹೀಂದ್ರಾ ಎಂದು ಸಾಯಿ ಮಾರ್ತಾಂಡ್‌ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆ ದಿನಗಳು ನನಗೆ ಯಾವಾಗಲೂ ವಿಶೇಷವಾಗಿರುತ್ತವೆ" ಎಂದಿದ್ದಾರೆ. ಜೊತೆಗೆ ಸಾಯಿ ತಮ್ಮ ಹಿಂದಿನ ಸಹೋದ್ಯೋಗಿಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಅವಧಿಯ ಉದ್ದಕ್ಕೂ ನೀಡಿದ ಬೆಂಬಲ ಮತ್ತು ತೋರಿದ ತಾಳ್ಮೆಗಾಗಿ ತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಸೆಂಡ್‌ ಆಫ್‌ ಉಡುಗೊರೆಯಾಗಿ ನೀಡಿದ ಸ್ಮಾರ್ಟ್ ವಾಚ್ ಬಗ್ಗೆಯೂ ಬರೆದಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡಿದ ಅಷ್ಟೂ ದಿನಗಳು ತಮ್ಮ ಜೀವನದ ಅತ್ಯಂತ ಸ್ಮರಣೀಯ ಹಂತಗಳಲ್ಲಿ ಒಂದಾಗಿದೆ ಎಂದು ವಿವರಿಸಿದ್ದಾರೆ.

"ಲಿಟಲ್ ಹಾರ್ಟ್ಸ್" ನೊಂದಿಗೆ ಅದ್ಭುತ ಪ್ರಗತಿ:

ಸಾಯಿ 2023 ರಲ್ಲಿ ತಂತ್ರಜ್ಞಾನ ಕ್ಷೇತ್ರವನ್ನು ಬಿಟ್ಟು ಚಲನಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು. ಎರಡು ವರ್ಷಗಳ ನಂತರ, ಮೌಳಿ ತನುಜ್ ಪ್ರಶಾಂತ್ ಮತ್ತು ಶಿವಾನಿ ನಗರಂ ನಟಿಸಿದ "ಲಿಟಲ್ ಹಾರ್ಟ್ಸ್" ಎಂಬ ರೊಮ್ಯಾಂಟಿಕ್‌ ಕಾಮಿಡಿ ಚಿತ್ರದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಾರೆ.

ಬಾಕ್ಸ್‌ ಆಫೀಸ್‌ ಹಿಟ್‌ ಸಿನಿಮಾ:

ಸುಮಾರು 2.4 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವು ಸರಿಸುಮಾರು 32 ದಿನಗಳಲ್ಲಿ ಪೂರ್ಣಗೊಂಡಿದೆ. ಈ ಚಿತ್ರವು ಉದ್ಯಮದ ನಿರೀಕ್ಷೆಗಳನ್ನು ಮೀರಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, "ಲಿಟಲ್ ಹಾರ್ಟ್ಸ್" ವಿಶ್ವಾದ್ಯಂತ ಸುಮಾರು 40 ಕೋಟಿ ರೂ. ಗಳಿಸಿದೆ. ಇದು 2025 ರಲ್ಲಿ ಬಿಡುಗಡೆಯಾದ ಅತ್ಯಂತ ಲಾಭದಾಯಕ ತೆಲುಗು ಚಿತ್ರಗಳಲ್ಲಿ ಒಂದಾಗಿದೆ.

ನಟರಾದ ಮಹೇಶ್ ಬಾಬು ಮತ್ತು ನಾನಿ ಕೂಡಾ ಲಿಟಲ್ ಹಾರ್ಟ್ಸ್ ಸಿನಿಮಾದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಇದು ತೆಲುಗು ಚಲನಚಿತ್ರೋದ್ಯಮದಲ್ಲಿ ಸಾಯಿ ಅವರ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬಾಕ್ಸ್‌ ಆಫೀಸ್‌ನಲ್ಲಿ ಇಷ್ಟು ದೊಡ್ಡ ಯಶಸ್ಸಿನ ಬಳಿಕ ಇದೀಗ "ಲಿಟಲ್ ಹಾರ್ಟ್ಸ್" ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಪ್ರಶಸ್ತಿ ಮನ್ನಣೆ:

ಬಾಕ್ಸ್‌ ಆಫೀಸ್‌ ಹಿಟ್‌ ಆದ ನಂತರ ಈ ಸಿನಿಮಾಗೆ ಉದ್ಯಮದ ಮನ್ನಣೆ ಕೂಡಾ ಸಿಕ್ಕಿದೆ. ಸಾಯಿ ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ ನಿರ್ದೇಶಕ ಗೌರವವನ್ನು ಪಡೆದಿದ್ದಾರೆ.
ಅವರ ಮುಂದಿನ ಪ್ರಾಜಕ್ಟ್‌ ಅನ್ನು ಕೂಡಾ ಘೋಷಿಸಿದ್ದಾರೆ. "ಲಿಟಲ್ ಹಾರ್ಟ್ಸ್" ಚಿತ್ರದ ಯಶಸ್ಸಿನ ನಂತರ, ಸಾಯಿ ಈಗಾಗಲೇ ತಮ್ಮ ಮುಂದಿನ ಚಿತ್ರಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಅವರು ಆದಿವಿ ಶೇಷ್ ನಟಿಸುವ ಇನ್ನೂ ಹೆಸರಿಡದ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಲು ಸಜ್ಜಾಗಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+